ಈ ಬಾರಿಯ ಹರಾಜಿನಲ್ಲಿ ಅತ್ಯಂತ ಹೆಚ್ಚು ಬೆಲೆ ಮಾರಾಟವಾಗಲಿರುವ ಟಾಪ್ 6 ಆಟಗಾರರು ಯಾರ್ಯಾರು ಗೊತ್ತೇ??

ಈ ಬಾರಿಯ ಹರಾಜಿನಲ್ಲಿ ಅತ್ಯಂತ ಹೆಚ್ಚು ಬೆಲೆ ಮಾರಾಟವಾಗಲಿರುವ ಟಾಪ್ 6 ಆಟಗಾರರು ಯಾರ್ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಐಪಿಎಲ್ 2022 ರ ಆಟಗಾರರ ಸಾರ್ವತ್ರಿಕ ಹರಾಜು ಇದೇ ಫೆಬ್ರವರಿ 12 ಮತ್ತು 13 ರಂದು ನಡೆಯಲಿದೆ. ಈಗಾಗಲೇ ಎಲ್ಲಾ ಫ್ರಾಂಚೈಸಿಗಳು ಹರಾಜಿಗೆ ಪೂರ್ವಸಿದ್ದತೆ ನಡೆಸಿದ್ದು, ಈಗ ಈ ಸಾಲಿನ ಹರಾಜಿನಲ್ಲಿ ಅತಿ ಹೆಚ್ಚು ಬೆಲೆಗೆ ಬಿಕರಿಯಾಗುವ ಆರು ಆಟಗಾರ ಪಟ್ಟಿಯನ್ನು ಅಭಿಮಾನಿಗಳು ಹೇಳಿದ್ದಾರೆ. ಈ ಆಟಗಾರರು ಕಳೆದ ಭಾರಿ ಅತಿ ಹೆಚ್ಚು ಬೆಲೆಗೆ ಮಾರಾಟವಾಗಿದ್ದ ಕ್ರಿಸ್ ಮೋರಿಸ್ ( 16.25 ಕೋಟಿ) ದಾಖಲೆಯನ್ನು ಮುರಿಯುವ ಸಾಧ್ಯತೆ ಇದೆ. ಬನ್ನಿ ಆ ಆಟಗಾರರು ಯಾರು ಎಂದು ತಿಳಿಯೋಣ.

1.ಡೇವಿಡ್ ವಾರ್ನರ್ : 2 ಕೋಟಿ ಮೂಲಬೆಲೆ ಹೊಂದಿರುವ ವಾರ್ನರ್ ಈ ಭಾರಿಯ ಐಪಿಎಲ್ ನಲ್ಲಿ ಹೆಚ್ಚು ಬೆಲೆಗೆ ಹರಾಜಾಗುವ ಸಾಧ್ಯತೆ ಇದೆ. ಆರಂಭಿಕ ಹಾಗೂ ನಾಯಕತ್ವ ನಿಭಾಯಿಸುವ ಸಾಮರ್ಥ್ಯ ಇರುವ ಕಾರಣ, ವಾರ್ನರ್ ರತ್ತ ಫ್ರಾಂಚೈಸಿಗಳು ಚಿತ್ತ ಹರಿಸಬಹುದು.

2.ಶ್ರೇಯಸ್ ಅಯ್ಯರ್ : ಭಾರತದ ಮಧ್ಯಮ ಕ್ರಮಾಂಕದ ಬ್ಯಾಟ್ಸಮನ್ ಹಾಗೂ ನಾಯಕತ್ವ ನಿಭಾಯಿಸಬಲ್ಲ ಸಾಮರ್ಥ್ಯವಿರುವ ಅಯ್ಯರ್ 2 ಕೋಟಿ ಮೂಲ ಬೆಲೆ ಹೊಂದಿದ್ದಾರೆ. ಹೊಸ ನಾಯಕನನ್ನ ಹುಡುಕುತ್ತಿರುವ ಕೆಕೆಆರ್ ಮತ್ತು ಆರ್ಸಿಬಿ ಇವರಿಗೆ ಹೆಚ್ಚು ಹಣ ಸುರಿಯಬಹುದು.

3.ಯುಜವೇಂದ್ರ ಚಾಹಲ್ : ಟಿ 20 ಕ್ರಿಕೇಟ್ ನಲ್ಲಿ ವಿಕೇಟ್ ಟೇಕಿಂಗ್ ಬೌಲರ್ ಎಂದು ಗುರುತಿಸಿಕೊಂಡಿರುವ ಚಾಹಲ್ ರನ್ನ ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಫ್ರಾಂಚೈಸಿಗಳು ಹೆಚ್ಚು ಹಣ ಖರ್ಚು ಮಾಡುವ ಸಾಧ್ಯತೆಯಿದೆ.

4.ಜೇಸನ್ ಹೋಲ್ಡರ್ : ವೆಸ್ಟ್ ಇಂಡಿಸ್ ತಂಡದ ನಾಯಕರಾಗಿ ಎರಡು ಭಾರಿ ವಿಶ್ವಕಪ್ ಗೆಲ್ಲಿಸಿದ ನಾಯಕ, ಆಲ್ ರೌಂಡರ್ ಜೇಸನ್ ಹೋಲ್ಡರ್ ರವರನ್ನು ಖರೀದಿಸಲು ಫ್ರಾಂಚೈಸಿಗಳು ಕಾದು ಕುಳಿತಿದ್ದಾರೆ. 1.5 ಕೋಟಿ ಮೂಲಬೆಲೆ ಹೊಂದಿರುವ ಹೋಲ್ಡರ್, ನಾಯಕ, ಆಲ್ ರೌಂಡರ್ ಎರಡು ವೃತ್ತಿ ನಿಭಾಯಿಸುವ ಕಾರಣ, ಹೋಲ್ಡರ್ ಹೆಚ್ಚಿನ ಮೊತ್ತಕ್ಕೆ ಸೇಲ್ ಆಗುವ ಸಾಧ್ಯತೆ ಇದೆ.

5 .ಇಶಾನ್ ಕಿಶನ್ – ಭಾರತದ ಆರಂಭಿಕ ಬ್ಯಾಟ್ಸಮನ್ ಹಾಗೂ ವಿಕೇಟ್ ಕೀಪರ್ ಜವಾಬ್ದಾರಿ ನಿರ್ವಹಿಸುವ ಇಶಾನ್ ಕಿಶನ್ ಸಹ ಹೆಚ್ಚು ಮೊತ್ತಕ್ಕೆ ಹರಾಜಾಗುವ ಸಾಧ್ಯತೆ ಇದೆ. ಸದ್ಯ ಅವರು 2 ಕೋಟಿ ಮೂಲಬೆಲೆ ಹೊಂದಿದ್ದಾರೆ. ಅವರು ನಾಯಕರಾಗಿ ಸಹ ತಂಡವನ್ನು ಮುನ್ನಡೆಸಬಲ್ಲರು.

6.ಜೇಸನ್ ರಾಯ್ : ಇಂಗ್ಲೆಂಡ್ ತಂಡದ ಆರಂಭಿಕ ಬ್ಯಾಟ್ಸಮನ್ ಆಗಿರುವ ಜೇಸನ್ ರಾಯ್, ಹೊಡಿಬಡಿ ಆಟಕ್ಕೆ ಹೆಸರುವಾಸಿಯಾದರು. ಪವರ್ ಪ್ಲೇ ಸಮಯದಲ್ಲಿ ಹೆಚ್ಚು ರನ್ ಗಳಿಸುವ ಇವರು 2 ಕೋಟಿ ರೂಪಾಯಿ ಮೂಲಬೆಲೆ ಹೊಂದಿದ್ದಾರೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.