ನಮಸ್ಕಾರ ಸ್ನೇಹಿತರೇ ಐಪಿಎಲ್ – 2022 ರ ಆಟಗಾರರ ಮೆಗಾ ಹರಾಜು ಇದೇ ಫೆಬ್ರವರಿ 12 ಹಾಗೂ 13 ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಈಗಾಗಲೇ ಎಲ್ಲಾ ಫ್ರಾಂಚೈಸಿಗಳು ತಾವು ರಿಟೇನ್ ಮಾಡಿಕೊಂಡ ಆಟಗಾರರ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ತಂಡದ ಸಂಯೋಜನೆಗೆ ಸೂಕ್ತ ಆಟಗಾರರನ್ನು ಹರಾಜಿನಲ್ಲಿ ಖರೀದಿಸಲು ಸೂಕ್ತ ರಣತಂತ್ರವನ್ನು ರೂಪಿಸುತ್ತಿವೆ. ಈ ಮಧ್ಯೆ ಆರ್ಸಿಬಿ ಸಹ ಉತ್ತಮ ತಂಡ ಕಟ್ಟಲು ಒಳ್ಳೆಯ ಆಟಗಾರರನ್ನು ಹರಾಜಿನಲ್ಲಿ ಖರೀದಿಸಲು ರಣತಂತ್ರ ಹೆಣೆದಿದೆ. ಈ ನಿಟ್ಟಿನಲ್ಲಿ ಉತ್ತಮ ವಿಕೇಟ್ ಕೀಪರ್ ಬ್ಯಾಟ್ಸಮನ್ ಪಡೆಯಲು, ಹರಾಜಿನಲ್ಲಿ ಮೂವರು ವಿಕೇಟ್ ಕೀಪರ್ ಗಳನ್ನು ಟಾರ್ಗೆಟ್ ಮಾಡಲು ಸಿದ್ದವಾಗಿದೆ. ಬನ್ನಿ ಆ ಮೂವರು ವಿಕೇಟ್ ಕೀಪರ್ ಗಳು ಯಾರು ಎಂಬುದನ್ನ ತಿಳಿಯೋಣ ಬನ್ನಿ.
1.ಕೆ.ಎಸ್.ಭರತ್ : ಭರತ್ ಕಳೆದ ಆವೃತ್ತಿಯಲ್ಲಿ ಆರ್ಸಿಬಿ ತಂಡದಲ್ಲಿದ್ದರು. ಆವೇಶ್ ಖಾನ್ ರ ಕೊನೆಯ ಎಸೆತವನ್ನು ಸಿಕ್ಸರ್ ಗೆ ಅಟ್ಟಿ ಆರ್ಸಿಬಿ ತಂಡಕ್ಕೆ ಜಯ ತಂದಿತ್ತರು. ಈಗ ಅವರು ಆರ್ಸಿಬಿ ತಂಡದಲ್ಲಿ ಇಲ್ಲದಿದ್ದರೂ, ಹರಾಜಿನಲ್ಲಿ ಅವರನ್ನ ತಂಡಕ್ಕೆ ವಾಪಸ್ ಕರೆತಂದು , ಆರಂಭಿಕ ಬ್ಯಾಟ್ಸಮನ್ ಕಮ್ ವಿಕೇಟ್ ಕೀಪರ್ ಮಾಡಲು ಚಿಂತಿಸುತ್ತಿದೆ.

2.ಇಶಾನ್ ಕಿಶನ್ : ಭಾರತ ತಂಡದ ಆಟಗಾರರಾದ ಇಶಾನ್ ಈ ಭಾರಿ ಹರಾಜಿಗೆ ಲಭ್ಯವಿದ್ದಾರೆ. ಆದರೇ ಅವರ ಮೇಲೆ ಎಲ್ಲಾ ಫ್ರಾಂಚೈಸಿಗಳು ಖರೀದಿಗೆ ಮುಗಿ ಬೀಳಬಹುದು. ಸಾಧ್ಯವಾದರೇ ಅವರನ್ನು ಖರೀದಿಸಿ ವಿಕೇಟ್ ಕೀಪರ್ ಜವಾಬ್ದಾರಿ ನೀಡಲು ಆರ್ಸಿಬಿ ಥಿಂಕ್ ಟ್ಯಾಂಕ್ ಚಿಂತಿಸಿದೆ.
3.ರಾಬಿನ್ ಉತ್ತಪ್ಪ : ಕನ್ನಡಿಗ ಹಾಗೂ ಮಾಜಿ ಆರ್ಸಿಬಿ ಆಟಗಾರ ರಾಬಿನ್ ಉತ್ತಪ್ಪ ಈ ಭಾರಿ ಹರಾಜಿನಲ್ಲಿ ಲಭ್ಯವಿದ್ದಾರೆ. ಟಿ 20 ಕ್ರಿಕೇಟ್ ಗೆ ಹೇಳಿ ಮಾಡಿಸಿದಂತಿರುವ ರಾಬಿನ್ ರನ್ನು ಖರೀದಿಸಿದರೇ ಆರಂಭಿಕ, ವಿಕೇಟ್ ಕೀಪರ್ ಈ ಎರಡು ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಬಲ್ಲರು. ಅದಲ್ಲದೇ ಕನ್ನಡಿಗ ಎಂಬ ಟ್ರೇಡ್ ಮಾರ್ಕ್ ಸಹ ಆರ್ಸಿಬಿಗೆ ವರವಾಗಬಹುದು. ಹಾಗಾಗಿ ರಾಬಿನ್ ಉತ್ತಪ್ಪರ ಮೇಲೂ ಆರ್ಸಿಬಿ ಟಾರ್ಗೆಟ್ ಮಾಡಬಹುದು. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.