ಕರುನಾಡ ವಾಣಿ
ಇದು ನಿಮ್ಮ ಧ್ವನಿ

ವಿಂಡೀಸ್ ವಿರುದ್ದದ ಸರಣಿಗೆ, ಕೊರೊನ ಇಂದ ಮತ್ತೊಬ್ಬ ಕನ್ನಡಿಗನಿಗೆ ಹೊಡೆಯಿತು ಜಾಕ್ ಪಾಟ್, ಆಯ್ಕೆಯಾದವರು ಯಾರು ಗೊತ್ತೇ??

10

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ವೆಸ್ಟ್ ಇಂಡೀಸ್ ವಿರುದ್ದದ ಸರಣಿ ಫೆಬ್ರವರಿ 6 ರಿಂದ ಆರಂಭವಾಗಲಿದೆ. ಮೊದಲು ಮೂರು ಏಕದಿನ ಪಂದ್ಯಗಳ ಸರಣಿ ಅಹಮದಾಬಾದ್ ನಲ್ಲಿ ನಡೆದರೇ, ನಂತರ ಮೂರು ಟಿ 20 ಪಂದ್ಯಗಳು ಕೋಲ್ಕತ್ತಾದ ಈಡನ್ ಗಾರ್ಡನ್ಸ್ ನಲ್ಲಿ ನಡೆಯಲಿವೆ. ಈಗಾಗಲೇ ಟೀಮ್ ಇಂಡಿಯಾ ಈ ಮಹತ್ವದ ಸರಣಿಗೆ ತಾಲೀಮು ನಡೆಸುತ್ತಿತ್ತು. ಆದರೇ ಟೀಮ್ ಇಂಡಿಯಾಗೆ ಈಗ ಕಹಿ ಸುದ್ದಿಯೊಂದು ಬಂದೆರೆಗಿದ್ದು, ತಂಡದ ಮೂರಕ್ಕು ಹೆಚ್ಚು ಆಟಗಾರರು ಕೋವಿಡ್ ಪಾಸಿಟಿವ್ ಆಗಿದ್ದಾರೆ.

ತಂಡದ ಪ್ರಮುಖ ಆಟಗಾರರಾದ ಶಿಖರ್ ಧವನ್, ರುತುರಾಜ್ ಗಾಯಕ್ವಾಡ್, ಶ್ರೇಯಸ್ ಅಯ್ಯರ್, ಮತ್ತು ಮೀಸಲು ಆಟಗಾರರಾಗಿ ಆಯ್ಕೆಯಾಗಿದ್ದ ನವದೀಪ್ ಸೈನಿ ಸಹ ಕೋವಿಡ್ ಪಾಸಿಟಿವ್ ಆಗಿದ್ದು, ಈ ಪ್ರಕರಣ ಈಗ ಟೀಮ್ ಇಂಡಿಯಾ ಮ್ಯಾನೇಜ್ ಮೆಂಟ್ ಗೆ ತಲೆನೋವಾಗಿ ಪರಿಣಮಿಸಿದೆ. ಹೀಗಾಗಿ ಏಕದಿನ ತಂಡದಿಂದ ಹೊರಬಿದ್ದ ಕನ್ನಡಿಗ ಆಟಗಾರನಿಗೆ ಅದೃಷ್ಠ ಖುಲಾಯಿಸಿದೆ ಎಂದು ಹೇಳಬಹುದು.

ಹೌದು ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಉತ್ತಮ ಆಟವಾಡಿದ್ದ ಮಯಾಂಕ್ ಅಗರ್ವಾಲ್ , ನಂತರ ಏಕದಿನ ತಂಡದಲ್ಲಿ ಸ್ಥಾನ ಗಿಟ್ಟಿಸಲು ವಿಫಲರಾಗಿದ್ದರು. ಆದರೇ ಈಗ ತಂಡದ ಪ್ರಮುಖ ಆಟಗಾರರು ಕೋವಿಡ್ ಪಾಸಿಟಿವ್ ಗೆ ಒಳಗಾದ ಕಾರಣ, ಮಯಾಂಕ್ ಅಗರ್ವಾಲ್ ರಿಗೆ ತಂಡದಲ್ಲಿ ಸ್ಥಾನ ಸಿಕ್ಕಿದೆ. ಮೊದಲ ಪಂದ್ಯದಿಂದ ಕೆ.ಎಲ್.ರಾಹುಲ್ ಹೊರಗುಳಿಯುವ ಕಾರಣ, ಮಯಾಂಕ್ ಗೆ ಆಡುವ ಹನ್ನೊಂದರ ಬಳಗದಲ್ಲಿ ಆಡುವ ಅವಕಾಶ ಸಿಕ್ಕರೂ ಸಿಗಬಹುದು. ಈ ಅವಕಾಶವನ್ನು ಮಯಾಂಕ್ ಹೇಗೆ ಉಪಯೋಗಿಸಿಕೊಳ್ಳುತ್ತಾರೆಂಬುದನ್ನು ಕಾದು ನೋಡಬೇಕು. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.

Get real time updates directly on you device, subscribe now.