SSLC ಹಾಗೂ PUC ಮಾಡಿದ್ದೀರಾ, ಹಾಗಿದ್ದರೆ ನೋಡಿ ಸರ್ಕಾರೀ ಉದ್ಯೋಗ ಪಡೆಯುವ ಸುವರ್ಣಾವಕಾಶ. KUD ಅಲ್ಲಿ ಭರ್ತಿಯಾಗುತ್ತಿವೆ ಹುದ್ದೆಗಳು, ಅರ್ಜಿ ಸಲ್ಲಿಸುವುದು ಹೇಗೆ ಗೊತ್ತೇ??

SSLC ಹಾಗೂ PUC ಮಾಡಿದ್ದೀರಾ, ಹಾಗಿದ್ದರೆ ನೋಡಿ ಸರ್ಕಾರೀ ಉದ್ಯೋಗ ಪಡೆಯುವ ಸುವರ್ಣಾವಕಾಶ. KUD ಅಲ್ಲಿ ಭರ್ತಿಯಾಗುತ್ತಿವೆ ಹುದ್ದೆಗಳು, ಅರ್ಜಿ ಸಲ್ಲಿಸುವುದು ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಕರೋನಾ ಪೆಂಡಮಿಕ್ ಕಾಲದಲ್ಲಿ ಉದ್ಯೋಗದ ವಿಷಯದಲ್ಲಿ ಕಷ್ಟ ಅನುಭವಿಸಿದವರು ಸಾಕಷ್ಟು. ಆದರೆ ಇದರ ಬೆನ್ನಲ್ಲೇ ಈ ವರ್ಷ ಬೇರೆ ಬೇರೆ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳೂ ಕೂಡ ಹೆಚ್ಚಾಗುತ್ತಿವೆ. ಈ ವರೆಗೆ ಖಾಲಿ ಇದ್ದ ಹುದ್ದೆಗಳು ಭರ್ತಿಯಾಗುತ್ತಿವೆ. ಇದೀಗ ನಾವು ಹೇಳುತ್ತಿರುವುದು ಧಾರವಾಡ ವಿಶ್ವವಿದ್ಯಾಲಯದಲ್ಲಿ ಇರುವ ಖಾಲಿ ಹುದ್ದೆಗಳ ಬಗ್ಗೆ. ಬನ್ನಿ ಈ ಬಗ್ಗೆ ಇನ್ನಷ್ಟು ಮಾಹಿತಿಯನ್ನ ನಾವು ನಿಮಗೆ ತಿಳಿಸಿಕೊಡ್ತೀವಿ.

ಕರ್ನಾಟಕ ಯೂನಿವರ್ಸಿಟಿ ಧಾರವಾಡದಲ್ಲಿ ಕೆಲವು ಹುದ್ದೆಗಳು ಖಾಲಿ ಇದ್ದು ಅದನ್ನು ಭರ್ತಿ ಮಾಡುವ ಪ್ರಕ್ರಿಯೆಗಳು ನಡೆಯುತ್ತಿವೆ. ಹಾಗಾಗಿ ಅರ್ಹ ಅಭ್ಯರ್ಥಿಗಳು ಇದಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ಖಾಲಿ ಇರುವ ಹುದ್ದೆಗಳೆಂದರೆ ಪ್ರಾಜೆಕ್ಟ್ ಅಸಿಸ್ಟೆಂಟ್, ಫೀಲ್ಡ್ ಅಸಿಸ್ಟೆಂಟ್ ಹುದ್ದೆಗಳು. ಅಭ್ಯರ್ಥಿಗಳು ದಾಖಲೆ ವಿವರಗಳನ್ನು ವಿಶ್ವವಿದ್ಯಾಲಯಕ್ಕೆ ಕಳುಹಿಸಿಕೊಡಬೇಕು. ಆಫ್ ಲೈನ್ ಮೂಲಕ ಅರ್ಜಿಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಫೆಬ್ರವರಿ 2, 2022.

ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಿದ್ಯಾರ್ಹತೆ ಪ್ರಾಜೆಕ್ಟ್ ಅಸಿಸ್ಟೆಂಟ್ ಹುದ್ದೆಗೆ ಎಂ ಎಸ್ ಸಿ. ಹಾಗೂ ಫೀಲ್ಡ್ ಅಸಿಸ್ಟೆಂಟ್ ಹುದ್ದೆಗೆ ಎಸ್ ಎಸ್ ಎಲ್ ಸಿ, ಪಿಯುಸಿ ಆಗಿದ್ದು ಮಾನ್ಯತೆ ಪಡೆದ ಬೋರ್ಡ್ ನ ದಾಖಲೆಗಳಿರಬೇಕು. ಇನ್ನು ಮಾಸಿಕ ವೇತನವು 10,000-20,000 ರೂಪಾಯಿಗಳವರೆಗೆ ಪಡೆಯಬಹುದು. ಇನ್ನು ಅಭ್ಯರ್ಥಿಗಳ ವಯಸ್ಸು ಕೆಯುಡಿ ನಿಮಯಗಳ ಪ್ರಕಾರ ಇರಬೇಕು. ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದ ನಿಯಮಾವಳಿಗಳ ಪ್ರಕಾರ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ. ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ.

ಆಸಕ್ತ ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ವಿಳಾಸಕ್ಕೆ ಕಳುಹಿಸತಕ್ಕದ್ದು. ಜೆ.ಎಲ್.ರಾಥೋಡ್, ಪಿ.ಐ. ಸಾಗರ ಜೀವಶಾಸ್ತ್ರ ವಿಭಾಗ ಕೆಯುಪಿಜಿ ಕೇಂದ್ರ, ಕಾರವಾರ-581303. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ kud.ac.in ಗೆ ವೆಬ್ ಸೈಟ್ ಗೆ ಭೇಟಿಕೊಡಿ.