ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಕನ್ನಡಿಗರು ಕಿರುತೆರೆಯಲ್ಲಿ ತೀರ್ಪುದಾರರಾಗಿ ನೋಡಬಯಸುವ ಟಾಪ್ 5 ಅದ್ಭುತ ಕಲಾವಿದರು ಯಾರ್ಯಾರು ಗೊತ್ತೇ?? ಇವರನ್ನು ಕರೆತಂದರೆ ಯಶಸ್ಸು ಶತಸಿದ್ಧ

19

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ನಿಮಗೆಲ್ಲರಿಗೂ ತಿಳಿದಿರುವಂತೆ ಧಾರವಾಹಿಗಳನ್ನು ಹಾಗೂ ಸಿನಿಮಾಗಳನ್ನು ಹೊರತುಪಡಿಸಿ ಕಿರುತೆರೆಯಲ್ಲಿ ಪ್ರೇಕ್ಷಕರು ಪ್ರಸಾರವಾಗುವ ಕಾರ್ಯಕ್ರಮಗಳನ್ನು ಕೂಡ ವೀಕ್ಷಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಇಂತಹ ಕಾರ್ಯಕ್ರಮಗಳು ಸಾಕಷ್ಟು ದೊಡ್ಡ ಮಟ್ಟಿಗೆ ಯಶಸ್ಸನ್ನು ಕೂಡ ಕಂಡಿದೆ. ಸಿನಿಮಾ ಕ್ಷೇತ್ರದ ಹಲವಾರು ಕಲಾವಿದರು ತೀರ್ಪುಗಾರರಾಗಿ ಹಾಗೂ ನಿರೂಪಕರಾಗಿ ಕಿರುತೆರೆಯ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿರುವುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರ ನೀವು ಕೂಡ ಅವರನ್ನು ಇಷ್ಟಪಟ್ಟಿದ್ದೀರಿ. ಆದರೆ ನಮ್ಮ ಕನ್ನಡದ ಪ್ರೇಕ್ಷಕರು ಕೆಲವು ಕನ್ನಡದ ಕಲಾವಿದರನ್ನು ಕಿರುತೆರೆಯಲ್ಲಿ ಕೆಲವೊಂದು ಕಾರ್ಯಕ್ರಮಗಳಲ್ಲಿ ನೋಡಲು ಇಷ್ಟಪಡುತ್ತಾರೆ. ಹಾಗಿದ್ದರೆ ಅವರು ಯಾರು ಎಂಬುದನ್ನು ತಿಳಿಯೋಣ ಬನ್ನಿ.

ದೊಡ್ಡಣ್ಣ; ನಮ್ಮ ಕನ್ನಡ ಚಿತ್ರರಂಗದ ಹಿರಿಯ ಕಲಾವಿದ ರಾಗಿರುವ ದೊಡ್ಡಣ್ಣನ ಅವರು ಕನ್ನಡ ಚಿತ್ರರಂಗದಲ್ಲಿ ಪೋಷಕನಟ ವಿಲನ್ ಕಾಮಿಡಿ ಹೀಗೆ ಬಹುತೇಕ ಎಲ್ಲಾ ರೀತಿಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈಗ ಕನ್ನಡ ಸಿನಿಮಾಗಳಲ್ಲಿ ದೊಡ್ಡಣ್ಣ ನವರು ಕಾಣಿಸಿಕೊಳ್ಳುವುದು ಕೊಂಚ ಕಡಿಮೆಯಾಗಿಬಿಟ್ಟಿದೆ. ಆದರೆ ಪ್ರೇಕ್ಷಕರು ಇನ್ನೂ ಅವರನ್ನು ಮರೆತಿಲ್ಲ. ಕನ್ನಡ ಕಿರುತೆರೆಗಳಲ್ಲಿ ಪ್ರಸಾರವಾಗುವಂತಹ ಕಾಮಿಡಿ ಕಾರ್ಯಕ್ರಮಗಳಲ್ಲಿ ದೊಡ್ಡಣ್ಣ ನವರು ತೀರ್ಪುಗಾರರಾಗಿ ಕಾಣಿಸಿಕೊಳ್ಳಬೇಕು ಎಂಬುದು ಪ್ರೇಕ್ಷಕರ ಆಸೆಯಾಗಿದೆ. ಮುಂದಿನ ದಿನಗಳಲ್ಲಿ ಇದು ನನಸಾಗಲಿ ಎಂಬುದೇ ಎಲ್ಲರ ಆಶಯ.

ಶಶಿಕುಮಾರ್; ಕನ್ನಡ ಚಿತ್ರರಂಗದ ಸುಪ್ರೀಂ ಸ್ಟಾರ್ ಆಗಿರುವ ಶಶಿಕುಮಾರ್ ಅವರು ಒಂದು ಕಾಲದಲ್ಲಿ ಹೆಣ್ಣುಮಕ್ಕಳು ನೆಚ್ಚಿನ ನಟನಾಗಿದ್ದರು. ಅಷ್ಟರಮಟ್ಟಿಗೆ ಸಖತ್ ಸ್ಟೈಲಿಶ್ ಆಗಿದ್ದರು. ಇತ್ತೀಚಿನ ದಿನಗಳಲ್ಲಿ ಶಶಿಕುಮಾರ್ ಅವರು ಚಿತ್ರರಂಗದಿಂದ ವಿರಾಮ ಪಡೆದುಕೊಂಡಿದ್ದು ಅವರನ್ನು ಕನ್ನಡ ಪ್ರೇಕ್ಷಕರು ಕಿರುತೆರೆಯ ಡ್ಯಾನ್ಸಿಂಗ್ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳಬೇಕೆಂಬ ಆಸೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಯಾಕೆಂದರೆ ಶಶಿಕುಮಾರ್ ರವರು ಕೇವಲ ನಟನೆಯಲ್ಲಿ ಮಾತ್ರವಲ್ಲದೆ ಪ್ರೇಕ್ಷಕರನ್ನು ತಮ್ಮ ಡ್ಯಾನ್ಸಿಂಗ್ ಶೈಲಿಯಿಂದಲೂ ಕೂಡ ಮನಗೆದ್ದಿದ್ದರು.

ವಿನೋದ್ ರಾಜ್; ವಿನೋದ್ ರಾಜ್ ರವರು ಎಂದಾಕ್ಷಣ ನಮಗೆ ನೆನಪಾಗುವುದು ಕನ್ನಡದ ಸಿನಿಮಾ ಅಭಿಮಾನಿಗಳು ಅವರನ್ನು ಕನ್ನಡದ ಮೈಕಲ್ ಜಾಕ್ಸನ್ ಎಂದು ಕರೆಯುತ್ತಿದ್ದುದು. ಯಾವುದೇ ರೀತಿಯ ಡ್ಯಾನ್ಸಿಂಗ್ ಶೈಲಿ ಇರಲಿ ವಿನೋದ್ ರಾಜ್ ರವರು ಎಲ್ಲದರಲ್ಲಿ ಸಿದ್ಧಹಸ್ತರಾಗಿದ್ದರು. ಹಲವಾರು ವರ್ಷಗಳಿಂದಲೂ ಕೂಡ ವಿನೋದ್ ರಾಜ ರವರನ್ನು ಡ್ಯಾನ್ಸಿಂಗ್ ಕಾರ್ಯಕ್ರಮದ ಮುಖ್ಯ ತೀರ್ಪುಗಾರರನ್ನಾಗಿ ನೋಡಲು ಕನ್ನಡದ ಪ್ರೇಕ್ಷಕರು ಕಾಯುತ್ತಿದ್ದಾರೆ ಆದರೆ ಇಂದಿಗೂ ಅದು ಕೂಡಿ ಬಂದಿಲ್ಲ.

ಶ್ರೀನಾಥ್; ಕನ್ನಡ ಚಿತ್ರರಂಗದ ಪ್ರಣಯರಾಜ ಎಂದೇ ಖ್ಯಾತರಾಗಿರುವ ಹಿರಿಯ ನಟ ಶ್ರೀನಾಥ್ ರವರು ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದ ಬಹು ಬೇಡಿಕೆಯ ನಾಯಕನಟನಾಗಿ ಕಾಣಿಸಿಕೊಂಡಿದ್ದವರು. ನಂತರ ಚಿತ್ರರಂಗದಲ್ಲಿ ಈಗ ಪೋಷಕ ನಟನಾಗಿ ಹಾಗೂ ಧಾರವಾಹಿಗಳಲ್ಲಿ ಕೂಡ ಕಾಣಿಸಿ ಕೊಂಡಿದ್ದಾರೆ. ಆದರೆ ಕನ್ನಡ ಪ್ರೇಕ್ಷಕರ ಅಪೇಕ್ಷೆ ಏನೆಂದರೆ ಶ್ರೀನಾಥ್ ರವರನ್ನು ಕಿರುತೆರೆಯಲ್ಲಿ ಪ್ರಸಾರವಾಗುವಂತೆ ಫ್ಯಾಮಿಲಿ ಕಾರ್ಯಕ್ರಮಗಳಲ್ಲಿ ನೋಡುವಂತದ್ದು. ಅಂದರೆ ನನ್ನಮ್ಮ ಸೂಪರ್ಸ್ಟಾರ್ ನಂತಹ ಕೌಟುಂಬಿಕ ಕಾರ್ಯಕ್ರಮಗಳಲ್ಲಿ ತೀರ್ಪುಗಾರರನ್ನಾಗಿ ನೇಮಕ ಮಾಡಿದರೆ ಸೂಕ್ತವೆನಿಸಬಹುದು. ಯಾಕೆಂದರೆ ಅಂದಿನಿಂದಲೂ ಕೂಡ ಅವರು ಫ್ಯಾಮಿಲಿ ಆಡಿಯನ್ಸ್ ನ ಮೆಚ್ಚಿನ ನಟನಾಗಿದ್ದರು.

ಟೆನ್ನಿಸ್ ಕೃಷ್ಣ; ಒಂದು ಕಾಲದಲ್ಲಿ ಅತ್ಯಂತ ಹೆಚ್ಚು ಸಂಭಾವನೆ ಹಾಗೂ ಬಹುಬೇಡಿಕೆಯ ಹಾಸ್ಯ ನಟನಾಗಿದ್ದವರು ಟೆನಿಸ್ ಕೃಷ್ಣ. ಆದರೆ ಇಂದಿನ ಹೊಸ ಹಾಸ್ಯನಟರ ಬೇಡಿಕೆಯಿಂದಾಗಿ ತೆರೆಮರೆಗೆ ಸರಿದಿದ್ದಾರೆ. ಆದರೆ ಪ್ರೇಕ್ಷಕರು ಇಂದಿಗೂ ಕೂಡ ಟೆನ್ನಿಸ್ ಕೃಷ್ಣರವರು ಕಾಮಿಡಿ ರಿಯಾಲಿಟಿ ಶೋಗಳ ತೀರ್ಪುಗಾರರಾಗಿ ಬಂದರೆ ಕಾರ್ಯಕ್ರಮಕ್ಕೆ ಕಳೆ ಬಂದಂತೆ ಆಗುತ್ತದೆ ಎಂಬುದಾಗಿ ತಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸುತ್ತಿದ್ದಾರೆ. ಈ ಮೇಲೆ ನಾವು ಹೇಳಿರುವ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ ಹಾಗೂ ನಿಮಗೆ ಯಾವ ನಟ ಕಿರುತೆರೆಗೆ ಕಮ್ ಬ್ಯಾಕ್ ಮಾಡಬೇಕೆಂಬ ಆಸೆ ಇದೆ ಎಂಬುದನ್ನು ಕೂಡ ನಮ್ಮೊಂದಿಗೆ ಹಂಚಿಕೊಳ್ಳಿ.

Get real time updates directly on you device, subscribe now.