ಆರ್ಸಿಬಿ ಬಳಿ ಇರುವ ಆಟಗಾರನನ್ನು ಬಳಸಿ ಹನ್ನೊಂದರ ಬಲ ಹೇಗೆ ಕಟ್ಟಬಹುದು ಗೊತ್ತೇ?? ಇದಕ್ಕಿಂತ ಬೆಸ್ಟ್ ತಂಡ ಕಟ್ಟಲು ಸಾಧ್ಯವೇ?

ಆರ್ಸಿಬಿ ಬಳಿ ಇರುವ ಆಟಗಾರನನ್ನು ಬಳಸಿ ಹನ್ನೊಂದರ ಬಲ ಹೇಗೆ ಕಟ್ಟಬಹುದು ಗೊತ್ತೇ?? ಇದಕ್ಕಿಂತ ಬೆಸ್ಟ್ ತಂಡ ಕಟ್ಟಲು ಸಾಧ್ಯವೇ?

ನಮಸ್ಕಾರ ಸ್ನೇಹಿತರೇ ಈಗಾಗಲೇ ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆ ಮುಗಿದಿದ್ದು ಕ್ರಿಕೆಟ್ ಪ್ರೇಮಿಗಳು ಈಗಾಗಲೇ ಈ ಬಾರಿಯ ಐಪಿಎಲ್ ನಲ್ಲಿ ತಮ್ಮ ನೆಚ್ಚಿನ ತಂಡಗಳು ಹೇಗೆ ಪ್ರದರ್ಶನ ನೀಡಲಿವೆ ಎಂಬುದರ ಕುರಿತಂತೆ ಕಾತರರಾಗಿದ್ದಾರೆ. ನಮ್ಮೆಲ್ಲರ ಹೆಮ್ಮೆಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೂಡ ಈಗಾಗಲೇ ಕೆಲವು ಭರವಸೆ ಮೂಡಿಸುವಂತಹ ಆಟಗಾರರನ್ನು ಕೋಟಿ ಕೋಟಿ ಸುರಿದು ಖರ್ಚು ಮಾಡಿ ಕಳುಹಿಸಿದ್ದು ಅವರು ಹೇಗೆ ತಂಡಕ್ಕೆ ನೆರವಾಗಲಿದ್ದಾರೆ ಎಂಬುದರ ಕುರಿತಂತೆ ಕೂಡ ಕುತೂಹಲ ಮೂಡಿದೆ.

ಈ ಬಾರಿ ತಂಡದಲ್ಲಿ ದೊಡ್ಡ ದೊಡ್ಡ ಹೆಸರುಗಳು ಕೂಡ ಕೇಳುತ್ತಿದ್ದು ಈಬಾರಿಯ ಪ್ಲೇಯಿಂಗ್ 11 ಹೇಗೆ ಇರಲಿದೆ ಎಂಬುದರ ಕುರಿತಂತೆ ಚರ್ಚೆಗಳು ಪ್ರಾರಂಭವಾಗಿದೆ. ಇಂದಿನ ಲೇಖನಿಯಲ್ಲಿ ಕೂಡ ನಾವು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬಲಿಷ್ಠ ಹನ್ನೊಂದರ ಕುರಿತಂತೆ ಹೇಳಲು ಹೊರಟಿದ್ದೇವೆ. ಈ ಪ್ಲೇಯಿಂಗ್ ಹನ್ನೊಂದರಲ್ಲಿ ಯಾರೆಲ್ಲಾ ಯಾವ ಸ್ಥಾನವನ್ನು ನಿಭಾಯಿಸಲಿದ್ದಾರೆ ಎಂಬುದರ ಕುರಿತಂತೆ ಕೂಡ ನಿಮಗೆ ವಿವರವಾಗಿ ಹೇಳಲಿದ್ದೇವೆ ಲೇಖನಿಯನ್ನು ತಪ್ಪದೆ ಕೊನೆಯವರೆಗೂ ಓದಿ.

ವಿರಾಟ್ ಕೊಹ್ಲಿ ನಾಯಕನ ಸ್ಥಾನದಿಂದ ಹೊರಬಂದಿರುವುದರಿಂದ ಆಗಿ ಓಪನರ್ ಆಗಿ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ. ವಿರಾಟ್ ಕೊಹ್ಲಿ ರವರಿಗೆ ಆರಂಭಿಕ ಆಟಗಾರನಾಗಿ ಡುಪ್ಲೆಸಿಸ್ ರವರು ಸಾಥ್ ನೀಡಲಿದ್ದಾರೆ. ಚೆನ್ನೈನಲ್ಲಿ ಈಗಾಗಲೇ ಇವರು ಮ್ಯಾಚ್ ವಿನ್ನರ್ ಆಗಿ ಪರ್ಫಾರ್ಮೆನ್ಸ್ ನೀಡಿದ್ದಾರೆ. ಒನ್ ಡೌನ್ ಸ್ಥಾನದಲ್ಲಿ ಯುವ ಆಟಗಾರ ಮಹಿಪಾಲ್ ಲೊಮ್ರೋರ್ ಸ್ಥಾನ ಪಡೆಯಲಿದ್ದಾರೆ.

ನಾಲ್ಕನೇ ಸ್ಥಾನದಲ್ಲಿ ಆಸ್ಟ್ರೇಲಿಯಾದ ಆಲ್-ರೌಂಡರ್ ಗ್ಲೆನ್ ಮ್ಯಾಕ್ಸ್ವೆಲ್ ಬ್ಯಾಟ್ ಬೀಸಲಿದ್ದಾರೆ. ಶಹಬಾಜ್ ಮಹಮದ್ ಐದನೇ ಸ್ಥಾನದಲ್ಲಿ ಹಾಗೂ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ದಿನೇಶ್ ಕಾರ್ತಿಕ್ ನಂತರದ ಸ್ಥಾನದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವನಿಂದು ಹಸರಂಗ ಆಲ್-ರೌಂಡರ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಪರ್ಪಲ್ ಕ್ಯಾಪ್ ಪಟೇಲ್ ಹರ್ಷಲ್ ಪಟೇಲ್ ಮೊಹಮ್ಮದ್ ಸಿರಾಜ್ ಹಾಗೂ ಆಸ್ಟ್ರೇಲಿಯಾದ ಜೋಶ್ ಹೆಜಲ್ ವುಡ್ ಜೊತೆಗೆ ಸ್ಪಿನ್ನರ್ ಕರ್ಣ್ ಶರ್ಮಾ ಕೂಡ ಕಾಣಿಸಿಕೊಳ್ಳಲಿದ್ದಾರೆ. ಕ್ರಿಕೆಟ್ ಪಂಡಿತರ ಪ್ರಕಾರ ಇದು ಬಲಿಷ್ಠ ಪ್ಲೇಯಿಂಗ್ 11 ಎಂದು ಹೇಳಲಾಗುತ್ತದೆ. ನಿಮ್ಮ ಆಯ್ಕೆಯನ್ನು ತಪ್ಪದೇ ನಮ್ಮೊಂದಿಗೆ ಹಂಚಿಕೊಳ್ಳಿ.