ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಈ ಮೂವರು ಆಟಗಾರರನ್ನು ವಾಪಾಸ್ ಆರ್ಸಿಬಿ ಕರೆತನ್ನಿ ಎನ್ನುತ್ತಿದ್ದಾರೆ ಫ್ಯಾನ್ಸ್. ಯಾರ್ಯಾರು ಬೇಕಂತೆ ಗೊತ್ತೇ?? ಹರಾಜಿನಲ್ಲಿ ಆರ್ಸಿಬಿ ಅಭಿಮಾನಿಗಳ ಬೇಡಿಕೆಯೇನು ಗೊತ್ತೇ??

18

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಇತಿಹಾಸದಲ್ಲಿಯೇ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಫ್ರಾಂಚೈಸಿ. ಆದರೇ ಇವರೆಗೂ ಒಂದು ಭಾರಿಯೂ ಕಪ್ ಗೆಲ್ಲದಿದ್ದರೂ, ಆರ್ಸಿಬಿ ಅಭಿಮಾನಿಗಳಿಗೆ ಬೇಸರವಿಲ್ಲ. ಮುಂದಿನ ವರ್ಷವಾದರೂ ಆರ್ಸಿಬಿ ಕಪ್ ಗೆಲ್ಲಲಿದೆ ಎಂಬುದು ಅವರ ಆಶಾವಾದ. ಈ ನಡುವೆ ಈ ಭಾರಿ ಆರ್ಸಿಬಿ ತಂಡ ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸವೆಲ್, ಹಾಗೂ ಮಹಮದ್ ಸಿರಾಜ್ ರನ್ನು ರಿಟೇನ್ ಮಾಡಿದೆ. ಈ ನಡುವೆ ಅಭಿಮಾನಿಗಳು ಅವರ ಜೊತೆ ಈ ಮೂವರು ಆಟಗಾರರನ್ನು ಸಹ ಕರೆತನ್ನಿ ಎಂದು ಅಭಿಯಾನ ನಡೆಸಿದ್ದಾರೆ. ಬನ್ನಿ ಆ ಮೂವರು ಆಟಗಾರರು ಯಾರು ಎಂದು ತಿಳಿಯೋಣ.

1.ಯುಜವೇಂದ್ರ ಚಾಹಲ್ : ಆರ್ಸಿಬಿ ಪಾಲಿಗೆ ಯಶಸ್ವಿ ವಿಕೇಟ್ ಟೇಕರ್ ಆಗಿದ್ದ ಯುಜವೇಂದ್ರ ಚಾಹಲ್ ರನ್ನ ಈ ಭಾರಿ ಆರ್ಸಿಬಿ ತಂಡ ರಿಟೇನ್ ಮಾಡಿಕೊಂಡಿಲ್ಲ. ಇವರನ್ನ ಮೆಗಾ ಹೇಗಾದರೂ ಮಾಡಿ, ಆರ್ಸಿಬಿಗೆ ವಾಪಸ್ ಕರೆತನ್ನಿ ಎಂದು ಅಭಿಮಾನಿಗಳು ಆಗ್ರಹಿಸಿದ್ದಾರೆ.

2.ಹರ್ಷಲ್ ಪಟೇಲ್ : ಆರ್ಸಿಬಿ ಪಾಲಿನ ಪರ್ಪಲ್ ಪಟೇಲ್ ಆಗಿದ್ದ ಹರ್ಷಲ್ ಪಟೇಲ್ ಕಳೆದ ಸೀಸನ್ ನಲ್ಲಿ ಹೆಚ್ಚು ವಿಕೇಟ್ ಗಳಿಸಿದ್ದರು. ಡೆತ್ ಓವರ್ ನಲ್ಲಿ ಅದ್ಭುತವಾಗಿ ಬೌಲಿಂಗ್ ಮಾಡುವ ಮೂಲಕ ಆರ್ಸಿಬಿ ಪಾಲಿನ ಮ್ಯಾಚ್ ವಿನ್ನರ್ ಆಗಿ ಹೊರ ಹೊಮ್ಮಿದರು. ಇವರನ್ನ ಆರ್ಸಿಬಿ ರಿಟೇನ್ ಮಾಡಿಕೊಳ್ಳಬಹುದೆಂಬ ಆಲೋಚನೆ ಇತ್ತು. ಆದರೇ ಆರ್ಸಿಬಿ ರಿಟೇನ್ ಮಾಡಿಕೊಂಡಿಲ್ಲ. ಆರ್ಸಿಬಿ ಇವರನ್ನ ಹರಾಜನಲ್ಲಿ ಶತಾಯಗತಾಯ ಖರೀದಿಸಬೇಕೆಂದು ಅಭಿಮಾನಿಗಳು ಆಗ್ರಹಿಸಿದ್ದಾರೆ.

3.ಕೆ.ಎಸ್.ಭರತ್ : ಕೊನೆಯ ಬಾಲ್ ನಲ್ಲಿ ಸಿಕ್ಸರ್ ಸಿಡಿಸಿ ಆರ್ಸಿಬಿಗೆ ಜಯ ತಂದ ವಿಕೇಟ್ ಕೀಪರ್ ಬ್ಯಾಟ್ಸಮನ್ ಭರತ್ ರವರು ಈ ಭಾರಿ ಆರ್ಸಿಬಿ ಶತಾಯಗತಾಯವಾಗಿ ಖರೀದಿಸಬೇಕು ಎಂದು ಅಭಿಮಾನಿಗಳು ಆಗ್ರಹಿಸಿದ್ದಾರೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.

Get real time updates directly on you device, subscribe now.