ಕರುನಾಡ ವಾಣಿ
ಇದು ನಿಮ್ಮ ಧ್ವನಿ

ನಾಳಿನ ಹರಾಜಿಗೆ ಭರ್ಜರಿ ತಯಾರಿ ನಡೆಸಿರುವ ಹೊಸ ತಂಡ ಅಹಮದಬಾದ್ ಟೈಟಾನ್ಸ್ ಟಾರ್ಗೆಟ್ ಮಾಡಲಿರುವ ಟಾಪ್ ಆಟಗಾರರು ಯಾರಂತೆ ಗೊತ್ತೇ??

17

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಐಪಿಎಲ್ ಹರಾಜಿಗೆ ಕ್ಷಣಗಣನೆ ಆರಂಭವಾಗಿದೆ. ಈ ಭಾರಿ ಹೊಸ ತಂಡವಾಗಿರುವ ಅಹಮದಾಬಾದ್ ಟೈಟನ್ಸ್ ತಂಡ ಸಹ ಸಾಕಷ್ಟು ಸಿದ್ದತೆ ನಡೆಸಿದೆ. ಈಗಾಗಲೇ ಹರಾಜಿಗೂ ಮುನ್ನ ಹಾರ್ದಿಕ್ ಪಾಂಡ್ಯ, ರಶೀದ್ ಖಾನ್ ಹಾಗೂ ಶುಭಮಾನ್ ಗಿಲ್ ರನ್ನು ರಿಟೇನ್ ಮಾಡಿಕೊಂಡಿದೆ. ಈಗ ಹರಾಜಿನಲ್ಲಿ ಅಹಮದಾಬಾದ್ ತಂಡ ಖರೀದಸಲಿರುವ ಸಂಭವನೀಯ ಆಟಗಾರರ ಪಟ್ಟಿ ಇಂತಿದೆ.

1.ಕೃನಾಲ್ ಪಾಂಡ್ಯ – ಮುಂಬೈ ಇಂಡಿಯನ್ಸ್ ತಂಡದ ಆಲ್ ರೌಂಡರ್ ಆಗಿದ್ದ, ಕೃನಾಲ್, ಹಾರ್ದಿಕ್ ಪಾಂಡ್ಯರ ಸಹೋದರ. ಇವರನ್ನು ಅಹಮದಾಬಾದ್ ತಂಡ ಖರೀದಿಸುವ ಸಾಧ್ಯತೆ ಹೆಚ್ಚು ಎಂದೇ ಹೇಳಲಾಗುತ್ತಿದೆ.

2.ಅಂಬಟಿ ರಾಯುಡು : ವಿಕೇಟ್ ಕೀಪರ್ ಕಮ್ ಬ್ಯಾಟ್ಸಮನ್ ಎದುರು ನೋಡುತ್ತಿರುವ ಅಹಮದಾಬಾದ್ ತಂಡ ಅನುಭವಿ ಮಧ್ಯಮ ಕ್ರಮಾಂಕದ ಬ್ಯಾಟ್ಸಮನ್ ಆಗಿರುವ ಅಂಬಟಿ ರಾಯುಡರನ್ನ ಖರೀದಿಸಲು ಚಿಂತಿಸಿದೆ. ರಾಯುಡು 2 ಕೋಟಿ ಮೂಲಬೆಲೆ ಹೊಂದಿದ್ದಾರೆ.

3.ಜೈದೇವ್ ಉನದ್ಕತ್ : ಏಡಗೈ ವೇಗಿ ಆಗಿರುವ ಜೈದೇವ್ ಉನದ್ಕತ್ ಟಿ 20 ಕ್ರಿಕೇಟ್ ನಲ್ಲಿ ಹಲವಾರು ಭಾರಿ ಬ್ಯಾಟ್ಸಮನ್ ಗಳಿಗೆ ಕಂಟಕವಾಗಿದ್ದಾರೆ. ಹಾಗಾಗಿ ಇವರನ್ನು ಖರೀದಿಸುವುದರ ಜೊತೆಗೆ ಲೋಕಲ್ ಬಾಯ್ ಇಮೇಜ್ ಕಡೆ ಸಹ ಫ್ರಾಂಚೈಸಿ ಗಮನವಿಟ್ಟಿದೆ.

4.ಜೇಸನ್ ರಾಯ್ : ಇಂಗ್ಲೆಂಡ್ ತಂಡದ ಘಾತಕ ಆರಂಭಿಕ ಬ್ಯಾಟ್ಸಮನ್ ಆಗಿರುವ ಜೇಸನಾ ರಾಯ್ ರನ್ನು ಖರೀದಿಸಿ, ಅವರನ್ನು ಶುಭಮಾನ್ ಗಿಲ್ ಜೊತೆ ಇನ್ನಿಂಗ್ಸ್ ಆರಂಭಿಸುವ ಪ್ಲಾನ್ ಹಾಕಿಕೊಂಡಿದೆ‌. ಹೀಗಾಗಿ 2 ಕೋಟಿ ಮೂಲಬೆಲೆ ಹೊಂದಿರುವ ಜೇಸನ್ ರಾಯ್ ಗೆ ಬಲೆ ಬೀಸುವುದು ಖಚಿತ.

5.ಟ್ರೆಂಟ್ ಬೌಲ್ಟ್ : ಏಡಗೈ ವೇಗೀ ಬೌಲ್ಟ್ ಹರಾಜಿನಲ್ಲಿ ಬಿಸಿ ಬಿಸಿ ಮಸಾಲೆ ದೋಸೆಗೆ ಬಂದಂತಹ ಬೇಡಿಕೆ ಬರಬಹುದು. ಮ್ಯಾಚ್ ವಿನ್ನರ್ ಬೌಲರ್ ಆಗಿರುವ ಇವರನ್ನು ಖರೀದಿಸಲು ಅಹಮದಾಬಾದ್ ಟೈಟನ್ಸ್ ತಂಡ ಸಹ ಯೋಚಿಸುತ್ತಿದೆ‌. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.

Get real time updates directly on you device, subscribe now.