ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಟ್ರಾಫಿಕ್ ಪೊಲೀಸರ ಭ್ರಷ್ಟಾಚಾರವನ್ನು ನಿಲ್ಲಿಸಲು ಮಹತ್ವದ ನಿರ್ಣಯ ಕೈಗೊಂಡ ಹೈ ಕೋರ್ಟ್, ಹೊರಡಿಸಿದ ಹೊಸ ಆದೇಶವೇನು ಗೊತ್ತೇ??

26

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಇಂದು ಈಗ ನಾವು ಹೇಳ ಹೊರಟಿರುವ ಬಹುತೇಕ ಜನರಿಗೆ ಖಂಡಿತವಾಗಿ ಅನ್ವಯಿಸುತ್ತದೆ. ಈ ಸಮಸ್ಯೆಯನ್ನು ಹಲವಾರು ಬಾರಿ ಎದುರಿಸಿದ್ದೇವೆ ಕೂಡ. ಹೌದು ನಾವು ಮಾತನಾಡುತ್ತಿರುವುದು ಟ್ರಾಫಿಕ್ ಪೊಲೀಸ್ ರವರ ಜೊತೆಗಿನ ವಿಚಾರದ ಕುರಿತಂತೆ. ಹೌದು ಟ್ರಾಫಿಕ್ ನಿಯಮಗಳ ಉಲ್ಲಂಘನೆಯಾದಾಗ ಅದರ ಪ್ರಕಾರ ಬೈಕ್ ಅಥವಾ ವಾಹನ ಸವಾರರಿಗೆ ಟ್ರಾಫಿಕ್ ಪೊಲೀಸರು ಶಿಕ್ಷೆಯನ್ನು ನೀಡುವುದು ನ್ಯಾಯಸಮ್ಮತವಾದ ವಿಚಾರ.

ಆದರೆ ಲಂಚದ ಆಸೆಗಾಗಿ ಹಲವಾರು ತಪ್ಪು ಕ್ರಮಗಳನ್ನು ಟ್ರಾಫಿಕ್ ಪೊಲೀಸರು ಕೂಡ ಕೆಲವೊಮ್ಮೆ ಕೈಗೊಳ್ಳುತ್ತಾರೆ. ಈ ಕುರಿತಂತೆ ವಾಹನ ಸವಾರರು ಹಲವಾರು ಬಾರಿ ಸಮಸ್ಯೆಗಳನ್ನು ಕೂಡ ಎದುರಿಸಿದ್ದಾರೆ. ಹೀಗೆ ಹೇಳಿದ ಮಾತ್ರಕ್ಕೆ ಎಲ್ಲಾ ಟ್ರಾಫಿಕ್ ಪೊಲೀಸರು ಕೂಡ ಇದೇ ಮಾದರಿಯ ಅಧಿಕಾರಿಗಳು ಎಂದು ಹೇಳುತ್ತಿಲ್ಲ. ಆದರೆ ಇಂತಹ ಭ್ರಷ್ಟ ಅಧಿಕಾರಿಗಳು ಟ್ರಾಫಿಕ್ ಪೊಲೀಸ್ ವಿಭಾಗದಲ್ಲಿ ಕೂಡ ಇದ್ದಾರೆ. ಹೀಗಾಗಿಯೇ ಟ್ರಾಫಿಕ್ ಪೊಲೀಸರ ವಿರುದ್ಧ ಭ್ರಷ್ಟಾಚಾರದ ಕೂಗುಗಳು ಕೇಳಿಬರುತ್ತಿರುವುದರಿಂದಾಗಿ ಹೈಕೋರ್ಟ್ ಈಗ ಹೊಸ ನಿಯಮವನ್ನು ಜಾರಿಗೆ ತಂದಿದೆ ಎಂದು ಹೇಳಬಹುದಾಗಿದೆ.

ಅಷ್ಟಕ್ಕೂ ಭ್ರಷ್ಟ ಟ್ರಾಫಿಕ್ ಪೊಲೀಸ್ ಅಧಿಕಾರಿಗಳನ್ನು ನಿಯಂತ್ರಣಕ್ಕೆ ತರಲು ಹೈಕೋರ್ಟ್ ತಂದಿರುವ ಹೊಸ ನಿಯಮವೇನು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. ಹೌದು ಭ್ರಷ್ಟ ಅಧಿಕಾರಿಗಳನ್ನು ನಿಯಂತ್ರಣಕ್ಕೆ ತರುವುದಕ್ಕಾಗಿ ಟ್ರಾಫಿಕ್ ಪೊಲೀಸ್ ವಿಭಾಗದಲ್ಲಿ ಹೈಕೋರ್ಟ್ ಬಾಡಿ ಕ್ಯಾಮೆರಾಗಳನ್ನು ಕಡ್ಡಾಯವಾಗಿ ಉಪಯೋಗಿಸಲು ಆದೇಶ ನೀಡಿದೆ. ಬಾಡಿ ಕ್ಯಾಮೆರಾ ಇರುವುದರಿಂದಾಗಿ ಇಂತಹ ಕಾರ್ಯಗಳನ್ನು ನಿಯಂತ್ರಿಸಬಹುದಾಗಿದೆ ಎಂಬುದನ್ನು ಹೈಕೋರ್ಟ್ ಪರಿಗಣಿಸಿದೆ. ಈ ಕಾರಣದಿಂದಾಗಿ ಈಗಾಗಲೇ 1097 ಬಾಡಿ ಕ್ಯಾಮೆರಾಗಳನ್ನು ಖರೀದಿಸಲಾಗಿದೆ. ಮೊದಹಂತದಲ್ಲಿ ಇದೀಗ ಒಟ್ಟು 2680 ಬಾಡಿ ಕ್ಯಾಮೆರಾಗಳನ್ನು ಖರೀದಿಸಲಾಗುವುದು ಎಂಬುದಾಗಿ ಇಲಾಖೆ ಹೇಳಿದೆ. ಇನ್ನು ಮುಂದಿನ ದಿನಗಳಲ್ಲಾದರೂ ಕೂಡ ಇಂತಹ ಅಪರಾಧಗಳು ಕಡಿಮೆ ಆಗಬಹುದು ಎಂಬುದು ಸಾರ್ವಜನಿಕರ ನಿರೀಕ್ಷೆಯಾಗಿದೆ.

Get real time updates directly on you device, subscribe now.