ಅಹಮದಾಬಾದ್ ಬೆನ್ನಲ್ಲೇ ಮೂರು ಬಲಾಢ್ಯರನ್ನು ಫೈನಲ್ ಮಾಡಿದ ಲಕ್ನೋ ತಂಡ, ಕೊನೆ ಆದೇಶ ಒಂದೇ ಬಾಕಿ. ಯಾರ್ಯಾರು ಗೊತ್ತೇ??

ಅಹಮದಾಬಾದ್ ಬೆನ್ನಲ್ಲೇ ಮೂರು ಬಲಾಢ್ಯರನ್ನು ಫೈನಲ್ ಮಾಡಿದ ಲಕ್ನೋ ತಂಡ, ಕೊನೆ ಆದೇಶ ಒಂದೇ ಬಾಕಿ. ಯಾರ್ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಐಪಿಎಲ್ 2022 ರಲ್ಲಿ ಎರಡು ಹೊಸ ತಂಡಗಳು ಸೇರಿಕೊಂಡಿರುವುದು ನಿಮಗೆಲ್ಲಾ ತಿಳಿದಿದೆ. ಈಗಾಗಲೇ ಅಹಮದಾಬಾದ್ ತಂಡ ತಮ್ಮ ತಂಡಕ್ಕೆ ಸೇರಿಸಿಕೊಂಡ ಮೂವರು ಆಟಗಾರರ ಪಟ್ಟಿಯನ್ನ ಬಿಡುಗಡೆ ಮಾಡಿದ ಬೆನ್ನಲ್ಲೇ, ಈಗ ಹೊಸ ಫ್ರಾಂಚೈಸಿ ಲಕ್ನೋ ತಂಡ ತಾನು ಆಯ್ಕೆ ಮಾಡಿಕೊಂಡ ಮೂರು ಆಟಗಾರರ ಪಟ್ಟಿಯನ್ನ ಬಿಡುಗಡೆಗೊಳಿಸಿದೆ. ಇಬ್ಬರು ಭಾರತೀಯ ಆಟಗಾರರು ಹಾಗೂ ಒಬ್ಬ ವಿದೇಶಿ ಆಲ್ ರೌಂಡರ್ ರನ್ನ ಲಕ್ನೋ ತಂಡ ಆಯ್ಕೆ ಮಾಡಿಕೊಂಡಿದೆ. ಬನ್ನಿ ಆ ಆಟಗಾರರು ಯಾರು ಎಂದು ತಿಳಿಯೋಣ.

1.ಕೆ.ಎಲ್.ರಾಹುಲ್ : ಕನ್ನಡಿಗ ಹಾಗೂ ಐಪಿಎಲ್ ಹರಾಜಿನಲ್ಲಿ ಬಹುಚರ್ಚಿತ ಹೆಸರಾಗಿದ್ದ ಕೆ.ಎಲ್.ರಾಹುಲ್ ಕೊನೆಗೂ ಲಕ್ನೋ ತಂಡದ ಪಾಲಾಗಿದ್ದಾರೆ. ಲಕ್ನೋ ತಂಡ ಇವರಿಗೆ ಬರೋಬ್ಬರಿ 15 ಕೋಟಿ ರೂಪಾಯಿ ಸಂಭಾವನೆ ನೀಡಿದೆ. ನೀರಿಕ್ಷೆಯಂತೆ ರಾಹುಲ್ ಲಕ್ನೋ ತಂಡದ ಆರಂಭಿಕ/ನಾಯಕ/ವಿಕೇಟ್ ಕೀಪರ್ ಜವಾಬ್ದಾರಿ ಹೊರಲಿದ್ದಾರೆ.

2.ಮಾರ್ಕಸ್ ಸ್ಟೋಯಿನಿಸ್ : ಕಳೆದ ಭಾರಿ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿದ್ದ ಆಸ್ಟ್ರೇಲಿಯಾದ ಆಲ್ ರೌಂಡರ್ ಮಾರ್ಕಸ್ ಸ್ಟೋಯಿನಿಸ್, ಈ ಭಾರಿ ಲಕ್ನೋ ತಂಡದ ಪಾಲಾಗಿದ್ದಾರೆ. ಟಿ 20 ವಿಶ್ವಕಪ್ ನಲ್ಲಿ ಆಸ್ಟ್ರೇಲಿಯಾ ಪರ ಅತ್ಯುತ್ತಮ ಆಟ ಆಡಿದ್ದರು. ಇವರಿಗೆ ಲಕ್ನೋ ತಂಡ ಬರೋಬ್ಬರಿ 11 ಕೋಟಿ ರೂಪಾಯಿ ಸಂಭಾವನೆ ನೀಡಿದೆ.

3.ರವಿ ಬಿಷ್ಣೋಯಿ : ರಾಜಸ್ತಾನದ ಅದ್ಭುತ ಲೆಗ್ ಸ್ಪಿನ್ನರ್ ಬಿಷ್ಣೋಯಿ , ಕಳೆದ ಆವೃತ್ತಿಯಲ್ಲಿ ಪಂಜಾಬ್ ಕಿಂಗ್ಸ್ ತಂಡದಲ್ಲಿದ್ದರು. ಈ ಭಾರಿ ಅವರನ್ನ ಲಕ್ನೋ ತಂಡ ಪಡೆದುಕೊಂಡಿದೆ. ಅನುಭವಿ ಯುವ ಲೆಗ್ ಸ್ಪಿನ್ನರ್ ಗೆ ಲಕ್ನೋ ತಂಡ ಬರೋಬ್ಬರಿ 4 ಕೋಟಿ ರೂಪಾಯಿ ಸಂಭಾವನೆ ನೀಡಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.