ಪ್ರತಿ ತಂಡದಂತೆ ತನ್ನ ಲಿಸ್ಟ್ ಸಿದ್ಧಪಡಿಸಿರುವ ಆರ್ಸಿಬಿ, ಈ ಟಾಪ್ 6 ಆಟಗಾರರೇ ಆರ್ಸಿಬಿಯ ಪ್ರಮುಖ ಟಾರ್ಗೆಟ್, ಯಾರ್ಯಾರು ಗೊತ್ತೇ??

ಪ್ರತಿ ತಂಡದಂತೆ ತನ್ನ ಲಿಸ್ಟ್ ಸಿದ್ಧಪಡಿಸಿರುವ ಆರ್ಸಿಬಿ, ಈ ಟಾಪ್ 6 ಆಟಗಾರರೇ ಆರ್ಸಿಬಿಯ ಪ್ರಮುಖ ಟಾರ್ಗೆಟ್, ಯಾರ್ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಐಪಿಎಲ್ ನ ಮೆಗಾ ಹರಾಜು ಇದೇ ಶನಿವಾರ ಮತ್ತು ಭಾನುವಾರ ನಡೆಯಲಿದೆ. ಈಗಾಗಲೇ ಎಲ್ಲಾ ಫ್ರಾಂಚೈಸಿಗಳು ಬಿಡುವಿಲ್ಲದ ಸಿದ್ದತೆಯನ್ನು ನಡೆಸಿದ್ದು, ತಾವು ಖರೀದಿಸಬಹುದಾದ ಆಟಗಾರರ ಪಟ್ಟಿಯನ್ನು ತಯಾರಿಸಿವೆ. ಈ ರೀತಿ ಆರ್ಸಿಬಿ ಸಹ ಪಟ್ಟಿ ತಯಾರಿಸಿಕೊಂಡಿದ್ದು, ಈ ಆರು ಆಟಗಾರರನ್ನು ಶತಾಯಗತಾಯ ಖರೀದಿಸಲೇಬೇಕೆಂದು ನಿರ್ಧರಿಸಿದೆ. ಬನ್ನಿ ಆ ಆಟಗಾರರು ಯಾರು ಎಂದು ತಿಳಿಯೋಣ.

1.ಯುಜವೇಂದ್ರ ಚಾಹಲ್ : ಆರ್ಸಿಬಿ ಪಾಲಿನ ಆಪತ್ಭಾಂದವ, ಯಶಸ್ವಿ ಬೌಲರ್. ಹಲವಾರು ಭಾರಿ ಆರ್ಸಿಬಿ ಪಾಲಿಗೆ ವಿಕೇಟ್ ಟೇಕಿಂಗ್ ಬೌಲರ್ ಆದ ಯುಜಿಯನ್ನ ಈ ಭಾರಿ ಆರ್ಸಿಬಿ ರಿಟೇನ್ ಮಾಡಿರಲಿಲ್ಲ. ಆದರೇ ಈಗ ಹರಾಜಿನಲ್ಲಿ ಶತಾಯಗತಾಯವಾಗಿ ಯುಜವೇಂದ್ರ ಚಾಹಲ್ ರನ್ನ ಖರೀದಿಸಿ, ಪುನಃ ಆರ್ಸಿಬಿ ಜೆರ್ಸಿ ತೋಡಿಸಲು, ಮನಸ್ಸು ಮಾಡಿದೆ.

2.ಜೇಸನ್ ಹೋಲ್ಡರ್ : ವಿಂಡೀಸ್ ನ ಈ ದೈತ್ಯ ಆಲ್ ರೌಂಡರ್ ಬ್ಯಾಟಿಂಗ್, ಬೌಲಿಂಗ್ ಮಾತ್ರವಲ್ಲದೇ, ನಾಯಕತ್ವ ಸ್ಥಾನ ಸಹ ನಿಭಾಯಿಸಬಲ್ಲರು. ಆ ಕಾರಣಕ್ಕೆ ಇವರನ್ನು ಸಹ ಖರೀದಿಸಲು ಮ್ಯಾನೇಜ್ ಮೆಂಟ್ ತೀರ್ಮಾನಿಸಿದೆ.

3.ಕಗಿಸೋ ರಬಾಡ : ಸೌತ್ ಆಫ್ರಿಕಾದ ಈ ಸ್ಟಾರ್ ವೇಗಿ , ಟಿ 20 ಕ್ರಿಕೇಟ್ ನ ಚಾಂಪಿಯನ್ ಬೌಲರ್. ಅವರು ತಂಡದಲ್ಲಿದ್ದರೇ ಆನೆ ಬಲ. ಸಿರಾಜ್ ಜೊತೆ ಆರಂಭದಲ್ಲಿ ದಾಳಿ ಮಾಡಲು, ಕಗಿಸೋ ರಬಾಡರನ್ನ ತಂಡಕ್ಕೆ ಸೇರಿಸಿಕೊಳ್ಳಲು ಆರ್ಸಿಬಿ ಪ್ಲಾನ್ ಮಾಡಿದೆ.

4.ಹರ್ಷಲ್ ಪಟೇಲ್ : ಕಳೆದ ಭಾರಿಯ ಪರ್ಪಲ್ ಕ್ಯಾಪ್ ವಿಜೇತರಾಗಿದ್ದ ಹರ್ಷಲ್ ಪಟೇಲ್, ಆರ್ಸಿಬಿ ಡೆತ್ ಓವರ್ ಸ್ಪೆಷಲಿಸ್ಟ್ ಆಗಿದ್ದರು. ಹಾಗಾಗಿ ಈ ಭಾರಿ ಸಹ ಅವರನ್ನು ಹರಾಜಿನಲ್ಲಿ ಖರೀದಿಸಲು ಆರ್ಸಿಬಿ ತೀರ್ಮಾನಿಸಿದೆ.

5.ಇಶಾನ್ ಕಿಶನ್ – ಆರಂಭಿಕ ಕಮ್ ವಿಕೇಟ್ ಕೀಪರ್ ಆಗಿ ಬ್ಯಾಟ್ ಬೀಸುವ ಇಶಾನ್ ಕಿಶನ್ ಮೇಲೂ ಸಹ ಕಣ್ಣಿಟ್ಟಿದೆ. ಇಶಾನ್ ಕಿಶನ್ ಆರ್ಸಿಬಿ ಪಾಳಯ ಸೇರಿಕೊಂಡರೇ, ಆರ್ಸಿಬಿ ಬ್ಯಾಟಿಂಗ್ ಮತ್ತಷ್ಟು ಬಲಿಷ್ಠವಾಗುತ್ತದೆ.

6.ಟಿಮ್ ಡೇವಿಡ್ : ಕಳೆದ ಭಾರಿ ಆರ್ಸಿಬಿ ಪಾಳಯದಲ್ಲಿದ್ದ.ಟಿಮ್ ಡೇವಿಡ್ ಕೇವಲ ಒಂದು ಪಂದ್ಯ ಆಡಿದ್ದರು. ಕೆಳ ಕ್ರಮಾಂಕದಲ್ಲಿ ಬಿಗ್ ಹಿಟ್ ಹೊಡೆಯಬಲ್ಲ ಹಾಗೂ ಉತ್ತಮ ಆಫ್ ಸ್ಪಿನ್ ಬೌಲಿಂಗ್ ಮಾಡುವ ಇವರ ಮೇಲೆ ಸಹ ಆರ್ಸಿಬಿ ಫ್ರಾಂಚೈಸಿ ಕಣ್ಣಿಟ್ಟಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.