ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಒಂದು ವೇಳೆ ನಿಮ್ಮ ಮನಸಿನಲ್ಲಿ ನೋವಿದ್ದರೇ, ಮಲಗುವುದಕ್ಕಿಂತ ಮುನ್ನ ಈ ಮಾತುಗಳನ್ನು ನೆನಪು ಮಾಡಿಕೊಳ್ಳಿ.

25

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಪ್ರತಿಯೊಬ್ಬರ ಜೀವನದಲ್ಲಿಯೂ ಕೂಡ ಪ್ರತಿ ಹೆಜ್ಜೆಯಲ್ಲೂ ಸಾಕಷ್ಟು ಸಮಸ್ಯೆಗಳು ಎದುರಾಗುತ್ತಲೇ ಇರುತ್ತವೆ. ಇಂತಹ ಸಮಸ್ಯೆಗಳು ಎದುರಾದಾಗ ನಮ್ಮ ಜೀವನ ಮುಗಿದು ಹೋಯಿತು ಎಂದು ಅಂದುಕೊಳ್ಳಬಾರದು. ಒಂದು ನಾಟಕವನ್ನು ನೋಡಬೇಕೆಂದರೆ ಮುಂದಿನ ಸೀಟಿನಲ್ಲಿ ಕುಳಿತುಕೊಳ್ಳುತ್ತೇವೆ.. ಅದೇ ಸಿನಿಮಾ ನೋಡಬೇಕೆಂದರೆ ಹಿಂದಿನ ಸೀಟಿನ ಕುಳಿತುಕೊಳ್ಳುತ್ತೇವೆ..

ಇನ್ನು ಸಾಬೂನು ತಯಾರಿಸಲು ಎಣ್ಣೆ ಬೇಕೇ ಬೇಕು. ಇನ್ನು ಕೈಗೆ ಅಂಟಿದ ಎಣ್ಣೆಯನ್ನು ತೊಳೆದುಕೊಳ್ಳಲು ಸಾಬೂನು ಬೇಕೇ ಬೇಕು. ಅದೇ ರೀತಿ ಜೀವನದಲ್ಲಿ ಸಮಸ್ಯೆಗಳು ಎದುರಾದಾಗ ಅದು ಒಂದು ಪಾಠ ಎಂದು ಅಂದುಕೊಳ್ಳಬೇಕು. ಈ ಜೀವನದಲ್ಲಿ ಇಬ್ಬರೇ ಇಬ್ಬರು ವ್ಯಕ್ತಿಗಳು ಮಾತ್ರ ಆನಂದವಾಗಿರುತ್ತಾರೆ. ಒಬ್ಬರು ಹುಚ್ಚರು.. ಮತ್ತೊಬ್ಬರು ಚಿಕ್ಕಮಕ್ಕಳು. ಗಮ್ಯವನ್ನು ಸೇರಬೇಕೆಂದರೆ ಹುಚ್ಚುತನ ಇರಬೇಕು. ಸೇರಿಕೊಂಡ ಗಮ್ಯವನ್ನು ಆನಂದಿಸಬೇಕು ಎಂದರೆ ನಾವು ಚಿಕ್ಕಮಕ್ಕಳಾಗಬೇಕು. ಒಂದು ಬೀಗದ ಕೈಯನ್ನು ತೆಗೆಯಬೇಕಾದರೆ ಅದಕ್ಕೆ ಕೀಲಿಮಣೆಯ ಬೇಕೇಬೇಕು. ಅದೇ ರೀತಿ ಪರಿಹಾರವಿಲ್ಲದೆ ಯಾವುದೇ ಸಮಸ್ಯೆಗಳು ಕೂಡ ಎದುರಾಗುವುದಿಲ್ಲ.

ನೋಟಕ್ಕಿಂತ ಶಕ್ತಿವಾದದ್ದು ಒಂದೇ ಒಂದು ಮಾತು. ಒಂದೇ ಒಂದು ಆಡಿದ ಮಾತು ಸಂಬಂಧವನ್ನು ಕಳಚಿ ಬಿಡುತ್ತದೆ. ಅದೇ ಒಂದು ಮಾತಿನಿಂದ ಇಲ್ಲದ ಸಂಬಂಧವನ್ನು ಕೂಡ ಸೃಷ್ಟಿಸಿಕೊಳ್ಳಬಹುದು. ಮನುಷ್ಯ ಸಮಾಜದಲ್ಲಿ ಸೂಜಿಯಂತೆ ಬದುಕಬೇಕು.. ಕತ್ತರಿಯಂತಲ್ಲ. ಸೂಜಿ ಯಾವತ್ತಿಗೂ ಜೋಡಿಸುವ ಕೆಲಸ ಮಾಡುತ್ತದೆ ಆದರೆ ಕತ್ತರಿ ಬಿಡಿಸುವ ಕೆಲಸ ಮಾಡುತ್ತದೆ. ಆದ್ದರಿಂದ ಎಲ್ಲರನ್ನೂ ಕೂಡಿಸಿ ಕೂಡಿ ಜೀವನ ಮಾಡಬೇಕೆ ಹೊರತು ಕತ್ತರಿಯ ತರಹ ಬಿಡಿಸುತ್ತ ಅಲ್ಲ.

ನಿಜವನ್ನು ಬದಲಾಯಿಸುವ ಶಕ್ತಿ ಈ ಪ್ರಪಂಚದಲ್ಲಿ ಯಾರಿಗೂ ಕೂಡ ಇಲ್ಲ. ಆದರೆ ಪ್ರಪಂಚವನ್ನು ಬದಲಾಯಿಸುವ ಶಕ್ತಿ ಒಂದೇ ಒಂದು ನಿಜಕ್ಕೆ ಮಾತ್ರ ಇದೆ. ನೀನು ಸಂತೋಷವಾಗಿ ಇದ್ದೀಯ ಅಂದ್ರೆ ನಿನಗೆ ಸಮಸ್ಯೆಗಳು ಇಲ್ಲ ಅಂತಲ್ಲ… ಆ ಸಮಸ್ಯೆಗಳನ್ನು ಎದುರಿಸುವ ಶಕ್ತಿ, ಧೈರ್ಯ ನಿನ್ನಲ್ಲಿವೆ ಎಂದು ಅರ್ಥ. ಸ್ನೇಹಿತನನ್ನು ದುಃಖದ ಸಮಯದಲ್ಲಿ, ಯೋಧನನ್ನು ಯುದ್ಧದಲ್ಲಿ, ಹೆಂಡತಿಯನ್ನು ಬಡ ಪರಿಸ್ಥಿತಿಯಲ್ಲಿ, ದೊಡ್ಡ ವ್ಯಕ್ತಿಯನ್ನು ಆತನ ವಿನಯದಲ್ಲಿ ಪರೀಕ್ಷಿಸಬೇಕು. ಮಾಡಿದ ತಪ್ಪಿಗೆ ಕ್ಷಮಾಪಣೆ ಕೇಳಿದವನು ಧೈರ್ಯವಂತನು. ಎದುರಿರುವ ವ್ಯಕ್ತಿಯ ತಪ್ಪನ್ನು ಕ್ಷಮಿಸಿಸುವವನು ಬಲವಂತ.

ಕಷ್ಟವು ಎಲ್ಲರಿಗೂ ಶತ್ರುವೇ.. ಆದರೆ ಆ ಕಷ್ಟವನ್ನು ಕಿರುನಗೆಯಿಂದ ಸ್ವೀಕರಿಸಿದರೆ ಅದು ಸುಖವಾಗಿ ನಿನ್ನನ್ನು ಪ್ರೀತಿಸುತ್ತದೆ. ಸೋಲಿಲ್ಲದ ಮನುಷ್ಯನಿಗೆ ಅನುಭವ ಬರುವುದಿಲ್ಲ. ಅನುಭವ ಇಲ್ಲದ ಮನುಷ್ಯನಿಗೆ ಜ್ಞಾನ ಬರುವುದಿಲ್ಲ. ಗೆದ್ದಾಗ ಗೆಲುವು ಸ್ವೀಕರಿಸುವ ಆದರೆ ಸೋತಾಗ ಪಾಠವನ್ನು ಸ್ವೀಕರಿಸು. ಸೋತು ವಿಶ್ರಾಂತಿ ಪಡೆದುಕೊಳ್ಳುವಾಗ ಸೋಲು ಕಲಿಸಿದ ಪಾಠವನ್ನು ಓದಿಕೊಳ್ಳಿ. ಆಗ ನೀವೇ ಗೆಲ್ಲುತ್ತೀರಾ. ಪ್ರತಿಯೊಬ್ಬರಿಗೂ ಇರುವುದು 24 ಗಂಟೆ ಮಾತ್ರ.

ಗೆಲ್ಲುವವನು ಅಷ್ಟು ಸಮಯದಲ್ಲಿ ಕಷ್ಟಪಟ್ಟು ಕೆಲಸ ಮಾಡುತ್ತಾನೆ. ಸೋಲುವವನು 24 ಗಂಟೆಗಳಲ್ಲಿ ಹೇಗೆ ಕಷ್ಟಪಟ್ಟು ಕೆಲಸ ಮಾಡಬೇಕು ಎಂದು ಆಲೋಚಿಸುತ್ತಾನೆ. ಗೆಲ್ಲಬೇಕೆಂಬ ತಪನ, ಗೆದ್ದೇ ಗೆಲ್ಲುತ್ತೇನೆ ಎಂಬ ನಂಬಿಕೆ, ನಿರಂತರ ಸಾಧನೆ ಈ ಮೂರು ವಿಷಯಗಳು ನಿಮ್ಮನ್ನು ಗೆಲುವಿನ ಹತ್ತಿರ ಕರೆದುಕೊಂಡು ಹೋಗುತ್ತವೆ. ನಾನು ಗೆಲ್ಲುವುದರಲ್ಲಿ ಸೋಲಬಹುದು ಆದರೆ ಪ್ರಯತ್ನದಲ್ಲಿ ಗೆಲ್ಲುತ್ತಿದ್ದೇನೆ. ಹೀಗೆ ಪ್ರಯತ್ನಿಸುತ್ತಾ ಗೆಲ್ಲುತ್ತೇನೆ. ಸ್ವಯಂ ಕೃಷಿಯಿಂದ ಮೇಲೆ ಬಂದವರಿಗೆ ಆತ್ಮವಿಶ್ವಾಸ ಇರುತ್ತದೆ ಹೊರತು ಅಹಂಕಾರ ಇರುವುದಿಲ್ಲ.

Get real time updates directly on you device, subscribe now.