ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಬಿಗ್ ನ್ಯೂಸ್: ನಿಜವಾಗಲೂ ಮತ್ತೊಂದು ಎಡವಟ್ಟು ಮಾಡಿಕೊಂಡಿತೇ ಗಟ್ಟಿಮೇಳ ತಂಡ, FIR ದಾಖಲು, ಅಸಲಿಗೆ ನಡೆದದ್ದು ಏನಂತೆ ಗೊತ್ತೇ??

19

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಇತ್ತೀಚಿನ ದಿನಗಳಲ್ಲಿ ಧಾರವಾಹಿಯ ಬೇಡಿಕೆ ಹಾಗೂ ದಾರವಾಹಿಯ ನಟರ ಜನಪ್ರಿಯತೆ ಎನ್ನುವುದು ಸಿನಿಮಾ ನಟರಿಗೆ ಸಮನಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಧಾರವಾಹಿಯ ನಟರಿಗೆ ಲಕ್ಷಾಂತರ ಜನ ಫಾಲೋವರ್ಸ್ ಗಳು ಇರುತ್ತಾರೆ. ಅದರಲ್ಲೂ ಕಿರುತೆರೆಯ ಪ್ರೇಕ್ಷಕರ ನೆಚ್ಚಿನ ಕಾರ್ಯಕ್ರಮಗಳಲ್ಲಿ ಧಾರಾವಾಹಿ ಮೊದಲ ಪಂಕ್ತಿಯಲ್ಲಿ ಕಂಡು ಬರುತ್ತದೆ. ಅದರಲ್ಲೂ ಇಂದು ನಾವು ಮಾತನಾಡಲು ಹೊರಟಿರುವುದು ಎಲ್ಲರಿಗಿಂತ ಹೆಚ್ಚಿನ ಮಟ್ಟದ ಟಿಆರ್ ಪಿಯನ್ನು ಹೊಂದಿರುವಂತಹ ಗಟ್ಟಿಮೇಳ ಧಾರವಾಹಿ ಕುರಿತಂತೆ.

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವಂತಹ ಗಟ್ಟಿಮೇಳ ಧಾರವಾಹಿ ಕನ್ನಡ ಕಿರುತೆರೆಯ ಪ್ರೇಕ್ಷಕರ ನೆಚ್ಚಿನ ಧಾರವಾಹಿಗಳಲ್ಲಿ ಅಗ್ರಗಣ್ಯವಾಗಿ ಕಾಣಿಸುತ್ತದೆ. ಈ ಧಾರವಾಹಿಯ ಕಥೆ ನಟರ ಅಭಿನಯ ಹಾಗೂ ಮೇಕಿಂಗ್ ಎಲ್ಲವೂ ಕೂಡ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ. ಆದರೆ ಗಟ್ಟಿಮೇಳ ಧಾರವಾಹಿಯ ತಂಡವೀಗ ಸುದ್ದಿಯಾಗುತ್ತಿರುವುದು ಧಾರವಾಹಿಯ ಕುರಿತಂತೆ ಅಲ್ಲ ಬದಲಾಗಿ ಬೇರೆ ವಿಚಾರಕ್ಕೆ. ಹೌದು ಗೆಳೆಯರೆ ಗಟ್ಟಿಮೇಳ ಧಾರಾವಾಹಿ ತಂಡ ಈಗ ಎಡವಟ್ಟು ಮಾಡಿಕೊಂಡು ಪೊಲೀಸರ ಅತಿಥಿಯಾಗಿದ್ದಾರೆ. ಹಾಗಿದ್ದರೆ ಈ ವಿಚಾರವೇನು ನಿಜಕ್ಕೂ ನಡೆದಿದ್ದಾದರೂ ಏನು ಎಂಬುದನ್ನು ವಿವರವಾಗಿ ತಿಳಿಯೋಣ ಬನ್ನಿ.

ಸ್ನೇಹಿತರೆ ಗಟ್ಟಿಮೇಳ ಧಾರವಾಹಿಯ ಕಲಾವಿದರು ತಡರಾತ್ರಿಯವರೆಗೆ ಅಂದರೆ ರಾತ್ರಿ 1.30 ರವರೆಗೂ ಕೆಂಗೇರಿಯ ಜಿಂಜರ್ ಲೇಕ್ ವ್ಯೂವ್ ಹೋಟೆಲ್ನಲ್ಲಿ ಕುಡಿದು ಗಲಾಟೆ ಮಾಡಿರುವ ವಿಚಾರಕ್ಕಾಗಿ ಈಗ ಪೊಲೀಸರ ಅತಿಥಿಯಾಗಿದ್ದಾರೆ ಎಂಬುದಾಗಿ ಕೇಳಿಬರುತ್ತಿದೆ. ಇಷ್ಟೊಂದು ತಡರಾತ್ರಿಯ ವರೆಗೂ ಇರುವುದಕ್ಕಾಗಿ ಪ್ರಶ್ನಿಸಿದ್ದಕ್ಕೆ ಪೊಲೀಸ್ ಹಾಗೂ ಧಾರವಾಹಿಯ ಕಲಾವಿದರ ನಡುವೆ ಮಾತಿನ ಚಕಮಕಿ ನಡೆದಿದೆ ಎಂಬುದು ಕೂಡ ಇಲ್ಲಿ ತಿಳಿದುಬರುತ್ತದೆ. ಈ ಹಿನ್ನೆಲೆಯಲ್ಲಿ ಗಟ್ಟಿಮೇಳ ಧಾರವಾಹಿಯ ರಕ್ಷಿತ್ ರಂಜನ ರವಿಚಂದ್ರನ್ ಅನುಷಾ ಅಭಿಷೇಕ್ ಶರಣ್ಯ ರಾಕೇಶ್ ರವರ ವಿರುದ್ಧ ಠಾಣೆಯಲ್ಲಿ ದೂರು ದಾಖಲಾಗಿದೆ. ಇಷ್ಟೊಂದು ಅಪಾರವಾದ ಜನಪ್ರಿಯತೆ ಇರುವಂತಹ ಕಲಾವಿದರು ಈ ರೀತಿಯ ಕೆಲಸಗಳಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಿರುವುದು ನಿಜಕ್ಕೂ ವಿಷಾದನೀಯವಾಗಿದೆ.

Get real time updates directly on you device, subscribe now.