ಕೊಹ್ಲಿ ನಾಯಕನಾಗಲು ಒಪ್ಪದೇ ಹೋದರೇ, ಆರ್ಸಿಬಿ ಹರಾಜಿನಲ್ಲಿ ಈ ಮೂರು ನಾಯಕರನ್ನು ಟಾರ್ಗೆಟ್ ಮಾಡುವುದು ಪಕ್ಕ, ನಾಯಕನ ಸ್ಥಾನ ಯಾರು ತುಂಬಬಹುದು??

ಕೊಹ್ಲಿ ನಾಯಕನಾಗಲು ಒಪ್ಪದೇ ಹೋದರೇ, ಆರ್ಸಿಬಿ ಹರಾಜಿನಲ್ಲಿ ಈ ಮೂರು ನಾಯಕರನ್ನು ಟಾರ್ಗೆಟ್ ಮಾಡುವುದು ಪಕ್ಕ, ನಾಯಕನ ಸ್ಥಾನ ಯಾರು ತುಂಬಬಹುದು??

ನಮಸ್ಕಾರ ಸ್ನೇಹಿತರೇ ಐಪಿಎಲ್ 2022 ರ ಹರಾಜು ಇನ್ನು ಕೆಲವೇ ದಿನಗಳಲ್ಲಿ ನಡೆಯುತ್ತಿದೆ. ಅದಕ್ಕಾಗಿ ಎಲ್ಲಾ ಫ್ರಾಂಚೈಸಿಗಳು ಸೂಕ್ತ ಆಟಗಾರರನ್ನು ಖರೀದಿಸಲು ಬ್ಲೂ ಪ್ರಿಂಟ್ ಸಿದ್ಲಪಡಿಸಿಕೊಂಡಿವೆ. ಈ ನಡುವೆ ಆರ್ಸಿಬಿ ತಂಡ ಸಹ ಸಿದ್ದವಾಗಿದ್ದು, ಸದ್ಯ ವಿರಾಟ್ ಕೊಹ್ಲಿಯವರ ರಾಜೀನಾಮೆಯಿಂದ ತೆರವಾಗಿರುವ ನಾಯಕನ ಸ್ಥಾನವನ್ನು ತುಂಬಲು, ಮೂವರು ಆಟಗಾರರ ಮೇಲೆ ಕಣ್ಣಿಟ್ಟಿದೆಯಂತೆ. ಬನ್ನಿ ಆ ಆಟಗಾರರು ಯಾರು ಎಂಬುದನ್ನು ತಿಳಿಯೋಣ.

1.ಡೇವಿಡ್ ವಾರ್ನರ್ : ಆಸ್ಟ್ರೇಲಿಯಾದ ಈ ಆಟಗಾರನನ್ನ ಖರೀದಿಸಿ, ಇವರಿಗೆ ನಾಯಕತ್ವವಹಿಸುವುದು ಆರ್ಸಿಬಿಯ ಮೊದಲ ಪ್ಲಾನ್ ಆಗಿದೆ. ಅದಲ್ಲದೇ ವಿರಾಟ್ ಮತ್ತು ವಾರ್ನರ್ ನಡುವಿನ ಸ್ನೇಹ ಕೂಡಾ ಚೆನ್ನಾಗಿದ್ದು, ವಾರ್ನರ್ ಆರ್ಸಿಬಿಗೆ ಬಂದರೇ ಬಹಳಷ್ಟು ಲಾಭವಿದೆ.

2.ಶ್ರೇಯಸ್ ಅಯ್ಯರ್ : ಭಾರತದ ಭವಿಷ್ಯದ ನಾಯಕ ಎಂದೇ ಬಿಂಬಿತವಾಗಿರುವ ಅಯ್ಯರ್ , ನಾಯಕ ಸ್ಥಾನ ನೀಡುವುದಿಲ್ಲ ಎಂಬ ಕಾರಣಕ್ಕೆ ಅಹಮದಾಬಾದ್ ಫ್ರಾಂಚೈಸಿ ತೊರೆದರು. ಹಾಗಾಗಿ ಅವರನ್ನು ಖರೀದಿಸಿ, ನಾಯಕ ಸ್ಥಾನ ನೀಡುವುದು ಸದ್ಯ ಆರ್ಸಿಬಿಯ ಯೋಚನೆಯಾಗಿದೆ. ಅದಲ್ಲದೇ ಮಧ್ಯಮ ಕ್ರಮಾಂಕದಲ್ಲಿ ಇವರು ಭರವಸೆಯ ಬ್ಯಾಟ್ಸಮನ್ ಸಹ ಆಗಿದ್ದಾರೆ.

3.ಇಶಾನ್ ಕಿಶನ್ : ಆರಂಭಿಕ ಬ್ಯಾಟ್ಸಮನ್ ಕಮ್ ವಿಕೇಟ್ ಕೀಪರ್ ಆಗಿರುವ ಇಶಾನ್ ಕಿಶನ್ ಗೆ ಈಗಾಗಲೇ ರಣಜಿಯಲ್ಲಿ ಜಾರ್ಖಂಡ್ ತಂಡದ ನಾಯಕತ್ವ ನಿಭಾಯಿಸಿದ ಅನುಭವವಿದೆ. ಮೇಲಿನ ಎರಡು ಆಯ್ಕೆಗಳು ಲಭ್ಯವಾಗದ ಸಂದರ್ಭದಲ್ಲಿ, ಇಶಾನ್ ಕಿಶನ್ ರನ್ನು ಖರೀದಿಸಿ, ಅವರಿಗೆ ನಾಯಕತ್ವ ವಹಿಸುವ ಪ್ಲಾನ್ ನಲ್ಲಿದೆ ಆರ್ಸಿಬಿ ಮ್ಯಾನೇಜ್ ಮೆಂಟ್. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.