ಇದ್ದಕ್ಕಿದ್ದ ಹಾಗೆ ಇಷ್ಟು ದಿವಸ ದ್ರಾವಿಡ್ ರವರನ್ನು ಹೊಗಳುತ್ತಿದ್ದ ನೆಟ್ಟಿಗರು, ರಾಹುಲ್ ದ್ರಾವಿಡ್ ರವರ ಮೇಲೆ ಗರಂ ಆಗಿದ್ದು ಯಾಕೆ ಗೊತ್ತೇ?? ದ್ರಾವಿಡ್ ಮಾಡಿದ ತಪ್ಪೇನು ಗೊತ್ತೇ??

ಇದ್ದಕ್ಕಿದ್ದ ಹಾಗೆ ಇಷ್ಟು ದಿವಸ ದ್ರಾವಿಡ್ ರವರನ್ನು ಹೊಗಳುತ್ತಿದ್ದ ನೆಟ್ಟಿಗರು, ರಾಹುಲ್ ದ್ರಾವಿಡ್ ರವರ ಮೇಲೆ ಗರಂ ಆಗಿದ್ದು ಯಾಕೆ ಗೊತ್ತೇ?? ದ್ರಾವಿಡ್ ಮಾಡಿದ ತಪ್ಪೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಕನ್ನಡಿಗ, ದಿ ವಾಲ್ ಖ್ಯಾತಿಯ ರಾಹುಲ್ ದ್ರಾವಿಡ್ ಭಾರತ ತಂಡದ ಕೋಚ್ ಆದ ನಂತರ ಬೆಟ್ಟದಷ್ಟು ನೀರಿಕ್ಷೆಗಳಿದ್ದವು. ಆದರೇ ಈಗ ಆ ನಿರೀಕ್ಷೆಗಳೆಲ್ಲವೂ ಹುಸಿಯಾಗುತ್ತಿದೆ. ಬೆಟ್ಟದಷ್ಟು ನಿರೀಕ್ಷೆ ಹೊತ್ತು ದಕ್ಷಿಣ ಆಫ್ರಿಕಾಕ್ಕೆ ಸಾಗಿದ ಭಾರತ ತಂಡ ಟೆಸ್ಟ್ ಸರಣಿ ಬಳಿಕ ಈಗ ಏಕದಿನ ಸರಣಿಯಲ್ಲಿಯೂ ಸಹ ಸೋಲನ್ನು ಅನುಭವಿಸಿದೆ. ಈ ಸೋಲಿಗೆ ಈಗ ಕೋಚ್ ರಾಹುಲ್ ದ್ರಾವಿಡ್ ರವರೇ ಕಾರಣ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಭಾರತದ ಬೆಂಚ್ ನಲ್ಲಿ ಉತ್ತಮ ಪ್ರದರ್ಶನ ನೀಡುವ ಆಟಗಾರರಿದ್ದರೂ, ಪದೇ ಪದೇ ವಿಫಲರಾಗುವ ಆಟಗಾರರಿಗೆ ಏಕೆ ಅವಕಾಶ ನೀಡುತ್ತಿದ್ದಿರಿ ಎಂದು ಪ್ರಶ್ನಿಸಿದ್ದಾರೆ. ಟೆಸ್ಟ್ ನಲ್ಲಿ ವಿಫಲರಾಗಿದ್ದ ಅಜಿಂಕ್ಯಾ ರಹಾನೆಗೆ ಸ್ಥಾನ ನೀಡಲಾಗಿತ್ತು. ಆದರೇ ಉತ್ತಮ ಪ್ರದರ್ಶನ ನೀಡಿದ್ದ ಹನುಮ ವಿಹಾರಿಗೆ ಅವಕಾಶ ಸಿಗಲಿಲ್ಲ.ಇದು ಟೆಸ್ಟ್ ಸರಣಿ ಸೋಲಿಗೆ ಕಾರಣವಾಯಿತು.

ಇನ್ನು ಏಕದಿನ ಪಂದ್ಯದಲ್ಲಿಯೂ ಸಹ ಕಳಪೆ ಫಾರ್ಮ್ ನಲ್ಲಿರುವ ಶ್ರೇಯಸ್ ಅಯ್ಯರ್ ಹಾಗೂ ಭುವನೇಶ್ವರ್ ಕುಮಾರ್ ಗೆ ಯಾವ ಮಾನದಂಡದಲ್ಲಿ ಅವಕಾಶ ನೀಡಿದಿರಿ, ಅವರು ಮೊದಲ ಏಕದಿನ ಪಂದ್ಯದಲ್ಲಿಯೇ ಸಂಪೂರ್ಣ ಫಾರ್ಮ್ ಕಳೆದುಕೊಂಡಿದ್ದರು. ಅವರ ಬದಲಿಗೆ ಸೂರ್ಯ ಕುಮಾರ್ ಯಾದವ್, ರುತುರಾಜ್ ಗಾಯಕ್ವಾಡ್, ಮಹಮದ್ ಸಿರಾಜ್, ಪ್ರಸಿದ್ಧ್ ಕೃಷ್ಣರಂತಹ ಪ್ರತಿಭಾನ್ವಿತರನ್ನ ಬೆಂಚ್ ನಲ್ಲಿ ಕೂರಿಸಿದ್ದಿರಿ. ಆಡದ ಆಟಗಾರರನ್ನು ತಂಡದೊಳಗಿರಿಸಿ, ಆಡುವ ಆಟಗಾರರನ್ನ ಬೆಂಚ್ ನಲ್ಲಿ ಕೂರಿಸಿ, ನೀವು ಯಾವ ಸಂದೇಶ ನೀಡಲು ಹೊರಟಿದ್ದೀರಿ, ನಿಮ್ಮನ್ನು ತಡೆಯುತ್ತಿರುವ ಕೈಗಳು ಯಾವುವು ಎಂದು ಪ್ರಶ್ನಿಸಿದ್ದಾರೆ.

ಮೂರನೇ ಹಾಗೂ ಕೊನೆಯ ಪಂದ್ಯದಲ್ಲಾದರೂ ಉತ್ತಮ ಪ್ಲೇಯಿಂಗ್ ಇಲೆವೆನ್ ನ್ನು ನಾವು ಎದುರು ನೋಡಬಹುದಾ ಎಂದು ಪ್ರಶ್ನಿಸಿದ್ದಾರೆ. ಈ ಸವಾಲುಗಳನ್ನು ಕೋಚ್ ರಾಹುಲ್ ದ್ರಾವಿಡ್ ಹೇಗೆ ಎದುರಿಸುತ್ತಾರೆ ಎಂಬುದು ಸದ್ಯ ಎಲ್ಲರ ಮುಂದಿರುವ ಪ್ರಶ್ನೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.