ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಇದುವರೆಗೂ ಭಾರತ ಕಂಡ ಶ್ರೇಷ್ಠ ಸಾರ್ವಕಾಲಿಕ ತಂಡ ಘೋಷಣೆ ಮಾಡಿದ ವೆಂಕಟೇಶ್ ಪ್ರಸಾದ್, ಸ್ಥಾನ ಪಡೆದವರು ಯಾರ್ಯಾರು ಗೊತ್ತೇ??

40

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಇತ್ತಿಚಿನ ದಿನಗಳಲ್ಲಿ ಕ್ರಿಕೇಟ್ ನ ಹಿರಿಯ ಆಟಗಾರರು ತಾವು ಕಂಡ ಸಾರ್ವಕಾಲಿಕ ಶ್ರೇಷ್ಠ ಇಲೆವೆನ್ ತಂಡವನ್ನು ಪ್ರಕಟಿಸುವುದು ವಾಡಿಕೆಯಾಗಿಬಿಟ್ಟಿದೆ. ಆ ಸಾಲಿಗೆ ಈಗ ಕನ್ನಡಿಗ, ಭಾರತ ತಂಡದ ಮಾಜಿ ಆಟಗಾರ, ಹಾಲಿ ಕ್ರಿಕೇಟ್ ವೀಕ್ಷಕ ವಿವರಣೆಗಾರ ವೆಂಕಟೇಶ್ ಪ್ರಸಾದ್ ಸೇರಿದ್ದಾರೆ. ಅವರು ಸಹ ತಾವು ಕಂಡ ಸಾರ್ವಕಾಲಿಕ ಶ್ರೇಷ್ಠ ಭಾರತ ತಂಡದ ಇಲೆವೆನ್ ನ್ನು ಪ್ರಕಟಿಸಿದ್ದಾರೆ. ಆದರೆ ವೆಂಕಿ ಪ್ರಕಟಿಸಿದ ತಂಡದಲ್ಲಿ ಹಿಟ್ ಮ್ಯಾನ್ ರೋಹಿತ್ ಶರ್ಮಾಗೆ ಸ್ಥಾನ ಸಿಕ್ಕಿಲ್ಲ. ಬನ್ನಿ ವೆಂಕಿ ತಂಡದಲ್ಲಿ ಸ್ಥಾನ ಪಡೆದ ಆಟಗಾರರು ಯಾರು ಎಂದು ತಿಳಿಯೋಣ.

ವೆಂಕಿ ಪ್ರಕಟಿಸಿದ ಈ ತಂಡದಲ್ಲಿ ಆರಂಭಿಕರಾಗಿ ವಿರೇಂದ್ರ ಸೆಹ್ವಾಗ್ ಮತ್ತು ಸಚಿನ್ ತೆಂಡೂಲ್ಕರ್ ಸ್ಥಾನ ಪಡೆದಿದ್ದಾರೆ. ಮೂರನೇ ಕ್ರಮಾಂಕದಲ್ಲಿ ಕಿಂಗ್ ವಿರಾಟ್ ಕೊಹ್ಲಿ ಸ್ಥಾನ ಪಡೆದರೇ, ನಾಲ್ಕನೇ ಕ್ರಮಾಂಕದಲ್ಲಿ ಸ್ಥಾನ ಪಡೆದವರು ಮಾಜಿ ನಾಯಕ ಅಜರುದ್ದೀನ್. ಐದನೇ ಕ್ರಮಾಂಕದಲ್ಲಿ ಆಲ್ ರೌಂಡರ್ ಯುವರಾಜ್ ಸಿಂಗ್ ಇದ್ದರೇ, ಆರನೇ ಕ್ರಮಾಂಕದಲ್ಲಿ ವಿಕೇಟ್ ಕೀಪರ್ ಧೋನಿ ಸ್ಥಾನ ಪಡೆದಿದ್ದಾರೆ. ಎಳನೇ ಕ್ರಮಾಂಕದಲ್ಲಿ ಆಲ್ ರೌಂಡರ್ ಕಪಿಲ್ ದೇವ್ ಸ್ಥಾನ ಪಡೆದಿದ್ದಾರೆ.

ಎಂಟನೆ ಕ್ರಮಾಂಕದಲ್ಲಿ ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆ, ಒಂಬತ್ತನೇ ಕ್ರಮಾಂಕದಲ್ಲಿ ಟರ್ಬನೆಟರ್ ಹರ್ಭಜನ್ ಸಿಂಗ್ ಸ್ಥಾನ ಪಡೆದಿದ್ದಾರೆ. ಹತ್ತು ಮತ್ತು ಹನ್ನೊಂದನೇ ಕ್ರಮಾಂಕದಲ್ಲಿ ಜಾವಗಲ್ ಶ್ರೀನಾಥ್ ಹಾಗೂ ಜಹೀರ್ ಖಾನ್ ಸ್ಥಾನ ಪಡೆದಿದ್ದಾರೆ. ಈ ತಂಡದಲ್ಲಿ ಆರು ತಜ್ಞ ಬ್ಯಾಟ್ಸಮನ್ ಗಳು, ಒಬ್ಬ ಆಲ್ ರೌಂಡರ್ ಹಾಗೂ ಇಬ್ಬರು ಸ್ಪಿನ್ನರ್ ಗಳು ಮತ್ತು ಇಬ್ಬರು ವೇಗಿಗಳು ಸ್ಥಾನ ಪಡೆಧಿದ್ದಾರೆ. ತಂಡ ಇಂತಿದೆ : ಸಚಿನ್ ತೆಂಡೂಲ್ಕರ್, ವಿರೇಂದ್ರ ಸೆಹ್ವಾಗ್, ವಿರಾಟ್ ಕೊಹ್ಲಿ, ಮಹಮದ್ ಅಜರ್, ಯುವರಾಜ್ ಸಿಂಗ್, ಎಂ.ಎಸ್.ಧೋನಿ, ಕಪಿಲ್ ದೇವ್, ಅನಿಲ್ ಕುಂಬ್ಳೆ, ಹರ್ಭಜನ್ ಸಿಂಗ್, ಜಾವಗಲ್ ಶ್ರೀನಾಥ್, ಜಹೀರ್ ಖಾನ್.

Get real time updates directly on you device, subscribe now.