ಸೌತ್ ಆಫ್ರಿಕಾ ವಿರುದ್ದ ಮೊದಲ ಏಕದಿನ ಪಂದ್ಯಕ್ಕೆ ವಸೀಂ ಜಾಫರ್ ಆಯ್ಕೆ ಮಾಡಿರುವ ಸಂಭವನೀಯ ತಂಡ ಹೇಗಿದೆ ಗೊತ್ತಾ??

ಸೌತ್ ಆಫ್ರಿಕಾ ವಿರುದ್ದ ಮೊದಲ ಏಕದಿನ ಪಂದ್ಯಕ್ಕೆ ವಸೀಂ ಜಾಫರ್ ಆಯ್ಕೆ ಮಾಡಿರುವ ಸಂಭವನೀಯ ತಂಡ ಹೇಗಿದೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ಟೆಸ್ಟ್ ಸರಣಿಯ ಸೋಲಿನ ಕಹಿಯನ್ನು ಮರೆಯಲು ಭಾರತ ತಂಡ ನಾಳೆಯಿಂದ ಆತಿಥೇಯ ದಕ್ಷಿಣ ಆಫ್ರಿಕಾದ ವಿರುದ್ದ ಮೂರು ಏಕದಿನ ಪಂದ್ಯಗಳ ಪೈಕಿ, ಮೊದಲನೇ ಏಕದಿನ ಪಂದ್ಯ ಆಡಲಿದೆ. ಆದರೇ ಈ ಪಂದ್ಯಕ್ಕೆ ಆಡುವ ಹನ್ನೊಂದರ ಬಳಗದಲ್ಲಿ ಒಳಗೆ ಬರುವ ಸದಸ್ಯರು ಯಾರು ಎಂಬ ಪ್ರಶ್ನೆ ಎದ್ದಿದೆ. ಈ ಬಗ್ಗೆ ಮಾತನಾಡಿರುವ ಭಾರತ ತಂಡದ ಮಾಜಿ ಆಟಗಾರ ವಸಿಂ ಜಾಫರ್ , ಸಂಭವನೀಯ ಹನ್ನೊಂದು ಜನರನ್ನು ಹೆಸರಿಸಿದ್ದಾರೆ. ಆದರೇ ಇದರಲ್ಲಿ ಹೊಸ ಆಟಗಾರರಾದ ರುತುರಾಜ್ ಗಾಯಕ್ವಾಡ್, ವೆಂಕಟೇಶ್ ಅಯ್ಯರ್ ಗೆ ಸ್ಥಾನ ನೀಡಿಲ್ಲ.

ವಸೀಂ ಜಾಫರ್ ಅಂತಿಮಗೊಳಿಸಿದ ಈ ತಂಡದಲ್ಲಿ 6 ತಜ್ಞ ಬ್ಯಾಟ್ಸಮನ್ ಗಳು, ಇಬ್ಬರು ಆಲ್ ರೌಂಡರ್ ಗಳು ಹಾಗೂ ಮೂವರು ಬೌಲರ್ ಗಳು ಸ್ಥಾನ ಪಡೆದಿದ್ದಾರೆ. ಆದರೇ ವಿಪರ್ಯಾಸವೆಂಬಂತೆ ಸ್ಪಿನ್ನರ್ ಆರ್.ಅಶ್ವಿನ್ ಹಾಗೂ ಶಾರ್ದೂಲ್ ಠಾಕೂರ್ ರವರನ್ನ ಆಲ್ ರೌಂಡರ್ ಎಂದು ಪರಿಗಣಿಸಿದ್ದಾರೆ. ಉಳಿದಂತೆ ಅಂತಹ ಮಹತ್ತರ ಬದಲಾವಣೆಗಳಿಲ್ಲದ ಪ್ಲೇಯಿಂಗ್ ಇಲೆವೆನ್ ನ್ನು ಆರಿಸಿದ್ದಾರೆ.

ಎಂದಿನಂತೆ ರಾಹುಲ್ ಹಾಗೂ ಧವನ್ ಇನ್ನಿಂಗ್ಸ್ ಆರಂಭಿಸಿದರೇ, ಮೂರನೇ ಕ್ರಮಾಂಕದಲ್ಲಿ ವಿರಾಟ್, ನಾಲ್ಕನೇ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್, ಐದನೇ ಕ್ರಮಾಂಕದಲ್ಲಿ ರಿಷಭ್ ಪಂತ್, ಆರನೇ ಕ್ರಮಾಂಕದಲ್ಲಿ ಸೂರ್ಯ ಕುಮಾರ್ ಯಾದವ್, ಏಳನೇ ಕ್ರಮಾಂಕದಲ್ಲಿ ಶಾರ್ದೂಲ್ ಠಾಕೂರ್, ಎಂಟನೇ ಕ್ರಮಾಂಕದಲ್ಲಿ ಆರ್.ಅಶ್ವಿನ್, ಒಂಬತ್ತನೇ ಕ್ರಮಾಂಕದಲ್ಲಿ ಭುವನೇಶ್ವರ್, ಹತ್ತನೇ ಕ್ರಮಾಂಕದಲ್ಲಿ ಬುಮ್ರಾ ಹಾಗೂ ಹನ್ನೊಂದನೇ ಕ್ರಮಾಂಕದಲ್ಲಿ ಸ್ಪಿನ್ನರ್ ಯುಜವೇಂದ್ರ ಚಾಹಲ್ ಸ್ಥಾನ ಪಡೆದಿದ್ದಾರೆ. ಈ ತಂಡದ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ. ಸಂಭವನೀಯ ತಂಡ ಇಂತಿದೆ : ಕೆ.ಎಲ್.ರಾಹುಲ್, ಶಿಖರ್ ಧವನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಭ್ ಪಂತ್, ಸೂರ್ಯ ಕುಮಾರ್ ಯಾದವ್, ಶಾರ್ದೂಲ್ ಠಾಕೂರ್, ಭುವನೇಶ್ವರ್ ಕುಮಾರ್, ಆರ್.ಅಶ್ವಿನ್, ಜಸಪ್ರಿತ್ ಬುಮ್ರಾ , ಯುಜವೇಂದ್ರ ಚಾಹಲ್.