ಮತ್ತೆ ಶುರುವಾಯಿತಾ ದರ ಕಡಿಮೆ ಟ್ರೆಂಡ್?? ಏರ್ಟೆಲ್ ನಲ್ಲಿ ಕೇವಲ 265 ಮತ್ತು 299 ರೂ ಗೆ ಪ್ಲಾನ್ ಬಿಡುಗಡೆ, ಏನೆಲ್ಲಾ ಲಾಭ ಸಿಗುತ್ತವೆ ಗೊತ್ತೇ??

ಮತ್ತೆ ಶುರುವಾಯಿತಾ ದರ ಕಡಿಮೆ ಟ್ರೆಂಡ್?? ಏರ್ಟೆಲ್ ನಲ್ಲಿ ಕೇವಲ 265 ಮತ್ತು 299 ರೂ ಗೆ ಪ್ಲಾನ್ ಬಿಡುಗಡೆ, ಏನೆಲ್ಲಾ ಲಾಭ ಸಿಗುತ್ತವೆ ಗೊತ್ತೇ??

ನಮಸ್ಕಾರ ಸ್ನೇಹಿತರೇ, ದೇಶದ ದೊಡ್ಡ ಟೆಲಿಕಾಂ ಕಂಪೆನಿಗಳಲ್ಲಿ ಒಂದಾಗ ಏರ್‌ಟೆಲ್ ಅನೇಕ ಪ್ರೀಪೇಡ್ ರೀಚಾರ್ಜ್ ಯೋಜನೆಗಳನ್ನು ನೀಡುತ್ತಿದೆ. ಆದರೆ ಇವುಗಳಲ್ಲಿ ಕೆಲವು ದುಬಾರಿ. ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಇಲ್ಲ. ಆದ್ರೆ ಇಂದು ನಾವು ತಿಳಿಸುತ್ತಿರುವ 2 ಪ್ಲ್ಯಾನ್ ಗಳು ತುಸು ಗ್ರಾಹಕ ಸ್ನೇಹಿಯಾಗಿಯೇ ಇದೆ ಎನ್ನಬಹುದು. ಬನ್ನಿ ಆ ಯೋಜನೆಗಳ ಬಗ್ಗೆ ಇನ್ನೊಂದಿಷ್ಟು ಮಾಹಿತಿಯನ್ನು ನೋಡೋಣ. ಈ ನಡುವೆ ಈ ವಿಶೇಷ ಯೋಜನೆಗಳನ್ನು ಬಿಡುಗಡೆ ಗೊಳಿಸಿದ್ದು, ಸಾಕಷ್ಟು ಗ್ರಾಹಕರಿಗೆ ಇದರಿಂದ ಸಹಾಯವಾಗಲಿದೆ ಎಂದು ಪ್ರತಿಕ್ರಿಯೆ ಕೇಳಿ ಬಂದಿದೆ.

ಏರ್‌ಟೆಲ್ ನ 265 ರೂ.ಗಳ ಪ್ರಿಪೇಯ್ಡ್ ಯೋಜನೆ: 28 ದಿನಗಳ ವ್ಯಾಲಿಡಿಟಿ, ದಿನಕ್ಕೆ 1ಜಿಬಿ ಡೇಟಾವನ್ನು ನೀಡುತ್ತದೆ. ಅಂದರೆ ಒಟ್ಟೂ 28ಜಿಬಿ ಡೇಟಾ ದೊರೆಯುತ್ತದೆ. ಹಾಗೆಯೇ ಅನಿಯಮಿತ ವಾಯಿಸ್ ಕರೆ ಮತ್ತು ದಿನಕ್ಕೆ 100 ಎಸ್ಎಂಎಸ್ ಗಳ ಸೌಲಭ್ಯವೂ ಈ ಯೋಜನೆಯಲ್ಲಿದೆ. ಇನ್ನು ಸ್ವಲ್ಪ ಹೆಚ್ಚು ಡೇಟಾ ಅವಶ್ಯಕತೆ ಇರುವವರು ಏರ್‌ಟೆಲ್‌ನ 299 ರೂ.ಗಳ ಪ್ರೀಪೇಡ್ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಬಹುದು.

28 ದಿನಗಳ ವ್ಯಾಲಿಡಿಟಿ, ದಿನಕ್ಕೆ 1.5 ಜಿಬಿ ಡೇಟಾ ಅಂದರೆ ಒಟ್ಟೂ 42 ಜಿಬಿ ಡೇಟಾ 28 ದಿನಕ್ಕೆ ದೊರೆಯುತ್ತದೆ. ಜೊತೆಗೆ ಅನಿಯಮಿತ ಧ್ವನಿ ಕರೆ ಮತ್ತು ಪ್ರತಿದಿನ 100 ಎಸ್ ಎಂ ಎಸ್ ಸೌಲಭವಿದೆ. ಇನ್ನು ಈ ಎರಡೂ ಯೋಜನೆಗಳಲ್ಲಿ ಏರ್‌ಟೆಲ್ ಥ್ಯಾಂಕ್ಸ್ ಪ್ರಯೋಜನಗಳನ್ನು ಪಡೆಯಬಹುದು. ಅಂದರೆ ಏರ್‌ಟೆಲ್ ಗ್ರಾಹಕರು, ಅಮೆಜಾನ್ ಫ್ರೈಮ್ ವಿಡಿಯೋ ಮೊಬೈಲ್ ಆವೃತ್ತಿ, ಷಾ ಅಕಾಡೆಮಿಯ ಉಚಿತ ಕೋರ್ಸ್, ಫಾಸ್ಟಾಗ್ ನ 100ರೂ. ಕ್ಯಾಶ್ಬ್ಯಾಕ್, ಉಚಿತ ಹಲೋಟ್ಯೂನ್ಸ್, ಮತ್ತು ಉಚಿತ ವಿಂಕ್ ಮ್ಯೂಸಿಕ್ ಚಂದಾದಾರಿಕೆಗಳನ್ನು ಏರ್‌ಟೆಲ್ ಥ್ಯಾಂಕ್ಸ್ ಪ್ರಯೋಜನಗಳಾಗಿ ಪಡೆಯಬಹುದು.