ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಹಿಟ್ಲರ್ ಕಲ್ಯಾಣ ಧಾರಾವಾಹಿಯ ಮೂಲಕ ಎಲ್ಲರ ಮನ ಗೆದ್ದಿರುವ ಎಡವಟ್ಟು ಸುಂದರಿ ಲೀಲಾರವರಿಗೆ ಕುಲಾಯಿಸಿದ ಅದೃಷ್ಟ, ಸಿಕ್ಕೇ ಬಿಡ್ತು ವಿಶೇಷ ಹೆಗ್ಗಳಿಕೆ.

90

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಇತ್ತೀಚಿಗೆ ಕಿರುತೆಯಲ್ಲಿ ಬರುವ ಧಾರಾವಾಹಿಗಳು ಹೊಸ ಹೊಸ ಟ್ವಿಸ್ಟ್ ಗಳನ್ನು ಹೊತ್ತು ಬರುತ್ತಿವೆ. ಹೀಗಾಗಿ ಎಲ್ಲ ಧಾರಾವಾಹಿಗಳು ನಾಮುಂದು ತಾ ಮುಂದು ಅಂತ ಪೈಪೋಟಿ ನಡೆಸುತ್ತಾ, ಟಿಆರ್ ಪಿ ಸ್ಥಾನದಲ್ಲಿಯೂ ಹೆಚ್ಚು ಗಳಿಕೆ ಮಾಡುತ್ತಿವೆ. ಅಂದಾಹಾಗೆ ಶುರುವಾಗಿ 6 ತಿಂಗಳಿನಲ್ಲಿ ಭಾರಿ ಸಕ್ಸೆಸ್ ಕಂಡ ಒಂದು ಧಾರಾವಾಹಿ ಎಂದ್ರೆ ಜಿ ಕುಟುಂಬದ ಹಿಟ್ಲರ್ ಕಲ್ಯಾಣ.

ಹೌದು ದಿಲೀಪ್ ರಾಜ್ ನಿರ್ಮಾಣದಲ್ಲಿ ಮೂಡಿ ಬರುತ್ತಿರೋ ಅದ್ಭುತ ನಿರ್ಮಾಣವನ್ನು ಹೊಂದಿರುವ ಧಾರಾವಾಹಿ ಹಿಟ್ಲರ್ ಕಲ್ಯಾಣ. ದಿಲೀಪ್ ರಾಜ್ ಮೊದಲಿನಿಂದಲೂ ಉತ್ತಮ ನಟ ಎನಿಸಿಕೊಂಡವರು. ಸಿನಿಮಾದಲ್ಲಿ ಅಷ್ಟು ಯಶಸ್ಸನ್ನು ಕಾಣದಿದ್ದರೂ ಕಿರುತೆರೆಯಲ್ಲಿ ಅತ್ಯುತ್ತಮ ಹೆಸರನ್ನು ಗಳಿಸಿದ್ದಾರೆ. ಇವರ ಜೊತೆಗೆ ಇತರ ತರಾಗಣದಲ್ಲಿನ ಎಲ್ಲರೂ ಪ್ರಬುದ್ಧವಾಗಿಯೇ ನಟಿಸುತ್ತಿದ್ದಾರೆ. ಇದಕ್ಕೆ ಇನ್ನಷ್ಟು ಇಂಬು ನೀಡಿರುವುದು ಮಲೈಕ
ವಸುಪಾಲ್.

ಹಿಟ್ಲರ್ ಕಲ್ಯಾಣದ ಇನ್ನೊಂದು ಆಕರ್ಷಣೆ ಹಾಗೂ ಹಿಟ್ಲರನ ಹಿಟ್ ಗೆ ಕರಣವಾದವಳು ಲೀಲಾ. ಎಲ್ಲರೂ ಮನೆಗೆ ಸೊಸೆಯನ್ನ ತಂದ್ರೆ ಇಲ್ಲಿ ಸೊಸೆಯಂದಿರೆ ಅತ್ತೆಯನ್ನ ಮಾವನಿಗೆ ಮದುವೆ ಮಾಡಿಸಿಕೊಂಡು ತರುತ್ತಾರೆ. ಚಿಕ್ಕ ಅತ್ತೆಗೆ 3 ದೊಡ್ಡ ಸೊಸೆಯಂದಿರು ಈ ಧಾರಾವಾಹಿಯ ಹೈಲೈಟ್. ಹಾಗೆಯೇ ಇವರ ನಡುವಿನ ಯು ದ್ಧ ವೂ ಕೂಡ ತಮಾಷೆಯಾಗಿಯೂ ಇದೆ.

ಇನ್ನು ಪಕ್ಕಾ ಎಡವಟ್ಟು ರಾಣಿ ಲೀಲಾ ಪಾತ್ರವನ್ನು ನಿರ್ವಹಿಸುತ್ತಿರುವವಳು ಮಲೈಕಾ ವಸುಪಾಲ್. ಚಿಕ್ಕವಯಸ್ಸಿನಲ್ಲಿ ಕಡಿಮೆ ಅವಧಿಯಲ್ಲಿ ಇಷ್ಟು ಹಿಟ್ ಆಗಿದ್ದು ಅಂದ್ರೆ ಅದೂ ಕಿರುತೆರೆಯ ನಟಿಯಾಗಿ ಮಲೈಕಾ ನೆ ಇರಬೇಕು. ನಟನೆಯ ಮೊದಲ ಧಾರಾವಾಹಿಯಲ್ಲೇ ಎಷ್ಟು ಫೇಮಸ್ ಆದ್ರು ಅಂದ್ರೆ ಪಡ್ಡೆ ಹುಡುಗರಿಗಂತೂ ಮಲೈಕಾ ಕಂಡ್ರೆ ವಿಶೇಷ ಪ್ರೀತಿ. ಸೋಶಿಯಲ್ ಮಿಡಿಯಾದಲ್ಲಿ ಸಣ್ಣದಾಗಿದ್ದ ಇವರ ಅಭಿಮಾನಿ ಬಳಗ ಇಂದು ಬೃಹತ್ ಆಗಿ ಬೆಳೆದುಕೊಂಡಿದೆ. ಅಷ್ಟೇ ಅಲ್ಲ ಅವರ ಪ್ಯಾನ್ ಪೀಜಸ್ ಕೂಡ ಜಾಸ್ತಿಯಾಗಿದೆ. ಇಷ್ಟು ಕಡಿಮೆ ಸಮಯದಲ್ಲಿ ಅತೀ ಹೆಚ್ಚು ಪ್ಯಾನ್ ಪೇಜ್ ಹೊಂದಿರುವ ಏಕೈಕ ಕಿರುತೆರೆ ನಟಿ ಅಂದ್ರೆ ಅದು ಲೀಲಾ ಅಲಿಯಾಸ್ ಮಲೈಕಾ ವಸುಪಾಲ್!

Get real time updates directly on you device, subscribe now.