ಈ ಬಾರಿಯ ಐಪಿಎಲ್ ನಲ್ಲಿ ಹೊಸ ಇತಿಹಾಸ ಸೃಷ್ಟಿಸಿ ವಿಶೇಷ ಸಾಧನೆ ಮಾಡಲಿರುವ ವಿರಾಟ್ ಕೊಹ್ಲಿ, ಏನು ಗೊತ್ತೇ??

ಈ ಬಾರಿಯ ಐಪಿಎಲ್ ನಲ್ಲಿ ಹೊಸ ಇತಿಹಾಸ ಸೃಷ್ಟಿಸಿ ವಿಶೇಷ ಸಾಧನೆ ಮಾಡಲಿರುವ ವಿರಾಟ್ ಕೊಹ್ಲಿ, ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಕಿಂಗ್ ಕೊಹ್ಲಿ ಅಲಿಯಾಸ್ ವಿರಾಟ್ ಕೊಹ್ಲಿ. ಭಾರತ ಕ್ರಿಕೇಟ್ ಕಂಡ ಶ್ರೇಷ್ಠ ಕ್ರಿಕೇಟರ್. ಹಲವಾರು ದಾಖಲೆಗಳನ್ನು ತನ್ನ ಹೆಸರಿಗೆ ಬರೆದುಕೊಂಡಿರುವ ವಿರಾಟ್, ಮುಂದಿನ ದಿನಗಳಲ್ಲಿ ವಿಶ್ವ ದಾಖಲೆಯನ್ನು ಸಹ ಮುರಿಯುವ ಸಾಧ್ಯತೆ ಇದೆ. ಇದೇ ವೇಳೆ 2008 ರಿಂದ ಆರಂಭವಾದ ಐಪಿಎಲ್ ನಲ್ಲಿ ವಿರಾಟ್ ಕೊಹ್ಲಿ ಬರೋಬ್ಬರಿ 14 ವರ್ಷ ಒಂದೇ ಫ್ರಾಂಚೈಸಿಯಲ್ಲಿ ಉಳಿದ ಸಾಧನೆ ಮಾಡಿದ್ದಾರೆ.

ಈ ನಡುವೆ 2008ರಲ್ಲಿ ಮಾತ್ರ ಹರಾಜಿನಲ್ಲಿ ಭಾಗವಹಿಸಿದ್ದ ವಿರಾಟ್ ಕೊಹ್ಲಿ ನಂತರದ ದಿನಗಳಲ್ಲಿ ಹರಾಜಿನಲ್ಲಿಯೂ ಸಹ ಪಾಲ್ಗೊಳ್ಳಲಿಲ್ಲ. ಇದು ಸಹ ಐಪಿಎಲ್ ಇತಿಹಾಸದಲ್ಲಿ, ಒಂದು ಹರಾಜಿನಲ್ಲಿ ಮಾತ್ರ ಭಾಗವಹಿಸಿ, ಅತಿ ಹೆಚ್ಚು ಸೀಸನ್ ನಲ್ಲಿ ಭಾಗವಹಿಸಿದ ಆಟಗಾರ ಎಂಬ ಶ್ರೇಯಕ್ಕೆ ಪಾತ್ರರಾಗಿದ್ದಾರೆ. ಈ ನಡುವೆ ಮತ್ತೊಂದು ಸಾಧನೆಗೈದಿರುವ ವಿರಾಟ್, ಐಪಿಎಲ್ ನಲ್ಲಿ 150 ಕೋಟಿ ಕ್ಲಬ್ ಗೆ ಸೇರಿದ ಆಟಗಾರ ಎನ್ನುವ ಕೀರ್ತಿಗೆ ಸಹ ಪಾತ್ರರಾಗಿದ್ದಾರೆ.

ವಿರಾಟ್ 2018 ರಿಂದ 2021 ರ ವರೆಗೆ ಆರ್ಸಿಬಿ ತಂಡದಲ್ಲಿ ಬರೋಬ್ಬರಿ 17 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದರು. ಈ ಭಾರಿ ಆರ್ಸಿಬಿ ಅವರನ್ನು ರಿಟೇನ್ ಮಾಡಿಕೊಂಡಿದ್ದು ಅವರಿಗೆ 15 ಕೋಟಿ ರೂ ನೀಡಿದೆ. ಹಾಗಾಗಿ ಅವರು ಐಪಿಎಲ್ ನ 14 ಆವೃತ್ತಿ ಸೇರಿ, ಒಟ್ಟು 158 ಕೋಟಿ ರೂಪಾಯಿ ಸಂಭಾವನೆ ಪಡೆದಂತಾಯಿತು. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ 150 ಕೋಟಿ ಕ್ಲಬ್ ಸೇರಿದ ಆಟಗಾರರಾದರು. ಇನ್ನು ಹಿಟ್ ಮ್ಯಾನ್ ರೋಹಿತ್ ಶರ್ಮಾ ಹಾಗೂ ಎಂ.ಎಸ್.ಧೋನಿ ಸಹ 150 ಕೋಟಿ ಸಂಭಾವನೆಯ ಕ್ಲಬ್ ಸೇರಿಕೊಂಡರೂ, ಅವರು ಎರಡು ಭಾರಿ ಹರಾಜಿನಲ್ಲಿ ಭಾಗವಹಿಸಿದ್ದರು. ಆದರೇ ಕೊಹ್ಲಿಯವರು ಮೊದಲ ಸೀಸನ್ ಗೆ ಪಡೆದ ಸಂಭಾವನೆ ಕೇವಲ 18 ಲಕ್ಷ ಮಾತ್ರವಾಗಿತ್ತು. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.