ವೊಡಾಫೋನ್ ಐಡಿಯಾ ಕಡೆಯಿಂದ ನ ಹೊಸ ಕೊಡುಗೆ 599 ರ ಪ್ಲಾನ್ ಗೆ ಗ್ರಾಹಕರು ಕ್ಲೀನ್ ಬೋಲ್ಡ್, ಜಿಯೋ ಏರ್ಟೆಲ್ ಗೆ ಗೆ ಶಾಕ್. ಏನೆಲ್ಲಾ ಸಿಗುತ್ತಿದೆ ಗೊತ್ತೇ??

ವೊಡಾಫೋನ್ ಐಡಿಯಾ ಕಡೆಯಿಂದ ನ ಹೊಸ ಕೊಡುಗೆ 599 ರ ಪ್ಲಾನ್ ಗೆ ಗ್ರಾಹಕರು ಕ್ಲೀನ್ ಬೋಲ್ಡ್, ಜಿಯೋ ಏರ್ಟೆಲ್ ಗೆ ಗೆ ಶಾಕ್. ಏನೆಲ್ಲಾ ಸಿಗುತ್ತಿದೆ ಗೊತ್ತೇ??

ನಮಸ್ಕಾರ ಸ್ನೇಹಿತರೇ, ಇತ್ತೀಚಿಗೆ ಟೆಲಿಕಾಂ ಕಂಪನಿಗಳ ನಡುವೆ ಭಾರಿ ಪೈಪೋಟಿ ನಡೆಯುತ್ತಿದೆ. ಹಾಗಾಗಿ ದುಬಾರಿಯಾಗಿದ್ದ ಪ್ಲಾನ್ ಗಳೆಲ್ಲವನ್ನೂ ಕಡಿಮೆಗೊಳಿಸಿ, ಹೊಸ ಹೊಸ ಪ್ರೀಪೇಡ್ ಯೋಜನೆಗಳ ಮೂಲಕ ಗ್ರಾಹಕರನ್ನು ಹಿಡಿದಿಟ್ಟುಕೊಳ್ಳುವ ಪ್ರಯತ್ನದಲ್ಲಿ ನಿರತರಾಗಿದ್ದಾರೆ. ಆದರೆ ಈ ಬಾರಿ ಜಿಯೋ ಹಾಗೂ ಏರ್‌ಟೆಲ್ ಕಂಪೆನಿಗಳಿಗಿಂತ ಹೆಚ್ಚು ಲಾಭವಿರುವ ಪ್ರೀಪೇಡ್ ಯೋಜನೆಯೊಂದನ್ನು ದೇಶದ ಪ್ರಮುಖ ಖಾಸಗಿ ಟೆಲಿಕಾಂ ಕಂಪೆನಿಗಳಲ್ಲಿ ಒಂದಾಗಿರುವ ವಡಾಫೋನ್ ಐಡಿಯಾ (Vi) ತನ್ನ ಗ್ರಾಹಕರಿಗೆ ನೀಡಿದೆ.

ಹೌದು, ಭಾರತದಾದ್ಯಂತ ಪ್ರಿಪೇಯ್ಡ್ ಗ್ರಾಹಕರಿಗೆ ವೈಐ ಟೆಲಿಕಾಂ ಕಂಪೆನಿ ಅದ್ಭುತವಾದ ಪ್ಲಾನ್ ಒಂದನ್ನು ಪರಿಚಯಿಸುತ್ತಿದೆ. ಅದುವೇ 599 ರೂ.ಗಳ ಪ್ರಿಪೇಯ್ಡ್ ಯೋಜನೆ. ಈ ಯೋಜನೆಯಲ್ಲಿ ಗ್ರಾಹಕರಿಗೆ ಲಭ್ಯವಾಗುತ್ತಿರುವುದೇನೆಂದರೆ 70 ದಿನಗಳ ವ್ಯಾಲಿಡಿಟಿ ಜೊತೆಗೆ ಅನಿಯಮಿತ ಧ್ವನಿ ಕರೆ, ದಿನಕ್ಕೆ 100 SMS, 1.5 ಜಿಬಿ ದೈನಂದಿನ ಡೇಟಾ ನೀಡಲಾಗುತ್ತದೆ.

ಇದೇ ರೀತಿ ಪ್ರಯೋಜನಗಳಿರುವ 84 ದಿನಗಳ ವ್ಯಾಲಿಡಿಟಿ ಹೊಂದಿರುವ ಜಿಯೋ ಪ್ಲಾನ್ ಗೆ 666 ರೂ. ಮತ್ತು ಏರ್‌ಟೆಲ್‌ ಪ್ಲಾನ್ ಗೆ ನೀವು 719 ರೂ. ಪಾವತಿಸಬೇಕು. ಇಲ್ಲಿ ಹೆಚ್ಚುವರಿ 14 ದಿನಗಳ ಸೇವೆಗಳು ಲಭ್ಯವಿದೆ ಎಂದು ನೀವು ಹೇಳಬಹುದು. ಆದರೆ ಇದರ ವೆಚ್ಚವೂ ಹೆಚ್ಚು. ವಿಐ ನೀಡುತ್ತಿರುವ 599 ರೂ.ಗಳ ಪ್ರಿಪೇಯ್ಡ್ ಯೋಜನೆಯು ಒಟ್ಟಾರೆ ದಿನಕ್ಕೆ 8.56 ರೂ.ನಲ್ಲಿ ಡೇಟಾ ಡಿಲೈಟ್ , ವೀಕೆಂಡ್ ರೋಲ್‌ಓವರ್ ಮತ್ತು ಬಿಂಜ್ ಆಲ್ ನೈಟ್ ಆಫರ್‌ಗಳನ್ನು ಒಳಗೊಂಡಿದ್ದು, ವೈ ಹೀರೋ ಅನ್‌ಲಿಮಿಟೆಡ್ ಪ್ರಯೋಜನಗಳನ್ನು ಗ್ರಾಹಕರಿಗೆ ನೀಡುತ್ತಿದೆ. ಹಾಗಾಗಿ ಇದು ಜಿಯೋ ಮತ್ತು ಏರ್‌ಟೆಲ್ ಕಂಪೆನಿಗಳು ನೀಡುತ್ತಿರುವ 84 ದಿನಗಳ ಯೋಜನೆಗಿಂತ ಅತ್ಯುತ್ತಮ ಯೋಜನೆಯಾಗಿದೆ ಎನ್ನಬಹುದು. ಜೊತೆಗೆ ವಿಐ ತನ್ನ ಬಳಕೆದಾರರಿಗೆ ಪ್ರತಿ ತಿಂಗಳು 2ಜಿಬಿ ಬೋನಸ್ ಅಥವಾ ತುರ್ತು ಡೇಟಾವನ್ನು ಉಚಿತವಾಗಿ ನೀಡುತ್ತದೆ. ಈ 2ಜಿಬಿ ಡೇಟಾವನ್ನು ದಿನಕ್ಕೆ 1ಜಿಬಿ ಯಂತೆ ತಿಂಗಳಲ್ಲಿ ಎರಡು ಬಾರಿ ರಿಡೀಮ್ ಮಾಡಿಕೊಳ್ಳಬಹುದು.