ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಒಂದು ಕಾಲದಲ್ಲಿ ಮಿಂಚಿ, ಇದೀಗ ಈ ಬಾರಿಯ ಐಪಿಎಲ್ ನಲ್ಲಿ ಮಾರಾಟವಾಗದೇ ಇರಬಹುದಾದ ಐವರು ಭಾರತೀಯರು ಯಾರ್ಯಾರು ಗೊತ್ತೇ??

13

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ 2022ರ ಐಪಿಎಲ್ ಹರಾಜಿಗೆ ಕ್ಷಣಗಣನೆ ಆರಂಭವಾಗಿದೆ. ಎಲ್ಲಾ ಆಟಗಾರರು ಹರಾಜಿನ ಪಟ್ಟಿಯಲ್ಲಿ ಹೆಸರು ಗುರುತಿಸಿಕೊಂಡಿದ್ದು, ಆಟಗಾರರ ಬೇಸ್ ಪ್ರೈಸ್ ನ್ನು ಸಹ ಬಿಸಿಸಿಐ ಈಗಾಗಲೇ ಬಿಡುಗಡೆಗೊಳಿಸಲಾಗಿದೆ. ಆದರೇ ಕೆಲವು ಭಾರತೀಯ ಆಟಗಾರರ ಬೇಸ್ ಪ್ರೈಸ್ ಜಾಸ್ತಿ ಇರುವ ಕಾರಣ ಅಂತಹ ಆಟಗಾರರ ಪ್ರದರ್ಶನ ಸಹ ಉತ್ತಮವಿಲ್ಲದ ಕಾರಣ, ಆ ಆಟಗಾರರನ್ನು ಯಾವ ಫ್ರಾಂಚೈಸಿಗಳು ಖರೀದಿಸುವುದು ಕಷ್ಟ ಸಾಧ್ಯವಾಗಲಿದೆ. ಹರಾಜಿನಲ್ಲಿ ಸೇಲ್ ಆಗದೇ, ಅನಸೋಲ್ಡ್ ಆಗುವ ಭಾರತದ ಟಾಪ್ – 5 ಆಟಗಾರರು ಈ ಕೆಳಗಿನಂತಿದ್ದಾರೆ.

ಟಾಪ್ 1 : ದಿನೇಶ್ ಕಾರ್ತಿಕ್ – 36 ರ ಹರೆಯದ ದಿನೇಶ್ ಕಾರ್ತಿಕ್ ಬಹಳಷ್ಟು ದಿನಗಳಿಂದ ಕ್ರಿಕೇಟ್ ಆಡಿಲ್ಲ, ಅದರ ಜೊತೆ ಕಳೆದ ಭಾರಿ ಸಹ ಅವರ ಬ್ಯಾಟ್ ನಿಂದ ಉತ್ತಮ ರನ್ ಬರಲಿಲ್ಲ. ಅವರ ಮೂಲ ಬೆಲೆ 2 ಕೋಟಿ ರೂ ಇದೆ. ಹೀಗಾಗಿ ಫ್ರಾಂಚೈಸಿಗಳು ಇವರನ್ನು ಖರೀದಿಸಲು ಮನಸ್ಸು ಮಾಡದೇ, ಇವರು ಅನಸೋಲ್ಡ್ ಆಗುವ ಸಾಧ್ಯತೆ ಇದೆ.

ಟಾಪ್ 2 : ಸುರೇಶ್ ರೈನಾ : 38 ರ ಹರೆಯದ ರೈನಾ ಸಹ ಫಿಟ್ ನೆಸ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಮೊದಲಿನ ರೈನಾ ಈಗಿಲ್ಲ. ಕಳೆದ ಸೀಸನ್ ನಲ್ಲಿಯೂ ಸಹ ಕಳಪೆ ಪ್ರದರ್ಶನ ನೀಡಿದ್ದಾರೆ. ಇವರ ಮೂಲ ಬೆಲೆ ಸಹ 2 ಕೋಟಿ ರೂ ಆಗಿರುವುದರಿಂದ , ಇವರು ಸಹ ಅನಸೋಲ್ಡ್ ಆಗುವ ಸಾಧ್ಯತೆ ಇದೆ.

ಟಾಪ್ 3 : ಉಮೇಶ್ ಯಾದವ್ – ವಿಧರ್ಭ ವೇಗಿ ಯಾದವ್ ರೆಡ್ ಬಾಲ್ ಕ್ರಿಕೇಟ್ ಗೆ ಮಾತ್ರ ಉತ್ತಮ‌. ಆದರೇ ವೈಟ್ ಬಾಲ್ ಕ್ರಿಕೇಟ್ ನಲ್ಲಿ ಸಾಕಷ್ಟು ದಂಡನೆಗೆ ಒಳಗಾಗಿದ್ದನ್ನು ಹಲವಾರು ಸೀಸನ್ ಗಳಲ್ಲಿ ನೋಡಿದೆ. ಇವರ ಮೂಲಬೆಲೆ ಸಹ 2 ಕೋಟಿ ಆಗಿರುವ ಫ್ರಾಂಚೈಸಿಗಳು ಇವರನ್ನು ಖರೀದಿಸಲು ಆಸಕ್ತಿ ತೋರದೇ, ಅನಸೋಲ್ಡ್ ಆಗಿ ಉಳಿಯಬಹುದು.

ಟಾಪ್ 4 : ಅಂಬಟಿ ರಾಯುಡು – 36 ಹರೆಯದ ರಾಯುಡು ಸಹ ಐಪಿಎಲ್ ಬಿಟ್ಟರೇ ಬೇರೆ ಯಾವುದೇ ವೃತ್ತಿಪರ ಲೀಗ್ ಆಡುತ್ತಿಲ್ಲ. ಫಿಟ್ ನೆಸ್ ಸಮಸ್ಯೆ ಸಹ ಇದೆ. ಇವರ ಮೂಲಬೆಲೆ ಸಹ 2 ಕೋಟಿ ಆಗಿರುವ ಕಾರಣ, ಇವರು ಅನಸೋಲ್ಡ್ ಆಗುವ ಸಾಧ್ಯತೆ ಹೆಚ್ಚು.

ಟಾಪ್ 5 : ಕೃನಾಲ್ ಪಾಂಡ್ಯ – ಆಲ್ ರೌಂಡರ್ ಕೃನಾಲ್, ಇತ್ತೀಚೆಗೆ ನಡೆದ ವಿಜಯ್ ಹಜಾರೆ ಮತ್ತು ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಸಂಪೂರ್ಣ ಲಯ ಕಳೆದುಕೊಂಡಿದ್ದಾರೆ. ಅದಲ್ಲದೇ ಇವರ ಮೂಲ ಬೆಲೆ ಸಹ 2 ಕೋಟಿ ಆಗಿರುವುದರಿಂದ ಇವರು ಹರಾಜಾಗುವುದು ಡೌಟು. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.

Get real time updates directly on you device, subscribe now.