ಬಿಗ್ ನ್ಯೂಸ್: ಐಟಿಐ, ಡಿಪ್ಲಾಮಾ ಪಾಸಾದವರಿಗೆ ಸಾಲು ಸಾಲು ಹುದ್ದೆಗಳಲ್ಲಿ ಅವಕಾಶ, ತಿಂಗಳಿಗೆ ಬರೊಬ್ಬರು 35 ಸಾವಿರ. ಅರ್ಜಿ ಹೇಗೆ ಸಲ್ಲಿಸಬೇಕು ಗೊತ್ತೇ??

ಬಿಗ್ ನ್ಯೂಸ್: ಐಟಿಐ, ಡಿಪ್ಲಾಮಾ ಪಾಸಾದವರಿಗೆ ಸಾಲು ಸಾಲು ಹುದ್ದೆಗಳಲ್ಲಿ ಅವಕಾಶ, ತಿಂಗಳಿಗೆ ಬರೊಬ್ಬರು 35 ಸಾವಿರ. ಅರ್ಜಿ ಹೇಗೆ ಸಲ್ಲಿಸಬೇಕು ಗೊತ್ತೇ??

ನಮಸ್ಕಾರ ಸ್ನೇಹಿತರೇ, ನ್ಯಾಷನಲ್ ಮಿನರಲ್ ಡೆವಲಪ್ಮೆಂಟ್ ಕಾರ್ಪೊರೇಷನ್ ಲಿಮಿಟೆಡ್ ನಲ್ಲಿ ವಿವಿಧ ಶ್ರೇಣಿಯ ಹಲವು ಹುದ್ದೆಗಳು ಖಾಲಿ ಇದ್ದು, ಅವುಗಳನ್ನು ಭರ್ತಿ ಮಾಡಲು ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಇಲ್ಲಿನ ಹುದ್ದೆಯ ವಿವರ ಇಂತಿದೆ. ನ್ಯಾಷನಲ್ ಮಿನರಲ್ ಡೆವಲಪ್ಮೆಂಟ್ ಕಾರ್ಪೊರೇಷನ್ ನೇಮಕಾತಿ ಅಧಿಸೂಚನೆ ಪ್ರಕಾರ, ಇಲ್ಲಿನ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ವಿಶ್ವವಿದ್ಯಾಲಯ/ಸಂಸ್ಥೆಯಿಂದ ಮಾನ್ಯತೆ ಪಡೆದ ಐಟಿಐ, ಡಿಪ್ಲೋಮಾ, ಬಿಎಸ್ಸಿ ಪದವಿಯಲ್ಲಿ ತೇರ್ಗಡೆ ಹೊಂದಿರಬೇಕು.

ಅಧಿಸೂಚನೆಯ ಪ್ರಕಾರ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 18 -30 ವರ್ಷ ಒಳಗಿನವರಾಗಿರಬೇಕು. ಆಯ್ಕೆಯಾದ ಅಭ್ಯರ್ಥಿಗಳಿಗೆ ವೇತನವು ಮಾಸಿಕ ರೂ18,100-35,040 ರೂ.ವರೆಗೆ ಇರುತ್ತದೆ. ಇನ್ನು ಇಲ್ಲಿ ಖಾಲಿ ಇರುವ ಹುದ್ದೆಗಳು ವಿವಿಧ ಶ್ರೇಣಿಯ ಒಟ್ಟೂ 200. ಅವುಗಳೆಂದರೆ, ಫೀಲ್ಡ್ ಅಸಿಸ್ಟೆಂಟ್- 43 ಹುದ್ದೆಗಳು, ಮೇಂಟೇನೆನ್ಸ್ ಅಸಿಸ್ಟೆಂಟ್(ಮೆಕ್ಯಾನಿಕ್)- 90 ಹುದ್ದೆಗಳು, ಮೇಂಟೇನೆನ್ಸ್ ಅಸಿಸ್ಟೆಂಟ್(ಎಲೆಕ್ಟ್ರಿಕಲ್)-35 ಹುದ್ದೆಗಳು, ಎಂಸಿಒ ಗ್ರೇಡ್-3-4 ಹುದ್ದೆಗಳು, ಹೆಚ್ ಈ ಎಂ ಮೆಕ್ಯಾನಿಕ್ ಗ್ರೇಡ್-3- 10 ಹುದ್ದೆಗಳು, ಎಲೆಕ್ಟ್ರಿಷಿಯನ್ ಗ್ರೇಡ್-3-7 ಹುದ್ದೆಗಳು, ಬ್ಲಾಸ್ಟರ್ ಗ್ರೇಡ್-2- 2 ಹುದ್ದೆಗಳು, ಕ್ಯೂಸಿಎ ಗ್ರೇಡ್-3- 9 ಹುದ್ದೆಗಳು.

ಇನ್ನು ಈ ಹುದ್ದೆಗಳಿಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸತಕ್ಕದ್ದು. ಸಾಮಾನ್ಯ/ಒಬಿಸಿ ಅಭ್ಯರ್ಥಿಗಳು 150 ರೂ. ಅರ್ಜಿ ಶುಲ್ಕ ಪಾವತಿಸಬೇಕು ಹಾಗೂ ಎಸ್ಸಿ/ಎಸ್ಟಿ/ಪಿಹೆಚ್/ಇಎಸ್ ಎಂ ಗೆಯಾವುದೇ ಅರ್ಜಿ ಶುಲ್ಕವಿರುವುದಿಲ್ಲ. ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಇದೇ ತಿಂಗಳು 10ನೇ ತಾರಿಕು ಅಂದರೆ ನಾಳೆಯಿಂದ ಶುರುವಾಗಲಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಮಾರ್ಚ್ 2,2022. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ https://www.nmdc.co.in/ ವೆಬ್ ಸೈಟ್ ಗೆ ಭೇಟಿ ನೀಡಬಹುದು.