ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಎಬಿಡಿ ನಿವೃತ್ತಿಯಾದರೆ ಏನಂತೆ, ಆಟವಾಡುವ ಹನ್ನೊಂದರ ಬಳಗದಲ್ಲಿ ಎಬಿಡಿ ಹವಾ ಉಳಿಸಲು ಮತ್ತೊಂದು ಯೋಜನೆ ರೂಪಿಸಿದ ಆರ್ಸಿಬಿ. ಏನು ಗೊತ್ತೇ??

33

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಆರ್ಸಿಬಿ ಐಪಿಎಲ್ ನಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ತಂಡ. ಆರ್ಸಿಬಿಯ ಕ್ರೇಜ್ ಅಭಿಮಾನಿಗಳಲ್ಲಿ ಜಾಸ್ತಿ ಆಗುವುದಕ್ಕೆ ಕಾರಣ ಒಂದು ಕ್ರಿಸ್ ಗೇಲ್ ಆದರೇ ಮತ್ತೊಂದು ಎಬಿ.ಡಿ.ವಿಲಿಯರ್ಸ್. ಅದರಲ್ಲೂ ಎಬಿ ಡಿ ವಿಲಿಯರ್ಸ್ ಅಂದರೇ ಆರ್ಸಿಬಿ ಅಭಿಮಾನಿಗಳ ಪಾಲಿಗೆ ಅಚ್ಚುಮೆಚ್ಚು. ಎಬಿಡಿಯವರನ್ನ ಆರ್ಸಿಬಿ ಪಾಲಿನ ಆಪತ್ಭಾಂದವ ಎಂದೇ ಹೇಳುತ್ತಾರೆ.

ಆದರೇ ಸದ್ಯ ಎಬಿ ಡಿ ವಿಲಿಯರ್ಸ್ ಎಲ್ಲಾ ಮಾದರಿಯ ಕ್ರಿಕೇಟ್ ನಿಂದ ನಿವೃತ್ತಿ ಹೊಂದಿದ ಕಾರಣ ಇನ್ನು ಮುಂದೆ ಮೈದಾನದಲ್ಲಿ ಕಾಣಸಿಗುವುದಿಲ್ಲ. ಆರ್ಸಿಬಿಯ ಬ್ಯಾಟಿಂಗ್ ಸಲಹೆಗಾರರಾಗಿ ಎಬಿ ಡಿ ವಿಲಿಯರ್ಸ್ ಕಾಣಿಸಿಕೊಳ್ಳುವ ನೀರಿಕ್ಷೆಯಿದೆ. ಈ ಮಧ್ಯೆ ಎಬಿ ಡಿ ವಿಲಿಯರ್ಸ್ ರವರ ಅನುಪಸ್ಥಿತಿಯನ್ನು ಮೈದಾನದಲ್ಲಿ ಕಾಣದಂತೆ ಮಾಡಲು ಆರ್ಸಿಬಿ ತಂಡ ಒಂದು ಮಾಸ್ಟರ್ ಯೋಜನೆ ನಿರೂಪಿಸಿದೆ.

ಅದರ ಪ್ರಕಾರ ಬೇಬಿ ಎಬಿಯನ್ನು ಕರೆತರಲು ಚಿಂತಿಸಿದೆ. ಹೌದು ಸದ್ಯ ನಡೆಯುತ್ತಿರುವ ಅಂಡರ್ 19 ವಿಶ್ವಕಪ್ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಡೆವಾಲ್ಡ್ ಬ್ರೆವಿಸ್ ರನ್ನು ಕರೆತರಲು ಚಿಂತಿಸಿದೆ. ಎಬಿಡಿ ಗರಡಿಯಲ್ಲಿ ಪಳಗಿರುವ ಬ್ರೆವಿಸ್ ಥೇಟ್ ಎಬಿಡಿಯಂತೆ 360 ಡಿಗ್ರಿಯಲ್ಲಿ ಬ್ಯಾಟ್ ಬೀಸುತ್ತಾರಂತೆ. ಈಗಾಗಲೇ ಅಂಡರ್ 19 ವಿಶ್ವಕಪ್ ನಲ್ಲಿ ಒಂದು ಶತಕ ಹಾಗೂ ಮೂರು ಅರ್ಧ ಶತಕ ಗಳಿಸಿದ್ದಾರೆ. ಹಾಗೂ ಆರು ವಿಕೇಟ್ ಸಹ ಗಳಿಸಿದ್ದಾರೆ. ಈ ಕಾರಣಕ್ಕಾಗಿ ಈ ಆಲ್ ರೌಂಡರ್ ನ್ನು ತರಲು ಆರ್ಸಿಬಿ ಮ್ಯಾನೇಜ್ ಮೆಂಟ್ ಎಲ್ಲಾ ಥರಹದ ಪ್ರಯತ್ನ ಪಡುತ್ತಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.

Get real time updates directly on you device, subscribe now.