ಸೋಲಿಲ್ಲದ ಸರದಾರನಾಗಿದ್ದ ಅಂಬಾನಿ ಜಿಯೋ ಓಟಕ್ಕೆ ಬ್ರೇಕ್ ಹಾಕಿದ ಟಾಟಾ, ಗ್ರಾಹಕರಿಗೆ ಭರ್ಜರಿ ಸಿಹಿ ಸುದ್ದಿ. ಏನು ಗೊತ್ತೇ??

ಸೋಲಿಲ್ಲದ ಸರದಾರನಾಗಿದ್ದ ಅಂಬಾನಿ ಜಿಯೋ ಓಟಕ್ಕೆ ಬ್ರೇಕ್ ಹಾಕಿದ ಟಾಟಾ, ಗ್ರಾಹಕರಿಗೆ ಭರ್ಜರಿ ಸಿಹಿ ಸುದ್ದಿ. ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಟೆಲಿಕಾಂ ಹಾಗೂ ಸ್ಯಾಟಲೈಟ್ ಕ್ಷೇತ್ರದಲ್ಲಿ ಜಿಯೋ ದೊಡ್ಡ ಹೆಸರು ಪಡೆದಿದೆ. ಕೆಲವೇ ವರ್ಷಗಳ ಹಿಂದೆ ಲಾಂಚ್ ಆದರೂ ಜಿಯೋ ಫೈಬರ್ , ಬೇರೆಲ್ಲಾ ಬ್ರಾಡ್ ಬಾಂಡ್ ಗಳಿಗೆ ಸವಾಲು ಹಾಕಿ ನಂಬರ್ 1 ಆಗಿ ಗಮನ ಸೆಳೆದಿತ್ತು. ಆದರೇ ಈಗ ದೇಶದ ದೈತ್ಯ ಸಂಸ್ಥೆ ಟಾಟಾ, ಬ್ರಾಡ್ ಬ್ರಾಂಡ್ ಕ್ಷೇತ್ರದಲ್ಲಿ ಟಾಟಾ ಸ್ಕೈ ತನ್ನ ಹೆಸರನ್ನು ಈಗ ಟಾಟಾ ಪ್ಲೇ ಎಂದು ಬದಲಾಯಿಸಿದೆ. ಈ ಮೂಲಕ ಜಿಯೋ ಫೈಬರ್ ಸೇರಿ ದೇಶದ ಇತರ ಎಲ್ಲಾ ಫೈಬರ್ ಬ್ರಾಡ್ಬ್ಯಾಂಡ್ ಕಂಪನಿಗಳಿಗೆ ಶಾಕ್ ನೀಡಿದೆ.

ಟಾಟಾ ಸ್ಕೈ ಇದೀಗ ಟಾಟಾ ಪ್ಲೇ ಎಂದು ತನ್ನ ಹೆಸರನ್ನು ಬದಲಾಯಿಸಿಕೊಂಡಿದ್ದು, ದೇಶದ ಎಲ್ಲಾ ಪ್ರಮುಖ 14 ಒಟಿಟಿ ಪ್ಲಾಟ್ ಫಾರಂಗಳನ್ನು ಒಟ್ಟಿಗೆ ಸೇರಿಸಿಕೊಂಡು, ತನ್ನ ಗ್ರಾಹಕರಿಗೆ ದೊಡ್ಡ ಕೊಡುಗೆಯನ್ನು ನೀಡುವ ಮೂಲಕ ಬೇರೆಲ್ಲಾ ಕಂಪನಿಗಳಿಗೆ ಶಾಕ್ ನೀಡಿದೆ. ಈ ಮೊದಲು ಒಟಿಟಿ ಸೇವೆಗಳನ್ನು ಪಡೆಯಲೆಂದು ಬ್ರಾಡ್ ಬ್ಯಾಂಡ್ ಸೇವೆ ಖರೀದಿಸುತ್ತಿದ್ದ ಜನರು, ಇನ್ನು ಮುಂದೆ ಟಾಟಾ ಪ್ಲೇ ಗೆ ಬದಲಿಸಿಕೊಂಡರೇ, ಒಟಿಟಿಗೆಂದು ಖರ್ಚು ಮಾಡುತ್ತಿದ್ದ ಶೇ. 75ರಷ್ಟು ಹಣವನ್ನು ಉಳಿತಾಯ ಮಾಡಬಹುದಾಗಿದೆ.

ಡಿಟಿಎಚ್ ಜೊತೆ ಒಟಿಟಿ ಪ್ಲಾಟ್ ಫಾರಂ ಗಳನ್ನು ಸಹ ಒಂದೇ ಕಡೆ ನೋಡುವ ಸೌಭಾಗ್ಯ ಟಾಟಾ ಪ್ಲೇ ಗ್ರಾಹಕರಿಗೆ ದೊರೆಯುತ್ತಿದೆ. ಒಟಿಟಿ ದೈತ್ಯ ನೆಟ್ ಫ್ಲಿಕ್ಸ್ ಸಹ ಟಾಟಾ ಪ್ಲೇಗೆ ಈಗ ಸೇರಿಕೊಂಡಿರುವ ಕಾರಣ, ಟಾಟಾ ಪ್ಲೇ ಕೊಳ್ಳಲು ಗ್ರಾಹಕರು ಮುಗಿಬಿದ್ದಿದ್ದಾರೆ. ಗ್ರಾಹಕರಿಗೆಂದು ಹಲವಾರು ಆಫರ್ ಗಳನ್ನು ಪರಿಚಯಿಸಿರುವ ಟಾಟಾ ಪ್ಲೇ ತನ್ನ ಪ್ಯಾಕೇಜ್ ತಿಂಗಳಿಗೆ 275 ರಿಂದ ಆರಂಭವಾಗಲಿದೆ ಎಂದು ಘೋಷಿಸಿದೆ. ಅದಲ್ಲದೇ 52 ಚಾನೆಲ್ ಗಳು ಹಾಗೂ 14 ಒಟಿಟಿ ಪ್ಲಾಟ್ ಫಾರಂಗಳನ್ನು ಒಟ್ಟಿಗೆ ನೋಡುವ ಸೌಭಾಗ್ಯ ಟಾಟಾ ಪ್ಲೇ ಗ್ರಾಹಕರಿಗೆ ದೊರೆಯಲಿದೆ. ಈ ತನ್ನ ಹೊಸತನದ ಚಿಂತನೆಯಿಂದ ಟಾಟಾ ಪ್ಲೇ , ಜಿಯೋ ಫೈಬರ್ ಗೆ ಸೆಡ್ಡು ಹೊಡೆಯುತ್ತಿದೆ. ಒಟ್ಟಿನಲ್ಲಿ ದೇಶ ಬ್ರಾಡ್ ಬ್ಯಾಂಡ್ ಸೇವೆಗೆ ಹೊಸ ರೀತಿಯ ಬೆಳವಣಿಗೆ ಕಾಣುತ್ತಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.