ತಂಡದ ಬಗ್ಗೆ ಗಂಭೀರ ಆರೋಪ ಮಾಡಿದ ರಹಾನೆ, ತಂಡದ ಇತರ ಆಟಗಾರರ ಬಗ್ಗೆ ಹೆಲ್ಲಿದ್ದೆನು ಗೊತ್ತೇ??

ತಂಡದ ಬಗ್ಗೆ ಗಂಭೀರ ಆರೋಪ ಮಾಡಿದ ರಹಾನೆ, ತಂಡದ ಇತರ ಆಟಗಾರರ ಬಗ್ಗೆ ಹೆಲ್ಲಿದ್ದೆನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಅಜಿಂಕ್ಯ ರಹಾನೆ ಭಾರತ ತಂಡ ಕಂಡ ಉತ್ತಮ ಕ್ರಿಕೇಟಿಗ. ಆರಂಭಿಕನಾಗಿ ವೃತ್ತಿ ಆರಂಭಿಸಿದ ಅವರು, ಭಾರತ ತಂಡಕ್ಕಾಗಿ ಹಲವಾರು ಕ್ರಮಾಂಕಗಳಲ್ಲಿ ಆಡಿದ್ದಾರೆ. ತಂಡದ ಉಪನಾಯಕರಾಗಿ, ನಾಯಕರಾಗಿ ಸಹ ಸೇವೆ ಸಲ್ಲಿಸಿದ್ದಾರೆ. ವಿರಾಟ್ ಅನುಪಸ್ಥಿತಿಯಲ್ಲಿ ಆಸ್ಟ್ರೇಲಿಯಾದಲ್ಲಿ ತಂಡದ ನೇತೃತ್ವವಹಿಸಿ, ಐತಿಹಾಸಿಕ ಸರಣಿ ಜಯದ ಹಿಂದೆ ಅಜಿಂಕ್ಯಾ ರಹಾನೆ ಪಾತ್ರ ದೊಡ್ಡದಿದೆ.

ಆದರೇ ಇತ್ತೀಚಿನ ದಿನಗಳಲ್ಲಿ ರಹಾನೆ ಬ್ಯಾಟ್ ನಿಂದ ರನ್ ಬರುತ್ತಿಲ್ಲ. ತಂಡದಿಂದಲೇ ಹೊರಬೀಳುವ ಅಪಾಯದಲ್ಲಿರುವ ರಹಾನೆಗೆ ಕಡೆಯ ಅವಕಾಶ ಎಂಬಂತೆ, ಮುಂಬೈ ರಣಜಿ ತಂಡದಲ್ಲಿ ಆಡಿ ಫಾರ್ಮ್ ಸಾಬೀತುಪಡಿಸಲು ಬಿಸಿಸಿಐ ನಿರ್ದೇಶನ ನೀಡಿದೆ. ಇದರ ಜೊತೆ ಪೃಥ್ವಿ ಷಾ ನಾಯಕತ್ವದ ಅಡಿ ಆಡಬೇಕಾದ ಸಂದಿಗ್ದತೆಗೆ ರಹಾನೆ ಸಿಲುಕಿದ್ದಾರೆ. ಇನ್ನು ಈ ಬಗ್ಗೆ ಮನಬಿಚ್ಚಿ ಮಾತನಾಡಿರುವ ರಹಾನೆ ಕೆಲವೊಂದು ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಹೌದು ರಹಾನೆ ಹೇಳಿಕೆ ಇಂತಿವೆ. ನನ್ನ ವೃತ್ತಿ ಜೀವನ ಅಂತ್ಯಗೊಂಡಿದೆ ಎಂದು ಹೇಳುವವರಿಗೆ ಕ್ರಿಕೇಟ್ ಬಗ್ಗೆ ಜ್ಞಾನವಿಲ್ಲ.

ಆಸ್ಟ್ರೇಲಿಯಾದಲ್ಲಿ ನಾನು ಏನು ಮಾಡಿದ್ದೆ ಎಂಬುದು ಎಲ್ಲರಿಗೂ ತಿಳಿದಿದೆ. ಇದರ ಜೊತೆ ರೆಡ್ ಬಾಲ್ ಕ್ರಿಕೇಟ್ ನಲ್ಲಿ ನನ್ನ ಕೊಡುಗೆ ತಂಡಕ್ಕೆ ಏನಾಯಿತು ಎಂಬುದು ಸಹ ತಿಳಿದಿದೆ. ಆಸ್ಟ್ರೇಲಿಯಾ ನೆಲದಲ್ಲಿ ಆಸ್ಟ್ರೇಲಿಯಾ ತಂಡವನ್ನು ಬಗ್ಗುಬಡಿಯಲು ನಾನು ರಣತಂತ್ರಗಳನ್ನು ರೂಪಿಸಿ, ಯಶಸ್ವಿಯಾಗಿ ಕಾರ್ಯರೂಪಕ್ಕೆ ತಂದೆ.ಆದರೇ ಅದರ ಶ್ರೇಯಸ್ಸನ್ನು ನಾನು ಪಡೆದುಕೊಳ್ಳಲಿಲ್ಲ, ಬದಲಿಗೆ ಬೇರೆಯವರು ಪಡೆದುಕೊಂಡರು.ನಾನೂ ಕ್ರಿಕೇಟ್ ನಲ್ಲಿ ಭಾರತ ತಂಡ ಗೆಲ್ಲುವುದನ್ನು ಮಾತ್ರ ಬಯಸುತ್ತೇನೆ ಹೊರತು, ವೈಯುಕ್ತಿಕ ಹಿತಾಸಕ್ತಿಯ ಕಡೆಯಲ್ಲ ಎಂದು ಹೇಳಿದ್ದಾರೆ. ರಹಾನೆ ಪರೋಕ್ಷವಾಗಿ ಯಾರಿಗೆ ಟಾಂಗ್ ನೀಡಿದ್ದಾರೆ ಎಂಬ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿ ನಡೆಯುತ್ತಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.