ಹರಾಜಿನಲ್ಲಿ ತನ್ನ ತಂಡ ಯಾರನ್ನು ಮೊದಲು ಟಾರ್ಗೆಟ್ ಮಾಡಲಿದೆ ಎಂಬುದರ ಕುರಿತು ಮಾತನಾಡಿದ ರಾಹುಲ್, ಯಾರಂತೆ ಗೊತ್ತೇ??

ಹರಾಜಿನಲ್ಲಿ ತನ್ನ ತಂಡ ಯಾರನ್ನು ಮೊದಲು ಟಾರ್ಗೆಟ್ ಮಾಡಲಿದೆ ಎಂಬುದರ ಕುರಿತು ಮಾತನಾಡಿದ ರಾಹುಲ್, ಯಾರಂತೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಐಪಿಎಲ್ ನ ಹೊಸ ತಂಡ ಲಕ್ನೋ ಹರಾಜಿಗಿಂತ ಮುಂಚೆ ಮೂವರು ಆಟಗಾರರನ್ನು ಖರೀದಿಸಿದೆ. ಅವರೆಂದರೇ ಕೆ.ಎಲ್.ರಾಹುಲ್, ಮಾರ್ಕಸ್ ಸ್ಟೋಯಿನಿಸ್ ಹಾಗೂ ರವಿ ಬಿಷ್ಣೋಯಿ. ಇದರಲ್ಲಿ ರವಿ ಬಿಷ್ಣೋಯಿಯವರನ್ನು ಖರೀದಿಸಿದ್ದು ಆಶ್ಚರ್ಯ ತಂದಿತ್ತು. ಈಗ ಮೂವರು ಆಟಗಾರರನ್ನು ಖರೀದಿಸಿದ ಮೇಲೆ ಲಕ್ನೋ ತಂಡದ ಪರ್ಸ್ ನಲ್ಲಿ 58 ಕೋಟಿ ರೂ ಮೊತ್ತವಿದೆ. ಇದೇ ಫೆಬ್ರವರಿ 12 ಹಾಗೂ 13 ರಂದು ನಡೆಯಲಿರುವ ಆಟಗಾರರ ಹರಾಜಿನಲ್ಲಿ ಉಳಿದ ಆಟಗಾರರನ್ನು ಖರೀದಿಸಬೇಕಾಗುತ್ತದೆ.

ಇನ್ನು ಇದೇ ವೇಳೆ ಮಾತನಾಡಿದ ನಾಯಕ ಕೆ.ಎಲ್.ರಾಹುಲ್, ಪ್ರತಿ ತಂಡವೂ ರಬಾಡರಂತಹ ಬೌಲರ್ ಇರಬೇಕೆಂದು ಬಯಸುತ್ತಾರೆ. ಅವರು ಮ್ಯಾಚ್ ವಿನ್ನಿಂಗ್ ಬೌಲರ್. ಡೆಲ್ಲಿ ಪರ ಅವರು ಆಡಿದ್ದನ್ನು ನಾವು ನೋಡಿದ್ದೇವೆ‌. ಹಾಗಾಗಿ ಎಲ್ಲಾ ತಂಡಗಳು ರಬಾಡ ನಮ್ಮ ತಂಡದಲ್ಲಿರಲಿ ಎಂಬ ಆಸೆ ಇರುತ್ತದೆ ಎಂದು ಹೇಳಿದ್ದಾರೆ. ಈ ಮೂಲಕ ಲಕ್ನೋ ತಂಡದ ಮೊದಲ ಟಾರ್ಗೇಟ್ ಯಾರು ಎಂಬುದಕ್ಕೆ ರಾಹುಲ್ ಪರೋಕ್ಷವಾಗಿ ರಬಾಡ ಎಂಬ ಉತ್ತರ ನೀಡಿದ್ದಾರೆ.

ಕಗಿಸೋ ರಬಾಡ ಇತ್ತಿಚೇಗೆ ಮುಗಿದ ಭಾರತ ವಿರುದ್ದದ ಸರಣಿಯಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದರು. ಅದಲ್ಲದೇ 2020 ರ ಐಪಿಎಲ್ ನಲ್ಲಿ 30 ವಿಕೇಟ್ ಕಬಳಿಸಿ, ಪರ್ಪಲ್ ಕ್ಯಾಪ್ ಸಹ ಪಡೆದಿದ್ದರು. ಕಳೆದ ಭಾರಿ ಡೆಲ್ಲಿ ಪರ 15 ವಿಕೆಟ್ ಕಬಳಿಸಿದ್ದರು. ಪವರ್ ಪ್ಲೇ ಹಾಗೂ ಡೆತ್ ಓವರ್ ಎರಡು ವಿಭಾಗದಲ್ಲಿಯೂ ಅತ್ಯುತ್ತಮ ಬೌಲಿಂಗ್ ಮಾಡುವ ಕೌಶಲ್ಯ ಹೊಂದಿರುವ ರಬಾಡಾಗೆ ಐಪಿಎಲ್ ನಲ್ಲಿ ಈ ಭಾರಿ ಬಹುಬೇಡಿಕೆ ಇರಲಿದೆ. ಹಾಗಾಗಿ ಲಕ್ನೋ ತಂಡ ಈಗಾಗಲೇ ರಬಾಡ ಮೇಲೆ.ಮೊದಲ ಕಣ್ಣಿಟ್ಟಿರುವುದನ್ನ ರಾಹುಲ್ ಪರೋಕ್ಷವಾಗಿ ಬಹಿರಂಗಪಡಿಸಿದ್ದಾರೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.