ಇದುವರೆಗೂ ಭಾರತ ತಂಡ ಪ್ರವೇಶಿಸದ ಟಾಪ್ ಐದು ಆಟಗಾರರ ಮೇಲೆ ಕಣ್ಣಿಟ್ಟಿದ್ದೆಯಂತೆ ಆರ್ಸಿಬಿ, ಆ ಟಾಪ್ 5 ಆಟಗಾರರು ಯಾರ್ಯಾರು ಗೊತ್ತೇ??

ಇದುವರೆಗೂ ಭಾರತ ತಂಡ ಪ್ರವೇಶಿಸದ ಟಾಪ್ ಐದು ಆಟಗಾರರ ಮೇಲೆ ಕಣ್ಣಿಟ್ಟಿದ್ದೆಯಂತೆ ಆರ್ಸಿಬಿ, ಆ ಟಾಪ್ 5 ಆಟಗಾರರು ಯಾರ್ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಐಪಿಎಲ್ 2022 ರ ಆಟಗಾರರ ಮೆಗಾ ಹರಾಜು ಫೆಬ್ರವರಿ 12 ಮತ್ತು 13 ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಈಗಾಗಲೇ ಹೊಸ ಫ್ರಾಂಚೈಸಿಗಳು ಸೇರಿ ಎಲ್ಲಾ ಫ್ರಾಂಚೈಸಿಗಳು ತಾವು ರಿಟೇನ್ ಮಾಡಿಕೊಂಡ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿವೆ. ಈ ನಡುವೆ ಬಲಿಷ್ಠ ತಂಡ ಕಟ್ಟಲು ಆರ್ಸಿಬಿ ಫ್ರಾಂಚೈಸಿ ಹರಾಜಿನಲ್ಲಿ ಐವರು ಅನಕ್ಯಾಪ್ಡ್ ಆಟಗಾರರ ಮೇಲೆ ಕಣ್ಣಿಟ್ಟಿದೆಯಂತೆ. ಬನ್ನಿ ಆ ಆಟಗಾರರು ಯಾರು ಎಂದು ತಿಳಿಯೋಣ.

1.ನಿತೀಶ್ ರಾಣಾ : ಕಳೆದ ಆವೃತ್ತಿಯಲ್ಲಿ ಕೆಕೆಆರ್ ಪರ ಆಡಿ ಗಮನ ಸೆಳೆದಿದ್ದರು. ಮೊದಲಾರ್ಧದಲ್ಲಿ ಆರಂಭಿಕ ಬ್ಯಾಟ್ಸಮನ್ ಆಗಿ ಆಡಿ, ನಂತರಾರ್ಧದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸಿ ಗಮನಸೆಳೆದರು. ಹಾಗಾಗಿ ಆರ್ಸಿಬಿ ಇವರ ಮೇಲೆ ಕಣ್ಣಿಟ್ಟಿದೆ.

2.ಚೇತನ್ ಸಾಕಾರಿಯಾ : ಕಳೆದ ಭಾರಿ ರಾಜಸ್ತಾನ ತಂಡದಲ್ಲಿ ಆಡಿ ಗಮನ ಸೆಳೆದಿದ್ದ ಏಡಗೈ ವೇಗಿ ಉತ್ತಮ ವಿಕೆಟ್ ಪಡೆದು ಗಮನ ಸೆಳೆದಿದ್ದರು. ಎಕಾನಮಿ ಸಹ ಅತ್ಯುತ್ತಮವಾಗಿತ್ತು.ಹಾಗಾಗಿ ಈ ಏಡಗೈ ವೇಗಿ ಮೇಲೆ ಆರ್ಸಿಬಿ ಕಣ್ಣಿಟ್ಟಿದೆ.

3.ಶಾರುಖ್ ಖಾನ್ : ತಮಿಳುನಾಡಿನ ಈ ಬಿಗ್ ಹಿಟ್ ಹೊಡೆಯಬಲ್ಲ ಆಟಗಾರ ಪಂದ್ಯದ ಗತಿಯನ್ನೇ ಬದಲಾಯಿಸುವ ಸಾಮರ್ಥ್ಯ ಹೊಂದಿದ್ದಾರೆ. ಹೀಗಾಗಿ ಇವರ ಮೇಲೆ ಆರ್ಸಿಬಿ ಕಣ್ಣಿಟ್ಟಿದೆ. ಕೆಳ ಕ್ರಮಾಂಕದಲ್ಲಿ ಇವರು ಪಿಂಚ್ ಹಿಟ್ಟರ್ ಆಗುವ ಸಾಧ್ಯತೆ ಇದೆ.

4.ರಿಯಾನ್ ಪರಾಗ್ : ಉತ್ತಮ ಮಧ್ಯಮ ಕ್ರಮಾಂಕದ ಬ್ಯಾಟ್ಸಮನ್ ಹಾಗೂ ಆಫ್ ಸ್ಪಿನ್ ಮತ್ತು ಲೆಗ್ ಸ್ಪಿನ್ ಮಾಡುವ ಸಾಮರ್ಥ್ಯವಿರುವ ರಿಯಾನ್ ಪರಾಗ್ ಮೇಲೂ ಸಹ ಹರಾಜಿನಲ್ಲಿ ಆರ್ಸಿಬಿ ಕಣ್ಣಿಟ್ಟಿದೆ.

5.ಮಹಮದ್ ಅಜರುದ್ದೀನ್ : ಕೇರಳದ ಈ ಪ್ರತಿಭಾನ್ವಿತ ಬ್ಯಾಟ್ಸಮನ್ ಕಳೆದ ಭಾರಿ ಆರ್ಸಿಬಿ ತಂಡದಲ್ಲಿದ್ದರೂ, ಪ್ಲೇಯಿಂಗ್ ಇಲೆವೆನ್ ನಲ್ಲಿ ಆಡುವ ಅವಕಾಶ ಸಿಗಲಿಲ್ಲ. ಈ ಭಾರಿ ಅವರನ್ನ ಮತ್ತೇ ಖರೀದಿಸಿ, ಆಡಿಸುವ ಯೋಜನೆಯನ್ನ ಆರ್ಸಿಬಿ ಹಾಕಿಕೊಂಡಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.