ತಿಂಡಿ ಮಾಡಲು ಸಮಯವಿಲ್ಲವೇ, ತಿಂದಿದ್ದೆ ತಿಂದು ಬೋರ್ ಆಗಿದ್ಯಾ?? ಹಾಗಿದ್ರೆ ದಿಡೀರ್ ಎಂದು ಟ್ರೈ ಮಾಡಿ ಹೊಸ ರೀತಿಯ ಟೊಮ್ಯಾಟೊ ಬಾತ್ ಹೇಗೆ ಮಾಡುವುದು ಗೊತ್ತೇ??

ತಿಂಡಿ ಮಾಡಲು ಸಮಯವಿಲ್ಲವೇ, ತಿಂದಿದ್ದೆ ತಿಂದು ಬೋರ್ ಆಗಿದ್ಯಾ?? ಹಾಗಿದ್ರೆ ದಿಡೀರ್ ಎಂದು ಟ್ರೈ ಮಾಡಿ ಹೊಸ ರೀತಿಯ ಟೊಮ್ಯಾಟೊ ಬಾತ್ ಹೇಗೆ ಮಾಡುವುದು ಗೊತ್ತೇ??

ನಮಸ್ಕಾರ ಸ್ನೇಹಿತರೇ ಒಮ್ಮೆಮ್ಮೊ ಪುರುಸೋತ್ತೆ ಇರಲ್ಲ, ಅಥವಾ ಬೇಕಾದ ತಿಂಡಿ ಮಾಡಲು ವಸ್ತುಗಳೂ ಇರಲ್ಲ, ಹಾಗಿರುವಾಗ ಮನೆಯಲ್ಲಿರುವ ಅವಲಕ್ಕಿ ಒಮ್ದು ಇದ್ರೆ ಸಾಕು ಸೂಪರ್ ಆಗಿ ಒಂದು ಅವಲಕ್ಕಿ ಬಾತ್ ರೆಡಿ ಮಾಡಿ ಬಿಡಬಹುದು. ಹೇಗೆ ಅಂತಿರಾ? ಇಲ್ಲಿದೆ ನೋಡಿ ರೆಸಿಪಿ. ಬೇಕಾಗುವ ಸಾಮಾಗ್ರಿಗಳು: ಒಂದು ಚಮಚ ತುಪ್ಪ, ೮-೧೦ ಗೋಡಂಬಿ, ಒಂದು ಚಮಚ ಸಾಸಿವೆ, ಹಸಿ ಶುಂಠಿ, ಬೆಳ್ಳುಳ್ಳಿ ಸ್ವಲ್ಪ, ಹಸಿ ಮೆಣಸಿನಕಾಯಿ ೨-೩, ಒಂದು ಈರುಳ್ಳಿ, ೨ ಟೊಮೆಟೊ,ಬೇಯಿಸಿದ ಬಟಾಣಿ ಸ್ವಲ್ಪ, ಅರಸಿನ ಪುಡಿ ಕಾಲು ಚಮಚ, ಉಪ್ಪು – ರುಚಿಗೆ ತಕ್ಕಷ್ಟು, ಪುದಿನ ಎಲೆ ಸ್ವಲ್ಪ, ಕೊತ್ತಂಬರಿ ಸೊಪ್ಪು ಸ್ವಲ್ಪ, ಒಂದು ಕಪ್ ದಪ್ಪ ಅವಲಕ್ಕಿ, ಅರ್ಧ ಕಪ್ ತೆಂಗಿನ ತುರಿ, ಒಂದು ಚಮಚ ನಿಂಬೆ ರಸ, ಉಪ್ಪು ರುಚಿಗೆ.

ಮಾಡುವ ವಿಧಾನ: ಮೊದಲು ಒಂದು ಬಾಣಲೆಗೆ ತುಪ್ಪವನ್ನು ಹಾಕಿ ಬಿಸಿಗಿಡಿ. ೮ ರಿಂದ ೧೦ ಗೋಡಂಬಿ ಹಾಕಿ ಕಂದು ಬಣ್ಣ ಬರುವವರೆಗೂ ಹುರಿದು ತೆಗೆದಿಟ್ಟುಕೊಳ್ಳಿ. ಈಗ ಅದೇ ಬಾಣಲೆಗೆ ಸಾಸಿವೆ ಹಾಕಿ, ನಂತರ ಇದಕ್ಕೆ ಹೆಚ್ಚಿದ ಹಸಿ ಶುಂಠಿ, ಹೆಚ್ಚಿದ ಬೆಳ್ಳುಳ್ಳಿ ಹಾಕಿ ಹುರಿಯಿರಿ. ನಂತರ ಇದಕ್ಕೆ ಕತ್ತರಿಸಿದ ಹಸಿ ಮೆಣಸಿನಕಾಯಿ ಹಾಕಿ ಹುರಿಯಿರಿ. ನಂತರ ಹೆಚ್ಚಿದ ಈರುಳ್ಳಿ ಹಾಕಿ ಅದು ಸ್ವಲ್ಪ ಬೇಯುವವರೆಗೆ ಹುರಿಯಿರಿ. ಬಳಿಕ ಸಣ್ಣಗೆ ಹೆಚ್ಚಿದ ಟೊಮೆಟೊ ಹಾಕಿ ಚೆನ್ನಾಗಿ ಕಲಸಿ. ಈಗ ಇದಕ್ಕೆ ಬೇಯಿಸಿದ ಬಟಾಣಿ, ಕಾಲು ಚಮಚ ಅರಶಿನ ಪುಡಿ, ಅರ್ಧ ಚಮಚ ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.

ನಂತರ ಇದಕ್ಕೆ ಸ್ವಲ್ಪ ಪುದಿನ ಎಲೆ, ಸ್ವಲ್ಪ ಕೊತ್ತಂಬರಿ ಸೊಪ್ಪು ಹಾಕಿ ಕಲಸಿ, ಬಳಿಕ ಮುಚ್ಚಳ ಮುಚ್ಚಿ ೨ ನಿಮಿಷ ಸಣ್ಣ ಉರಿಯಲ್ಲಿ ಬೇಯಿಸಿಕೊಳ್ಳಿ. ಇದು ಬೆಂದ ನಂತರ ಒಂದು ಕಪ್ ತೊಳೆದು, ೫ ನಿಮಿಷ ನೆನೆಸಿದ ದಪ್ಪ ಅವಲಕ್ಕಿ ಹಾಕಿ ಮಿಶ್ರಣ ಮಾಡಿ. ಮತ್ತೆ ಮುಚ್ಚಳ ಮುಚ್ಚಿ ಎರಡು ನಿಮಿಷ ಬೇಯಿಸಿಕೊಳ್ಳಿ. ಕೊನೆಗೆ ಚೆನ್ನಾಗಿ ಕಲಸಿ, ಅದಕ್ಕೆ ತೆಂಗಿನ ತುರಿ ಹಾಗೂ ನಿಂಬೆ ರಸ ಹಾಕಿ ಅಲಂಕಾರಕ್ಕೆ ಕೊತ್ತಂಬರಿ ಸೊಪ್ಪನ್ನು ಹಾಕಿದರೆ ರುಚಿಕರವಾದ ಅವಲಕ್ಕಿ ಬಾತ್ ರೆಡಿ. ಇದನ್ನು ಮೊಸರಿನೊಂದಿಗೆ ಸವಿಯಬಹುದು. ಈ ರೆಸಿಪಿ ಮಾಡುವ ವಿಧಾನ ಕೆಳಗಿನ ವಿಡಿಯೋ ನೋಡಿಯೂ ತಿಳಿದುಕೊಳ್ಳಬಹುದು.