ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಈತನೇ ಆರ್ಸಿಬಿ ತಂಡದ ಪ್ರಮುಖ ಟಾರ್ಗೆಟ್, ಕೊಹ್ಲಿ ಗಿಂತ ಹೆಚ್ಚಿನ ಹಣ ನೀಡಿ ಆರ್ಸಿಬಿ ಖರೀದಿ ಮಾಡಲಿದೆ ಎಂದ ಮಾಜಿ ಕ್ರಿಕೆಟಿಗ. ಯಾರಂತೆ ಗೊತ್ತೇ??

14

ನಮಸ್ಕಾರ ಸ್ನೇಹಿತರೇ ಐಪಿಎಲ್ ನ ಆಟಗಾರರ ಮೆಗಾ ಹರಾಜು ಇದೇ ಫೆಬ್ರವರಿ 12 ಹಾಗೂ 13 ರಂದು ಬೆಂಗಳೂರಿನ ಪ್ರತಿಷ್ಠಿತ ಪಂಚತಾರಾ ಹೋಟೆಲ್ ನಲ್ಲಿ ನಡೆಯಲಿದೆ. ಈಗಾಗಲೇ ಎಲ್ಲಾ ಫ್ರಾಂಚೈಸಿಗಳು, ಹರಾಜಿನಲ್ಲಿ ಯಾವ ಯಾವ ಆಟಗಾರನನ್ನು ಖರೀದಿಸಬೇಕು ಹಾಗೂ ಯಾವ ಆಟಗಾರನಿಗೆ ಎಷ್ಟು ಹಣ ಹೂಡಬೇಕು ಎಂಬುದನ್ನು ಪ್ಲಾನ್ ಮಾಡಿಟ್ಟುಕೊಂಡಿವೆ. ಈ ನಡುವೆ ಭಾರತ ತಂಡದ ಮಾಜಿ ಆಟಗಾರ ಹಾಗೂ ಖ್ಯಾತ ವೀಕ್ಷಕ ವಿವರಣೆಗಾರ ಆಕಾಶ್ ಚೋಪ್ರಾ ಮಾತನಾಡಿದ್ದು, ಆರ್ಸಿಬಿ ತಂಡದ ಬಗ್ಗೆ ಒಂದು ಶಾಕಿಂಗ್ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.

ಹೌದು ಆರ್ಸಿಬಿ ಫ್ರಾಂಚೈಸಿ ಹರಾಜಿನಲ್ಲಿ ಈ ಆಟಗಾರನನ್ನು ಖರೀದಿಸಲು ಬರೋಬ್ಬರಿ 20 ಕೋಟಿ ರೂಪಾಯಿ ಮೀಸಲಿರಿಸಿದೆ ಎಂಬ ಮಾಹಿತಿ ನನಗೆ ಬಂದಿದೆ. ಒಂದು ವೇಳೆ ಆರ್ಸಿಬಿ ಈ ಆಟಗಾರನನ್ನು ಖರೀದಿಸಲು ಶತಾಯಗತಾಯ ಪ್ರಯತ್ನಿಸಿದರೇ ಆಗ ಈ ಆಟಗಾರ ಐಪಿಎಲ್ ಇತಿಹಾಸದಲ್ಲಿಯೇ ಅತ್ಯಂತ ದುಬಾರಿ ಆಟಗಾರನಾಗಿ ಹೊರಹೊಮ್ಮುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ.

ಅಷ್ಟಕ್ಕೂ ಆರ್ಸಿಬಿ ಖರೀದಿಸಲು 20 ಕೋಟಿ ಮೀಸಲಿರಿಸಿರುವ ಆಟಗಾರ ಬೇರಾರೂ ಅಲ್ಲ, ಅದು ಬ್ಯಾಟ್ಸಮನ್ ಶ್ರೇಯಸ್ ಅಯ್ಯರ್. ಹೌದು ಈ ಭಾರಿ ಅಯ್ಯರ್ ಅವರನ್ನು ಖರೀದಿಸಿ, ಅವರನ್ನ ವಿರಾಟ್ ಕೊಹ್ಲಿಯಿಂದ ತೆರವಾಗಿರುವ ನಾಯಕನ ಸ್ಥಾನಕ್ಕೆ ಕೂರಿಸಲು ಆರ್ಸಿಬಿ ಮ್ಯಾನೇಜ್ ಮೆಂಟ್ ಸಿದ್ದವಾಗಿದೆ. ಹಾಗಾಗಿ ಶ್ರೇಯಸ್ ಅಯ್ಯರ್ ಒಂದು ವೇಳೆ ಹರಾಜಿನಲ್ಲಿ ದುಬಾರಿಯಾದರೇ, ಅವರ ಬೆಲೆ 20 ಕೋಟಿ ಮುಟ್ಟಿದರೂ, ಸಹ ಅವರನ್ನು ಖರೀದಿಸಿಯೇ ತೀರಬೇಕು ಎಂಬ ಯೋಜನೆ ಆರ್ಸಿಬಿ ಫ್ರಾಂಚೈಸಿ ಹಾಕಿಕೊಂಡಿದೆ ಎಂದು ಆಕಾಶ್ ಚೋಪ್ರಾ ತಿಳಿಸಿದ್ದಾರೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.