ರಾಹುಲ್, ರೋಹಿತ್ ಬೇಡವೇ ಬೇಡ, ಈತನನ್ನು ಕ್ಯಾಪ್ಟನ್ ಮಾಡಿ ಎಂದ ಸಿಕ್ಸರ್ ಕಿಂಗ್ ಯುವಿ, ಆಯ್ಕೆ ಮಾಡಿದ್ದು ಯಾರನ್ನು ಗೊತ್ತೇ??

ರಾಹುಲ್, ರೋಹಿತ್ ಬೇಡವೇ ಬೇಡ, ಈತನನ್ನು ಕ್ಯಾಪ್ಟನ್ ಮಾಡಿ ಎಂದ ಸಿಕ್ಸರ್ ಕಿಂಗ್ ಯುವಿ, ಆಯ್ಕೆ ಮಾಡಿದ್ದು ಯಾರನ್ನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಭಾರತ ತಂಡದ ಟೆಸ್ಟ್ ತಂಡದ ನಾಯಕತ್ವ ಈಗ ಮತ್ತಷ್ಟು ಜಠಿಲವಾಗಿದೆ. ವಿರಾಟ್ ಕೊಹ್ಲಿಯವರ ರಾಜೀನಾಮೆಯಿಂದ ತೆರವಾಗಿರುವ ಸ್ಥಾನಕ್ಕೆ ಯಾರನ್ನು ನೇಮಿಸುವುದು ಎಂಬ ಬಗ್ಗೆ ಚರ್ಚೆ ಜೋರಾಗಿ ನಡೆಯುತ್ತಿದೆ. ಆ ಸ್ಥಾನಕ್ಕೆ ರೋಹಿತ್ ಶರ್ಮಾ ಇಲ್ಲವೇ ಕೆ.ಎಲ್.ರಾಹುಲ್ ರನ್ನ ನೇಮಿಸಿ ಎಂಬ ಕೂಗು ಕೇಳಿ ಬರುತ್ತಿದೆ. ಆದರೇ ಅದಕ್ಕೆ ಕೆಲವು ಹಿರಿಯ ಕ್ರಿಕೇಟಿಗರು ವ್ಯಕ್ತಪಡಿಸಿದರೂ, ಕೆಲವು ಆಟಗಾರರು ಸಹಮತ ವ್ಯಕ್ತಪಡಿಸಿದರು.

ಆದರೇ ಭಾರತದ ಮಾಜಿ ಕ್ರಿಕೇಟಿಗ ಯುವರಾಜ್ ಸಿಂಗ್ ಬೇರೆಯದ್ದೇ ವಾದ ಮಂಡಿಸಿದ್ದಾರೆ. ಅವರ ಪ್ರಕಾರ ರಾಹುಲ್ ಹಾಗೂ ರೋಹಿತ್ ಶರ್ಮಾ ಇಬ್ಬರಿಗೂ ನಾಯಕತ್ವ ನೀಡಬಾರದಂತೆ. ಅವರಿಬ್ಬರ ಬದಲು ಯುವಕರಾಗಿರುವ ರಿಷಭ್ ಪಂತ್ ಗೆ ನೀಡಬೇಕು ಎಂದು ಹೇಳಿದ್ದಾರೆ. ರಿಷಭ್ ಪಂತ್ ಇನ್ನು 23 ರ ಹರೆಯದ ಯುವಕ . ಅಗ್ರೇಸ್ಸಿವ್ ಆಟಗಾರ. ಆದರೇ ಟೆಸ್ಟ್ ಕ್ರಿಕೇಟ್ ನಲ್ಲಿ ನಿಂತು ಆಡುವುದಿಲ್ಲ. ಆದರೇ ಅವರಿಗೆ ಜವಾಬ್ದಾರಿ ಬರಬೇಕೆಂದರೇ ಈಗಲೇ ಟೆಸ್ಟ್ ನಾಯಕತ್ವ ನೀಡಬೇಕು. ಆಗ ಅವರಿಗೆ ಪ್ರಬುದ್ದತೆ ಬರುತ್ತದೆ.

ಅದಲ್ಲದೇ ನಾಯಕನಾಗಲು ಹೆಚ್ಚು ಅನುಭವ ಬರುತ್ತದೆ. ಈ ಮೂಲಕ ರಿಷಭ್ ಪಂತ್ ಬ್ಯಾಟಿಂಗ್ ನಲ್ಲಿಯೂ ಸುಧಾರಣೆ ಕಂಡು ಬರುತ್ತದೆ. ರಿಷಭ್ ಪಂತ್ ಜವಾಬ್ದಾರಿಯುತ ಬ್ಯಾಟಿಂಗ್ ಆಡಿದರೇ, ಖಂಡಿತ ಇವರು ವಿಶ್ವ ಕ್ರಿಕೇಟ್ ನಲ್ಲಿ ದೊಡ್ಡ ಹೆಸರು ಸಂಪಾದಿಸುತ್ತಾರೆ ಎಂದು ಹೇಳಿದರು. ಈಗಲೇ ದೊಡ್ಡ ಜವಾಬ್ದಾರಿ ನೀಡಿದರೇ ಹತ್ತು ವರ್ಷಗಳ ಕಾಲ ಭಾರತಕ್ಕೆ ಟೆಸ್ಟ್ ತಂಡಕ್ಕೆ ನಾಯಕನನ್ನು ಹುಡುಕುವ ಅಗತ್ಯವಿರುವುದಿಲ್ಲ ಎಂದು ಸಹ ಹೇಳಿದರು. ಸದ್ಯದ ಭಾರತ ತಂಡಕ್ಕೆ ರಿಷಭ್ ಪಂತ್ ರಂತಹ ಪಾಕೆಟ್ ಡೈನಮೋ ನಾಯಕ ಬಂದರೇ, ಖಂಡಿತ ಭಾರತ ತಂಡದ ಡ್ರೆಸ್ಸಿಂಗ್ ರೂಮ್ ವಾತಾವರಣ ಬದಲಾವಣೆಗೊಂಡು, ಭಾರತ ತಂಡ ಮತ್ತೆ ಗೆಲುವಿನ ಹಳಿಗೆ ಮರಳಲಿದೆ ಎಂಬ ವಿಶ್ವಾಸವನ್ನು ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.