ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಬಿಗ್ ನ್ಯೂಸ್: ವೆಸ್ಟ್ ಇಂಡೀಸ್ ದೈತ್ಯನ ಮೇಲೆ ಕಣ್ಣಿಟ್ಟ ಆರ್ಸಿಬಿ, ಈತನಿಗಾಗಿ ಕೋಟಿ ಕೋಟಿ ಖರ್ಚು ಮಾಡಲು ಸಿದ್ಧವಾಗಿದೆಯಂತೆ, ಯಾರು ಗೊತ್ತೇ?

17

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಐಪಿಎಲ್ 2022ರ ಹರಾಜು ಇದೇ ಫೆಬ್ರವರಿ 12 ಮತ್ತು 13 ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಎಲ್ಲಾ 10 ಫ್ರಾಂಚೈಸಿಗಳು ಸಿದ್ದವಾಗಿದ್ದು, ತಾವು ಖರೀದಸಬೇಕೆನ್ನುವ ಆಟಗಾರರ ಪಟ್ಟಿಯನ್ನು ಅಳೆದು ತೂಗಿ ಸಿದ್ದಪಡಿಸಿಕೊಂಡಿವೆ. ಹೆಚ್ಚಾಗಿ ಆಲ್ ರೌಂಡರ್ ಗಳು ಹೆಚ್ಚಿನ ಬೆಲೆಗೆ ಹೋಗುವ ಸಾಧ್ಯತೆಯಿದೆ.

ಇನ್ನು ಈ ನಡುವೆ ಆರ್ಸಿಬಿ ತಂಡ ಸಹ ಹರಾಜಿನಲ್ಲಿ ತಾನು ಖರಿದೀಸಲೇಬೇಕೆಂದ ಹಾಗೂ ಖರೀದಿಸಬಹುದಾದ ಆಟಗಾರರ ಎರಡು ಪಟ್ಟಿಯನ್ನು ತಯಾರಿಸಿಕೊಂಡಿದೆ. ವಿರಾಟ್ ಕೊಹ್ಲಿಯವರ ರಾಜೀನಾಮೆಯಿಂದ ತೆರವಾಗಿರುವ ನಾಯಕನ ಸ್ಥಾನ ಮತ್ತು ಬ್ಯಾಟಿಂಗ್ ಹಾಗೂ ಬೌಲಿಂಗ್ ಈ ಎರಡನ್ನೂ ಗಮನದಲ್ಲಿಟ್ಟುಕೊಂಡು ಒಬ್ಬ ಆಟಗಾರನನ್ನ ಖರೀದಿಸಲು ಮುಂದಾಗಿದೆಯಂತೆ. ಹೌದು ಈ ತ್ರೀ ಇನ್ ಒನ್ ಆಟಗಾರನನ್ನ ಖರೀದಿಸಲೇಬೆಕೆಂದು ನಿರ್ಧರಿಸುವ ಆರ್ಸಿಬಿ ತಂಡದ ಮ್ಯಾನೇಜ್ ಮೆಂಟ್ ಬರೋಬ್ಬರಿ 12 ಕೋಟಿ ರೂಪಾಯಿಯನ್ನು ಮೀಸಲಿರಿಸಿದೆಯಂತೆ.

ಅಷ್ಟಕ್ಕೂ ಈ ಆಟಗಾರ ಬೇರೆ ಯಾರೂ ಅಲ್ಲ. ನಿನ್ನೆಯ ಭಾರತ ವಿರುದ್ದದ ಪಂದ್ಯದಲ್ಲಿ ಒಂದು ಕಡೆ ವಿಕೇಟ್ ಬೀಳುತ್ತಿದ್ದರೂ, ಕೆಳ ಕ್ರಮಾಂಕದಲ್ಲಿ ಉತ್ತಮವಾಗಿ ಆಡಿ ಅರ್ಧಶತಕಗಳಿಸಿದ ವಿಂಡೀಸ್ ನ ಆಲ್ ರೌಂಡರ್ ಜೇಸನ್ ಹೋಲ್ಡರ್. ಹೌದು ವಿಂಡೀಸ್ ತಂಡದ ಕ್ಯಾಪ್ಟನ್ ಆಗಿ ವಿಶ್ವಕಪ್ ಎತ್ತಿ ಹಿಡಿದಿರುವ ಹೋಲ್ಡರ್ ರವರನ್ನ ಶತಾಯಗತಾಯ ಖರೀದಿಸಿ, ಅವರಿಗೆ ನಾಯಕನ ಪಟ್ಟ ನೀಡಲೆಂದು ಆರ್ಸಿಬಿ ಒಟ್ಟು 12 ಕೋಟಿ ಮೀಸಲಿರಿಸಿದೆಯಂತೆ. ಆ ಬಜೆಟ್ ಒಳಗೆ ಹೋಲ್ಡರ್ ಆರ್ಸಿಬಿ ತೆಕ್ಕೆಗೆ ಬಂದರೇ, ಫ್ರಾಂಚೈಸಿ ಮತ್ತಷ್ಟು ಖುಷಿಯಾಗುತ್ತಾರೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ

Get real time updates directly on you device, subscribe now.