ಆರ್ಸಿಬಿ ತಂಡಕ್ಕೆ ಕೊಹ್ಲಿ ಬಿಟ್ಟರೆ ಈತನೇ ಬೆಸ್ಟ್ ನಾಯಕನಾಗುತ್ತಾನೆ, ಹರಾಜಿನಲ್ಲಿ ವೆಸ್ಟ್ ಇಂಡೀಸ್ ದೈತ್ಯನನ್ನು ಖರೀದಿ ಮಾಡಿ ಎಂದ ಆಕಾಶ್ ಚೋಪ್ರಾ, ಯಾರಂತೆ ಗೊತ್ತೇ?

ಆರ್ಸಿಬಿ ತಂಡಕ್ಕೆ ಕೊಹ್ಲಿ ಬಿಟ್ಟರೆ ಈತನೇ ಬೆಸ್ಟ್ ನಾಯಕನಾಗುತ್ತಾನೆ, ಹರಾಜಿನಲ್ಲಿ ವೆಸ್ಟ್ ಇಂಡೀಸ್ ದೈತ್ಯನನ್ನು ಖರೀದಿ ಮಾಡಿ ಎಂದ ಆಕಾಶ್ ಚೋಪ್ರಾ, ಯಾರಂತೆ ಗೊತ್ತೇ?

ನಮಸ್ಕಾರ ಸ್ನೇಹಿತರೇ ಇನ್ನೇನು ಇದೇ ಫೆಬ್ರವರಿ 12 ಹಾಗೂ 13 ರಂದು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಈ ಬಾರಿಯ ಐಪಿಎಲ್ 2022ರ ಮೆಗಾ ಆಕ್ಷನ್ ಅದ್ದೂರಿಯಾಗಿ ನಡೆಯಲಿದೆ. ಈ ಬಾರಿಯ ಆಕ್ಷನ್ ನಲ್ಲಿ ಹಲವಾರು ಆಟಗಾರರ ಹೆಸರು ಕಂಡುಬಂದಿದೆ. ನಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ನೋಡುವುದಾದರೆ ಈಗಾಗಲೇ ವಿರಾಟ್ ಕೊಹ್ಲಿ ಗ್ಲೆನ್ ಮ್ಯಾಕ್ಸ್ವೆಲ್ ಹಾಗೂ ಮೊಹಮ್ಮದ್ ಸಿರಾಜ್ ರವರನ್ನು ರೀಟೈನ್ ಮಾಡಿಕೊಂಡು ಉಳಿಸಿಕೊಂಡಿದೆ. ಈಗಾಗಲೇ ನಿಮಗೆಲ್ಲ ಗೊತ್ತಿರುವ ಹಾಗೆ ವಿರಾಟ್ ಕೊಹ್ಲಿ ರವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕತ್ವ ಸ್ಥಾನದಿಂದ ಕೆಳಗಿಳಿದಿದ್ದಾರೆ.

ಈ ಕಾರಣದಿಂದಾಗಿಯೇ ಈ ಬಾರಿಯ ಮೆಗಾ ಆಕ್ಷನ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಾಯಕನಿಗಾಗಿ ಹುಡುಕಾಟ ನಡೆಸಲಿದೆ ಎಂಬುದಾಗಿ ಕೇಳಿಬರುತ್ತಿದೆ. ಈ ಕುರಿತಂತೆ ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರನಾಗಿರುವ ಹಾಗೂ ಹಾಲಿ ಕಾಮೆಂಟೇಟರ್ ಆಗಿರುವ ಆಕಾಶ್ ಚೋಪ್ರಾ ಅವರು ಈ ಆಟಗಾರನನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಾಯಕನ ಸ್ಥಾನಕ್ಕಾಗಿ ಕೊಳ್ಳಲಿದೆ ಎಂಬುದಾಗಿ ಹೇಳಿದ್ದಾರೆ.

ಶ್ರೇಯಸ್ ಅಯ್ಯರ್ ಶಿಖರ್ ಧವನ್ ರವರಂತಹ ಘಟಾನುಘಟಿ ಆಟಗಾರರು ಹರಾಜಿನಲ್ಲಿ ಇದ್ದರೂ ಕೂಡ ವೆಸ್ಟ್ಇಂಡೀಸ್ ಮೂಲದ ಈ ಆಟಗಾರನನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕನ ಸ್ಥಾನಕ್ಕಾಗಿ ಖರೀದಿಸಲಿದೆ ಎಂಬುದಾಗಿ ಆಕಾಶ ಚೋಪ್ರಾ ಅವರು ಬಲವಾಗಿ ಪ್ರತಿಪಾದಿಸಿದ್ದಾರೆ. ಹಾಗಿದ್ದರೆ ಆ ವೆಸ್ಟ್ ಇಂಡೀಸ್ ನ ಕ್ರಿಕೆಟಿಗ ಯಾರು ಎಂಬುದನ್ನು ತಿಳಿಯೋಣ ಬನ್ನಿ. ಹೌದು ಗೆಳೆಯರೇ ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ವೆಸ್ಟ್ ಇಂಡೀಸ್ ಮೂಲದ ಜೇಸನ್ ಹೋಲ್ಡರ್ ಅವರನ್ನು ನಾಯಕನ ಸ್ಥಾನಕ್ಕಾಗಿ ಖರೀದಿಸಿದರೆ ಅತ್ಯುತ್ತಮ ಎಂಬುದಾಗಿ ಆಕಾಶ ಚೋಪ್ರಾರವರು ಹೇಳಿದ್ದಾರೆ. ಈ ಹಿಂದೆ ಸನ್ರೈಸರ್ಸ್ ಹೈದರಾಬಾದ್ ತಂಡದ ಪರವಾಗಿ ಕೂಡ ಉತ್ತಮ ಪ್ರದರ್ಶನವನ್ನು ನೀಡಿರುವ ಜೇಸನ್ ಹೋಲ್ಡರ್ ಬೆಂಗಳೂರು ತಂಡವನ್ನು ಒಬ್ಬ ಆಲ್-ರೌಂಡರ್ ಆಗಿ ಮುನ್ನಡೆಸಲು ಉತ್ತಮ ಆಯ್ಕೆ ಎಂಬುದಾಗಿ ಹೇಳಿದ್ದಾರೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆಯನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.