ನನ್ನನ್ನು ಖರೀದಿ ಮಾಡಬೇಕು ಎಂದರೆ ಹೀಗೆ ಮಾಡಿ, ಎಂದು ಫ್ರಾಂಚೈಸಿಗಳಿಗೆ ಟಿಪ್ಸ್ ಕೊಟ್ಟ ಚಾಹಲ್. ಏನಂತೆ ಗೊತ್ತೇ??

ನನ್ನನ್ನು ಖರೀದಿ ಮಾಡಬೇಕು ಎಂದರೆ ಹೀಗೆ ಮಾಡಿ, ಎಂದು ಫ್ರಾಂಚೈಸಿಗಳಿಗೆ ಟಿಪ್ಸ್ ಕೊಟ್ಟ ಚಾಹಲ್. ಏನಂತೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಐಪಿಎಲ್ 2022ರ ಆಟಗಾರರ ಹರಾಜಿಗೆ ಕ್ಷಣಗಣನೆ ಆರಂಭವಾಗಿದೆ.ಇದೇ ಫೆಬ್ರವರಿ 12 ಮತ್ತು 13 ರಂದು ಆಟಗಾರರ ಮೆಗಾ ಹರಾಜು ಬೆಂಗಳೂರಿನಲ್ಲಿ ನಡೆಯಲಿದೆ. ಈ ನಡುವೆ ಯಾವ ಆಟಗಾರ ಹೆಚ್ಚು ಮೊತ್ತಕ್ಕೆ ಹರಾಜಾಗಬಹುದು, ಯಾರು ಯಾವ ಫ್ರಾಂಚೈಸಿ ಪಾಲಾಗಬಹುದು ಎಂಬ ಚರ್ಚೆಗಳು ಜೋರಾಗಿ ನಡೆಯುತ್ತಿವೆ. ಪ್ರತಿ ತಂಡಗಳು ಕೂಡ ತಮ್ಮದೇ ಆದ ಲೆಕ್ಕಾಚಾರದಲ್ಲಿ ಆಟಗಾರರನ್ನು ಖರೀದಿ ಮಾಡಲು ಯೋಜನೆ ರೂಪಿಸುತ್ತಿವೆ.

Follow us on Google News

ಈ ನಡುವೆ ಭಾರತದ ಸ್ಪಿನ್ ಜೋಡಿಯಾದ ಆರ್.ಅಶ್ವಿನ್ ಮತ್ತು ಯುಜವೇಂದ್ರ ಚಾಹಲ್ ಹರಾಜಿನ ಬಗ್ಗೆ ಯೂ ಟ್ಯೂಬ್ ಚಾನೆಲ್ ನಲ್ಲಿ ಮಾತನಾಡಿದ್ದಾರೆ. ಅದಲ್ಲದೇ ತಮ್ಮನ್ನ ಹೇಗೆ ಖರೀದಿಸಬೇಕೆಂದು ಸಹ ಫ್ರಾಂಚೈಸಿಗಳಿಗೆ ಕೆಲವು ಟಿಪ್ಸ್ ಸಹ ನೀಡಿದ್ದಾರೆ. ಚಾಹಲ್ ಪ್ರಕಾರ ಅವರಿಗೆ ಹೆಚ್ಚು ದುಡ್ಡಿನ ಆಸೆ ಇಲ್ಲವಂತೆ. ಅವರು 15 ಹಾಗೂ 16 ಕೋಟಿಗೆ ಹರಾಜಾಗುವುದು ಸಹ ಬೇಡವಂತೆ.

ಬದಲಿಗೆ ಅವರಿಗೆ 8 ರಿಂದ 9 ಕೋಟಿ ಹಣ ಸಿಕ್ಕರೂ ಸಾಕಂತೆ. ಹಾಗಾಗಿ ಫ್ರಾಂಚೈಸಿಗಳು ನನ್ನ ಮೇಲೆ ಹೆಚ್ಚು ಹಣ ಹೂಡಿ ಖರೀದಿಸಬೇಡಿ. ನನ್ನ ಬೆಲೆ ಏನಿದ್ದರೂ 8 ರಿಂದ 9 ಕೋಟಿ ಮಾತ್ರ ಎಂದು ಹೇಳಿದ್ದಾರೆ, ಹಾಗೂ ಹೆಚ್ಚಿನ ತಂಡಗಳು ಟ್ರೈ ಮಾಡಿ, ಅದೃಷ್ಟವಿದ್ದರೆ ಸಿಗುತ್ತೇನೆ ಎಂದಿದ್ದಾರೆ. ಐಪಿಎಲ್ ನಲ್ಲಿ ಆರ್ಸಿಬಿ ಪರ ಅತಿ ಹೆಚ್ಚು ವಿಕೇಟ್ ತೆಗೆದಿರುವ ಸಾಧನೆ ಮಾಡಿರುವ ಚಾಹಲ್, ಉತ್ತಮ ವಿಕೇಟ್ ಟೇಕಿಂಗ್ ಬೌಲರ್ ಆಗಿರುವ ಕಾರಣ ಅವರು ಹೆಚ್ಚು ಮೊತ್ತಕ್ಕೆ ಹರಾಜಾಗುವ ನೀರಿಕ್ಷೆ ಇದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.