ಕೊಹ್ಲಿ ರಾಜೀನಾಮೆ ಬೆನ್ನಲ್ಲೇ ನೂತನ ನಾಯಕನ ಆಯ್ಕೆಗೆ ದ್ರಾವಿಡ್ ರವರ ಮುಂದಿದೆ ಮೂರು ಆಯ್ಕೆ. ಸಂಭಾವನೆ ಪಟ್ಟಿ ಹೇಗಿದೆ ಗೊತ್ತೇ??

ಕೊಹ್ಲಿ ರಾಜೀನಾಮೆ ಬೆನ್ನಲ್ಲೇ ನೂತನ ನಾಯಕನ ಆಯ್ಕೆಗೆ ದ್ರಾವಿಡ್ ರವರ ಮುಂದಿದೆ ಮೂರು ಆಯ್ಕೆ. ಸಂಭಾವನೆ ಪಟ್ಟಿ ಹೇಗಿದೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಈಗಾಗಲೇ ಭಾರತದ 3 ಫಾರ್ಮಟ್ ಗಳಿಂದಲೂ ಕೂಡ ವಿರಾಟ್ ಕೊಹ್ಲಿ ನಾಯಕನ ಸ್ಥಾನದಿಂದ ಕೆಳಗಿಳಿದಿರುವ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಭರಿಸಲಾಗದ ನಷ್ಟದ ಅನುಭವವನ್ನು ನೀಡಿದೆ. ಆದರೆ ಈಗ ಅದನ್ನು ಯೋಚಿಸುತ್ತಾ ಕೋರುವ ಸಮಯವಲ್ಲ. ಹೀಗಾಗಿ ಭಾರತಕ್ಕೆ ಟೆಸ್ಟ್ ಫಾರ್ಮ್ಯಾಟ್ ನಲ್ಲಿ ಹೊಸ ನಾಯಕನನ್ನು ಆಯ್ಕೆ ಮಾಡುವ ಜವಾಬ್ದಾರಿ ಈಗ ತಂಡದ ಕೋಚ್ ಆಗಿರುವ ರಾಹುಲ್ ದ್ರಾವಿಡ್ ರವರ ಮುಂದಿದೆ.

ಈ ಹಿಂದೆ ವಿರಾಟ್ ಕೊಹ್ಲಿ ಅವರ ನಂತರ ಟಿ20 ತಂಡದ ನಾಯಕನನ್ನಾಗಿ ಕೂಡ ರೋಹಿತ್ ಶರ್ಮ ರವರನ್ನು ಆಯ್ಕೆಮಾಡುವ ಕಾರ್ಯ ರಾಹುಲ್ ದ್ರಾವಿಡ್ ರವರಿಂದ ನಡೆದಿತ್ತು. ಹೀಗಾಗಿ ಈಗ ಟೆಸ್ಟ್ ತಂಡದ ನಾಯಕನನ್ನಾಗಿ ಮಾಡಲು ಮೂರು ಆಯ್ಕೆಗಳು ರಾಹುಲ್ ದ್ರಾವಿಡ್ ರವರ ಮುಂದೆ ಈಗ ಬಿಸಿಸಿಐ ನೀಡಿದೆ. ಹಾಗಿದ್ದರೆ ಅವರು ಯಾರು ಮತ್ತು ಕಾರಣ ಏನು ಎಂಬುದನ್ನು ನಾವು ತಿಳಿಸುತ್ತೇವೆ ಬನ್ನಿ. ಹೌದು ಗೆಳೆಯರೆ ರಾಹುಲ್ ದ್ರಾವಿಡ್ ರವರ ಮುಂದೆ ಟೆಸ್ಟ್ ತಂಡದ ನಾಯಕರನ್ನಾಗಿ ಮಾಡಲು ರೋಹಿತ್ ಶರ್ಮ ಕೆ ಎಲ್ ರಾಹುಲ್ ಹಾಗೂ ರಿಷಬ್ ಪಂತ್ ರವರ ಆಯ್ಕೆಗಳು ಬಂದಿವೆ. ಅದಕ್ಕೆ ಸಮರ್ಪಕವಾಗಿರುವ ಕಾರಣಗಳು ಯಾವುವು ಎಂಬುದನ್ನು ಹೇಳುತ್ತೇವೆ ಬನ್ನಿ.

ಒಂದು ವೇಳೆ ರೋಹಿತ್ ಶರ್ಮಾರವರು ನಾಯಕನಾದರೆ 3 ಫಾರ್ಮೆಟ್ ಗಳಲ್ಲಿ ಕೂಡ ಒಬ್ಬನೇ ನಾಯಕನಾಗಿರುವುದರಿಂದಾಗಿ ಕೋಚ್ ಹಾಗೂ ನಾಯಕನ ನಡುವೆ ಉತ್ತಮ ಸಂಬಂಧ ಏರ್ಪಡುತ್ತದೆ. ಒಂದು ವೇಳೆ ಕೆಎಲ್ ರಾಹುಲ್ ರವರು ನಾಯಕನಾದರೆ ರೋಹಿತ್ ಶರ್ಮಾ ರವರ ನಂತರ ಒಬ್ಬ ಸಮರ್ಥ ನಾಯಕನನ್ನು ಈಗಲೇ ಹುಟ್ಟುಹಾಕಲು ಸಹಾಯಕವಾಗುತ್ತದೆ. ರಿಷಬ್ ಪಂತ್ ಅವರನ್ನು ನಾಯಕನನ್ನಾಗಿ ಆಯ್ಕೆ ಮಾಡಿದರೆ ಮುಂದೊಂದು ದಿನ ರೋಹಿತ್ ಶರ್ಮಾ ಅವರು ನಿವೃತ್ತಿ ಹೊಂದಿದ ನಂತರ ಕೆಎಲ್ ರಾಹುಲ್ ಅವರ ಅನುಪಸ್ಥಿತಿಯಲ್ಲಿ ಮತ್ತೊಬ್ಬ ನಾಯಕನನ್ನು ಸಿದ್ಧಪಡಿಸಬೇಕು. ಈಗಿನಿಂದಲೇ ರಿಷಬ್ ಪಂತ್ ರವರನ್ನು ವಿಕೆಟ್ ಕೀಪರ್ ನಾಯಕನನ್ನಾಗಿ ರೆಡಿ ಮಾಡಿದರೆ ಮಹೇಂದ್ರ ಸಿಂಗ್ ಧೋನಿಯ ರವರಂತೆ ಗುಣಮಟ್ಟದ ನಾಯಕನ ಕಾರ್ಯವನ್ನು ನಿಭಾಯಿಸಬಹುದಾದ ಎಲ್ಲ ಸಾಧ್ಯತೆಗಳಿವೆ. ಇನ್ನು ಟೆಸ್ಟ್ ಕ್ರಿಕೆಟ್ ತಂಡದ ನಾಯಕನಾಗಿ ಯಾರು ಆಯ್ಕೆ ಆಗುತ್ತಾರೆ ಎಂಬುದೇ ಈಗ ಎಲ್ಲರ ಮುಂದಿರುವ ದೊಡ್ಡ ಪ್ರಶ್ನೆ ಹಾಗೂ ಕುತೂಹಲ.