ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಭಾರತ ಕ್ರಿಕೆಟ್ ತಂಡದ ಭವಿಷ್ಯದ ನಾಯಕನನ್ನು ಆಯ್ಕೆ ಮಾಡಿ ಭವಿಷ್ಯ ನುಡಿದ ಗೌತಮ್ ಗಂಭೀರ್, ಯಾರಂತೆ ಗೊತ್ತೇ??

18

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಐಪಿಎಲ್ ನ ಹೊಸತಂಡವಾದ ಲಕ್ನೋ ಸೂಪರ್ ಜೈಂಟ್ಸ್ ತಂಡದ ಕೋಚ್ ಗೌತಮ್ ಗಂಭೀರ್ ಮೊದಲ ಭಾರಿಗೆ ಆ ತಂಡದ ನಾಯಕನ ಬಗ್ಗೆ ಹೊಗಳಿದ್ದಾರೆ. ಹೌದು ಕೆಲದಿನಗಳ ಹಿಂದೆ ಭಾರತ ತಂಡ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಾಗ, ಅಲ್ಲಿ ಕನ್ಧಡಿಗ ಕೆ.ಎಲ್.ರಾಹುಲ್ ಅನೀರಿಕ್ಷಿತವಾಗಿ ನಾಯಕನ ಪಟ್ಟ ಅಲಂಕರಿಸುವಂತಾಯಿತು. ಆದರೇ ರಾಹುಲ್ ಅಲ್ಲಿ ನಾಯಕನಾಗಿ ಆಡಿದ ಎಲ್ಲಾ ಪಂದ್ಯಗಳಲ್ಲೂ ಸೋಲನ್ನು ಅನುಭವಿಸಬೇಕಾಯಿತು.

ಆಗ ರಾಹುಲ್ ನಾಯಕತ್ವದ ಶೈಲಿಯ ಬಗ್ಗೆ ಹಲವಾರು ದೂರುಗಳು ಕೇಳಿ ಬಂದವು. ಆಗ ಖುದ್ದು ಗೌತಮ್ ಗಂಭೀರ್ ಸಹ ಟೀಕಿಸಿದ್ದರು. ಆದರೇ ಈಗ ಗೌತಮ್ ಗಂಭೀರ್, ರಾಹುಲ್ ಭವಿಷ್ಯದಲ್ಲಿ ಉತ್ತಮ ನಾಯಕರಾಗಬಲ್ಲರು ಎಂದು ಹಾಡಿ ಹೊಗಳಿರುವುದಲ್ಲದೇ, ಅದಕ್ಕೆ ಸೂಕ್ತ ಕಾರಣ ನೀಡಿದ್ದಾರೆ. ಗೌತಮ್ ಗಂಭೀರ್ ಪ್ರಕಾರ, ನಾಯಕನಿಗಿರುವ ಮೊದಲ ಗುಣ ಎಂದರೇ, ಸೋಲು ಮತ್ತು ಗೆಲುವನ್ನು ಸಮಚಿತ್ತದಿಂದ ಸ್ವೀಕರಿಸಬೇಕು. ಗೆದ್ದಾಗ ಹಿಗ್ಗದೇ, ಸೋತಾಗ ಕುಗ್ಗದೇ ಸಮಾಧಾನದಿಂದಿರಬೇಕು.

ತಂಡದ ಆಟಗಾರರಲ್ಲಿ ಸದಾ ಆತ್ಮವಿಶ್ವಾಸ ತುಂಬುತ್ತಾ ತಂಡವನ್ನು ಮುನ್ನಡೆಸಬೇಕು. ಹಾಗೂ ಇದಕ್ಕೆಲ್ಲಾ ಮುಖ್ಯವಾಗಿ, ನಾಯಕನಿಗೆ ಅಪರಿಮಿತವಾದ ತಾಳ್ಮೆ ಇರಬೇಕು. ಹಾಗಾದಾಗ ಮಾತ್ರ ತಂಡದಲ್ಲಿ ಉತ್ತಮವಾದ ವಾತಾವರಣ ಇರುತ್ತದೆ. ತಾಳ್ಮೆ,ಸಮಾಧಾನ ಮತ್ತು ಇತರರಿಗೆ ಉತ್ತೇಜನ ಮಾಡುವಂತಹ ಹೇರಳವಾದ ಗುಣಗಳು ಕೆ.ಎಲ್.ರಾಹುಲ್ ರಲ್ಲಿ ಬಹಳಷ್ಟಿವೆ. ಹಾಗಾಗಿ ರಾಹುಲ್ ಖಂಡಿತವಾಗಿಯೂ ಭವಿಷ್ಯದಲ್ಲಿ ಉತ್ತಮ ನಾಯಕರಾಗಬಲ್ಲರು ಎಂಬುದು ಗೌತಮ್ ಗಂಭೀರ್ ರವರ ಅಭಿಪ್ರಾಯ. ಸದ್ಯ ಹೊಸ ತಂಡವಾಗಿರುವ ಲಕ್ನೋ ಸೂಪರ್ ಜೈಂಟ್ಸ್ ಗಾಗಿ ನಾಯಕ ರಾಹುಲ್ ಹಾಗೂ ಕೋಚ್ ಗಂಭೀರ್ ಸೂಕ್ತ ತಂಡವನ್ನು ಕಟ್ಟಲು ಎದುರು ನೋಡುತ್ತಿದ್ದಾರೆ. ಹರಾಜಿನಲ್ಲಿ ಯಾವ ಆಟಗಾರರನ್ನು ಖರೀದಿಸಬೇಕೆಂಬ ಮಾಸ್ಟರ್ ಪ್ಲಾನ್ ಸಹ ರೂಪಿಸಿದ್ದಾರೆ. ಕೆಲವೇ ದಿನಗಳಲ್ಲಿ ಹರಾಜು ನಡೆಯಲಿದ್ದು ಯಾವ ಯಾವ ಆಟಗಾರರು ಯಾವ ತಂಡ ಸೇರುತ್ತಾರೆಂಬುದು ತಿಳಿಯುತ್ತದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.

Get real time updates directly on you device, subscribe now.