ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಸಂತೋಷದ ದಾಂಪತ್ಯ ನಿಮ್ಮದಾಗಬೇಕೆಂದರೇ ಈ ಮೂರು ವಿಷಯಗಳಲ್ಲಿ ನೀವು ಪಕ್ಕಾ ಆಗಿರಬೇಕು ಅನ್ನುತ್ತಾನೆ ಚಾಣಕ್ಯ, ಯಾವ್ಯಾವು ಗೊತ್ತೇ??

49

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಚಾಣಕ್ಯ ಅರ್ಥಶಾಸ್ತ್ರದ ಪಿತಾಮಹ. ಕೇವಲ ಅರ್ಥಶಾಸ್ತ್ರ ಮಾತ್ರವಲ್ಲದೇ ಜೀವನದ ಸಾರದ ಬಗ್ಗೆ ಚಾಣಕ್ಯ ಹೇಳಿರುವ ಮಾತುಗಳು ಸಹ ಬಹು ಮಹತ್ವದಾಗಿರುವುವು. ಜೀವನ, ದಾಂಪತ್ಯ, ಸಂಭಂದಗಳು ಹೀಗೆ ಎಲ್ಲವೂ ಮನುಷ್ಯನ ಜೀವಪದಲ್ಲಿ ಬಹು ಮಹತ್ವದಾಗಿರುವುವು. ಅವುಗಳಿಗೆ ತನ್ನದೇ ಆದ ಕೆಲವು ನೀತಿಗಳನ್ನ ಸಲಹೆ ರೂಪದ ಮೂಲಕ ನೀಡಿದ್ದಾನೆ ಚಾಣಕ್ಯ. ಮದುವೆಯಾದ ತಕ್ಷಣ ಉತ್ತಮ ದಾಂಪತ್ಯದ ಕನಸನ್ನ ಪ್ರತಿ ಜೋಡಿಯೂ ಬಯಸುತ್ತದೆ. ಆದರೇ ಉತ್ತಮ ದಾಂಪತ್ಯ ನಿಮ್ಮದಾಗಬೇಕೆಂದರೇ ಈ ಮೂರು ನೀತಿಗಳನ್ನ ಪಾಲಿಸಲೇಬೇಕು ಎನ್ನುತ್ತಾನೆ ಚಾಣಕ್ಯ. ಬನ್ನಿ ಆ ಮೂರು ನೀತಿಗಳು ಯಾವುವು ಎಂದು ತಿಳಿಯೋಣ.

1.ಸಂತೋಶ ಕಡಿಮೆಯಾಗಲು ಬಿಡಬಾರದು – ದಂಪತಿಗಳು ಮದುವೆಯಾದ ನಂತರ ಹೆಚ್ಚು ಸಂತೋಶದಿಂದ ಇರುತ್ತಾರೆ. ಆದರೇ ದಿನ ಕಳೆದಂತೆ ಅವರ ಸಂತೋಶ ಕಡಿಮೆಯಾಗುತ್ತದೆ. ಆದರೇ ಯಾವುದೇ ಕಾರಣಕ್ಕೂ ಸಂತೋಶ ಕಡಿಮೆ ಆಗಲು ಬಿಡಬಾರದು. ಚಿಕ್ಕ ಪುಟ್ಟ ಸಂಗತಿಗಳನ್ನು ಸಂತೋಶದಿಂದ ಸಂಭ್ರಮಿಸಬೇಕು, ಪರಸ್ಪರ ಕೃತಜ್ಞತಾ ಭಾವದಿಂದ ಅನ್ಯೋನ್ಯವಾಗಿರಬೇಕು.

2.ಪ್ರೀತಿ,ಪ್ರೇಮದ ನಡುವೆ ಗೌರರವೂ ಇರಬೇಕು – ದಾಂಪತ್ಯದಲ್ಲಿ ದಂಪತಿ ಮಧ್ಯೆ ಸರಸ ವಿರಸ ಇದ್ದೇ ಇರುತ್ತದೆ. ಆದರೇ ಇದರ ಜೊತೆ ಪರಸ್ಪರ ಗೌರವ ಸಹ ಇರಬೇಕು. ಒಬ್ಬರೂ ಇನ್ನೊಬ್ಬರ ವೃತ್ತಿ ಹಾಗೂ ವ್ಯಕ್ತಿತ್ವವನ್ನ ಗೌರವಿಸಿದರೇ ದಾಂಪತ್ಯ ಮತ್ತಷ್ಟು ಗಟ್ಟಿಗೊಳ್ಳುತ್ತದೆ ಎನ್ನುತ್ತಾನೆ ಚಾಣಕ್ಯ.

3.ಇತರರ ಮುಂದೆ ಎಂದಿಗೂ ನಿಂದನೆ ಮಾಡಬಾರದು – ಪತಿಯಾಗಲಿ ಅಥವಾ ಪತ್ನಿಯಾಗಲಿ ಬೇರೆಯವರ ಮುಂದೆ ಎಂದಿಗೂ ತನ್ನ ಸಹವರ್ತಿಯ ಬಗ್ಗೆ ಕೆಟ್ಟದಾಗಿ ಮಾತನಾಡಬಾರದು. ದಾಂಪತ್ಯದಲ್ಲಿ ಎಂತಹದೇ ಬಿರುಕುಗಳಿದ್ದರೂ, ಅವುಗಳನ್ನ ಸಾರ್ವಜನಿಕರ ಮಧ್ಯೆ ವ್ಯಕ್ತಪಡಿಸದೇ, ನಾಲ್ಕು ಗೋಡೆಗಳ ಮಧ್ಯೆ ಬಗೆಹರಿಸಿಕೊಳ್ಳಬೇಕು ಎನ್ನುತ್ತಾನೆ ಚಾಣಕ್ಯ. ಚಾಣಕ್ಯನ ಈ ಮೂರು ನೀತಿಯ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.

Get real time updates directly on you device, subscribe now.