ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಎಲ್ಲಾ ತಂಡಗಳಿಗೂ ಇವರೇ ಬೇಕು, ಐಪಿಎಲ್ ಮೆಗಾ ಹರಾಜಿನಲ್ಲಿ ಫ್ರಾಂಚೈಸಿಗಳ ಮಧ್ಯೆ ಯುದ್ಧ ಸೃಷ್ಠಿಸಲಿರುವ ಟಾಪ್ – 5 ಸ್ಪಿನ್ನರ್ ಗಳು ಯಾರ್ಯಾರು ಗೊತ್ತೇ??

16

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಐಪಿಎಲ್ ಮೆಗಾ ಹರಾಜು 2022 ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಈಗಾಗಲೇ ಎಲ್ಲಾ ಫ್ರಾಂಚೈಸಿಗಳು ಹರಾಜಿಗೆ ನೀಲನಕ್ಷೆ ತಯಾರಿಸಿದ್ದು, ಸ್ಪಿನ್ ಸ್ನೇಹಿ ಪಿಚ್ ಗಳಾದ ಭಾರತದಲ್ಲಿ ಈ ಐವರು ಗೇಮ್ ಚೆಂಜರ್ ಸ್ಪಿನ್ನರ್ ಗಳನ್ನು ಖರೀದಿಸಲು ಫ್ರಾಂಚೈಸಿಗಳ ಮಧ್ಯ ಯುದ್ದವೇ ನಡೆಯಲಿದೆಯಂತೆ. ಬನ್ನಿ ಅಂತಹ ಟಾಪ್ – 5 ಸ್ಪಿನ್ನರ್ ಗಳು ಯಾರು ಎಂಬುದನ್ನು ನೋಡೋಣ.

ಟಾಪ್ 5 : ರಾಹುಲ್ ಚಾಹರ್ – ವೇಗವಾಗಿ ಲೆಗ್ ಸ್ಪಿನ್ ಮಾಡುವ ರಾಹುಲ್ ಚಾಹರ್, ಮುಂಬೈ ಇಂಡಿಯನ್ಸ್ ತಂಡದ ಯಶಸ್ಸಿನಲ್ಲಿ ಪಾಲುದಾರರಾಗಿದ್ದರು.ಈ ಭಾರಿ ಅವರು ಹರಾಜಿಗೆ ಬಂದರೆ, ಫ್ರಾಂಚೈಸಿಗಳು ಅವರನ್ನು ಖರೀದಿಸಲು ಮುಗಿಬೀಳುತ್ತಾರೆ.

ಟಾಪ್ 4 : ತಬ್ರಿಯಾಜ್ ಶಂಸಿ – ಸದ್ಯ ಟಿ 20 ಕ್ರಿಕೇಟ್ ನ ನಂ 1 ಸ್ಪಿನ್ನರ್ ಆಗಿರುವ ಚೈನಾಮನ್ ಬೌಲರ್ ತಬ್ರಿಯಾಜ್ ಶಂಸಿಯವರನ್ನು ಸಹ ಹರಾಜಿನಲ್ಲಿ ಖರೀದಿಸಲು ಫ್ರಾಂಚೈಸಿಗಳು ಮುಗಿ ಬೀಳುವುದು ಖಚಿತ. ಇವರನ್ನ ಖರೀದಿಸಲು ಫ್ರಾಂಚೈಸಿಗಳ ಮಧ್ಯೆ ಬಿಡ್ಡಿಂಗ್ ವಾರ್ ನಡೆಯುವ ಸಾಧ್ಯತೆ ಇದೆ.

ಟಾಪ್ 3 : ವನಿಂದು ಹಸರಂಗ – ಶ್ರೀಲಂಕಾದ ಆಲ್ ರೌಂಡರ್ ವನಿಂದು ಹಸರಂಗ ಸದ್ಯ ಟಿ 20 ಕ್ರಿಕೇಟ್ ನ ಯಶಸ್ವಿ ಬೌಲರ್. ಕೇವಲ ಬೌಲಿಂಗ್ ಮಾತ್ರವಲ್ಲದೇ, ಬ್ಯಾಟಿಂಗ್ ನಲ್ಲಿಯೂ ಸಹ ಉಪಯುಕ್ತ ಕಾಣಿಕೆ ನೀಡುತ್ತಾರೆ.ಹಾಗಾಗಿ ಇವರನ್ನ ಖರೀದಿಸಲು ಫ್ರಾಂಚೈಸಿಗಳು ತಾ ಮುಂದು , ನಾ ಮುಂದು ಎಂದು ಮುಗಿ ಬೀಳುವುದು ಖಚಿತ.

ಟಾಪ್ 2 : ರವಿಚಂದ್ರನ್ ಅಶ್ವಿನ್ – ಟೀಮ್ ಇಂಡಿಯಾದ ಆಲ್ ರೌಂಡರ್ ಅಶ್ವಿನ್ ಟಿ 20 ಕ್ರಿಕೇಟ್ ನ ಇಂಟೆಲಿಜೆಂಟ್ ಬೌಲರ್. ಪವರ್ ಪ್ಲೇಯಲ್ಲಿ ಸಹ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡುವ ಕೌಶಲ್ಯ ಹೊಂದಿದ್ದಾರೆ. ಜೊತೆಗೆ ಉತ್ತಮ ಬ್ಯಾಟಿಂಗ್ ನಡೆಸುವ ಕಾರಣ, ಇವರನ್ನ ಖರೀದಿಸಲು ಫ್ರಾಂಚೈಸಿಗಳು ಬಿಡ್ಡಿಂಗ್ ನಲ್ಲಿ ತೀವ್ರ ಪೈಪೋಟಿ ನಡೆಸುವ ಸಾಧ್ಯತೆ ಇದೆ.

ಟಾಪ್ 1 : ಯುಜವೇಂದ್ರ ಚಾಹಲ್ – ಟಿ 20 ಯ ವಿಕೇಟ್ ಟೇಕಿಂಗ್ ಬೌಲರ್ ಆಗಿರುವ ಯುಜವೇಂದ್ರ ಚಾಹಲ್, ಈ ಭಾರಿ ಹರಾಜಿನಲ್ಲಿ ಅತಿ ಹೆಚ್ಚು ಬೆಲೆಗೆ ಹರಾಜಾಗುವ ಸ್ಪಿನ್ನರ್ ಅನಿಸಿದ್ದಾರೆ. ಇವರನ್ನ ಖರೀದಿಸಲು ಫ್ರಾಂಚೈಸಿಗಳು ಅತಿ ಹೆಚ್ಚು ಹಣ ಹೂಡುವ ಸಾಧ್ಯತೆ ಸಹ ಇರುತ್ತದೆ. ಇವರನ್ನ ಖರೀದಿಸಲು ಫ್ರಾಂಚೈಸಿಗಳ ನಡುವೆ ಬಿಡ್ಡಿಂಗ್ ನಲ್ಲಿ ತೀವ್ರ ಪೈಪೋಟಿ ಎರ್ಪಡುವುದಂತು ಸತ್ಯ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.

Get real time updates directly on you device, subscribe now.