ಆರ್ಸಿಬಿ ಖರೀದಿ ಮಾಡಲು ಟಾರ್ಗೆಟ್ ಮಾಡಬಹುದಾದ ಟಾಪ್ ಮೂರು ಆರಂಭಿಕ ಆಟಗಾರರು ಯಾರ್ಯಾರು ಗೊತ್ತೇ??

ಆರ್ಸಿಬಿ ಖರೀದಿ ಮಾಡಲು ಟಾರ್ಗೆಟ್ ಮಾಡಬಹುದಾದ ಟಾಪ್ ಮೂರು ಆರಂಭಿಕ ಆಟಗಾರರು ಯಾರ್ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಐಪಿಎಲ್ – 2022 ರ ಆಟಗಾರರ ಮೆಗಾ ಹರಾಜು ಇದೇ ಫೆಬ್ರವರಿ 12 ಹಾಗೂ 13 ರಂದು ನಡೆಯಲಿದೆ. ಈಗಾಗಲೇ ಹೊಸದಾಗಿ ಸೇರಿರುವ ಎರಡು ಹಾಗೂ ಒಟ್ಟು ಹತ್ತು ಫ್ರಾಂಚೈಸಿಗಳು ತಾವು ರಿಟೇನ್ ಮಾಡಿಕೊಂಡ ಆಟಗಾರರ ಪಟ್ಟಿಯನ್ನು ಬಿಡುಗಡೆಗೊಳಿಸಿವೆ. ಈ ನಡುವೆ ಬಲಿಷ್ಠ ತಂಡ ಕಟ್ಟಲು ಸಿದ್ದರಾಗಿರುವ ಆರ್ಸಿಬಿ ತಂಡ, ಆರಂಭಿಕ ಆಟಗಾರರ ಸ್ಥಾನಕ್ಕೆ ಈ ಮೂವರು ಆಟಗಾರರನ್ನು ಖರೀದಿಸಲು ಮುಂದಾಗಿದೆಯಂತೆ. ಬನ್ನಿ ಆ ಮೂವರು ಆಟಗಾರರು ಯಾರು ಎಂದು ತಿಳಿಯೋಣ.

1.ಡೇವಿಡ್ ವಾರ್ನರ್ : ಆಸ್ಟ್ರೇಲಿಯಾದ ಆರಂಭಿಕ ಆಟಗಾರನನ್ನ ಆರ್ಸಿಬಿ ಸೆಳೆಯಲು ಮುಂದಾಗಿದೆ. ಕನ್ನಡದಲ್ಲೇ ರೀಲ್ಸ್ ಮಾಡುವ ಡೇವಿಡ್ ವಾರ್ನರ್ ಆರ್ಸಿಬಿಗೆ ಬಂದರೇ, ಅಭಿಮಾನಿಗಳಿಗೆ ಹಬ್ಬ ಆಗುವ ಸಾಧ್ಯತೆಯಿದೆ. ವಿರಾಟ್ ಅನುಪಸ್ಥಿತಿಯಲ್ಲಿ ಡೇವಿಡ್ ವಾರ್ನರ್ ಆರಂಭಿಕರಲ್ಲದೇ, ನಾಯಕನಾಗುವ ಸಾಧ್ಯತೆ ಸಹ ಇರುತ್ತದೆ.

2.ಜಾನಿ ಬೈರಸ್ಟೋ : ಇಂಗ್ಲೆಂಡ್ ನ ವಿಕೇಟ್ ಕೀಪರ್ ಬ್ಯಾಟ್ಸಮನ್ ಕೂಡ ಟಿ 20 ಕ್ರಿಕೇಟ್ ಗೆ ಹೇಳಿ ಮಾಡಿಸಿದ ಆಟಗಾರ. ವಿಕೇಟ್ ಕೀಪರ್ ಆಗಿರುವ ಕೂಡ ಇವರು ತಂಡಕ್ಕೆ ಉತ್ತಮ ಕೊಡುಗೆ ನೀಡಬಲ್ಲರು. ಹಾಗಾಗಿ ಇವರನ್ನು ಆರ್ಸಿಬಿ ಖರೀದಿಸಿದರೇ, ಆರಂಭಿಕ ಹಾಗೂ ವಿಕೇಟ್ ಕೀಪರ್ ಸಮಸ್ಯೆ ಎರಡು ಬಗೆಹರಿಯುತ್ತದೆ.

3.ಕ್ವಿಂಟನ್ ಡಿ ಕಾಕ್ : 2015 ರಲ್ಲಿ ಆರ್ಸಿಬಿ ತಂಡದ ಭಾಗವಾಗಿದ್ದ ಕ್ವಿಂಟನ್ ಡಿ ಕಾಕ್, ಈಗ ಪುನಃ ಹರಾಜಿಗೆ ಲಭ್ಯವಾಗಿದ್ದಾರೆ. ಸದ್ಯ ಅತ್ಯುತ್ತಮ ಫಾರ್ಮ್ ನಲ್ಲಿರುವ ಇವರನ್ನು ಖರೀದಿಸಿ, ಆರಂಭಿಕ ಹಾಗೂ ವಿಕೇಟ್ ಕೀಪರ್, ಈ ಎರಡು ಹುದ್ದೆಗಳಿಗೆ ನೇಮಿಸಲು ಆರ್ಸಿಬಿ ಮ್ಯಾನೇಜ್ ಮೆಂಟ್ ಚಿಂತಿಸುತ್ತಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.