ವಿದೇಶಿಗರ ಬಾಲ ಹಿಡಿಯಲು ಹೊಸ ಲಕ್ನೋ, ಅಹಮದಾಬಾದ್ ಫ್ರಾಂಚೈಸಿಗಳಿಗೆ ಶಾಕ್ ಕೊಟ್ಟ ಶ್ರೇಯಸ್ ಅಯ್ಯರ್. ಮಾಡಿದ್ದೇನು ಗೊತ್ತೇ??

ವಿದೇಶಿಗರ ಬಾಲ ಹಿಡಿಯಲು ಹೊಸ ಲಕ್ನೋ, ಅಹಮದಾಬಾದ್ ಫ್ರಾಂಚೈಸಿಗಳಿಗೆ ಶಾಕ್ ಕೊಟ್ಟ ಶ್ರೇಯಸ್ ಅಯ್ಯರ್. ಮಾಡಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಐಪಿಎಲ್ – 2022 ರಲ್ಲಿ ಹೊಸ ತಂಡಗಳು ಸೇರ್ಪಡೆಯಾಗಿರುವುದು ನಿಮಗೆಲ್ಲಾ ತಿಳಿದಿರುವ ವಿಷಯವಾಗಿದೆ. ಹೊಸ ಫ್ರಾಂಚೈಸಿಗಳಾದ ಲಕ್ನೋ ಹಾಗೂ ಅಹಮದಾಬಾದ್ ತಂಡಗಳು ಆಟಗಾರರ ಸಾರ್ವತ್ರಿಕ ಹರಾಜಿಗಿಂತ ಮುನ್ನವೇ ಮೂವರು ಆಟಗಾರರನ್ನು ಖರೀದಿಸಬಹುದು ಎಂದು ಹೇಳಿತ್ತು. ಅದರಂತೆಯೇ ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕದ ಬ್ಯಾಟ್ಸಮನ್ ಶ್ರೇಯಸ್ ಅಯ್ಯರ್ ಲಕ್ನೋ ಅಥವಾ ಅಹಮದಾಬಾದ್ ಈ ಎರಡು ತಂಡಗಳಲ್ಲಿ ಒಂದು ತಂಡಕ್ಕೆ ಸೇರಿಕೊಂಡು ಅದರ ನಾಯಕತ್ವವನ್ನು ವಹಿಸುವುದು ಬಹುತೇಖ ಖಚಿತ ಎಂದು ಹೇಳಲಾಗಿತ್ತು.

ಇದಕ್ಕೆ ಒಂದು ಫ್ರಾಂಚೈಸಿ ಕೂಡ ಮುಂದಾಗಿತ್ತು, ಆದರೆ ಕೊನೆ ಕ್ಶಣದದಲ್ಲಿ ವಿದೇಶಿಗರಿಗೆ ಮಣೆ ಹಾಕಲು ನಾಯಕನ ಸ್ಥಾನ ಆಫರ್ ನೀಡಲು ಎರಡು ತಂಡಗಳು ಮುಂದಾಗಿವೆ ಎನ್ನಲಾಗುತ್ತಿದೆ. ಹೌದು ಹೊಸ ಫ್ರಾಂಚೈಸಿಗಳಾದ ಲಕ್ನೋ ಮತ್ತು ಅಹಮದಾಬಾದ್ ತಂಡಗಳು ಶ್ರೇಯಸ್ ಅಯ್ಯರ್ ರವರನ್ನ ತಂಡಕ್ಕೆ ಸೇರಿಸಿಕೊಳ್ಳುತ್ತೇವೆ ಆದರೇ ನಿಮಗೆ ನಾಯಕತ್ವವನ್ನ ನೀಡುವುದಿಲ್ಲ ಎಂದು ಹೇಳಿದ್ದಾರಂತೆ. ಹಾಗಾಗಿ ಶ್ರೇಯಸ್ ಅಯ್ಯರ್ ಗೆ ಈ ವಿಷಯ ತಿಳಿದು ತೀವ್ರ ಬೇಸರವಾಗಿದೆ ಎಂಬ ಮಾಹಿತಿ ಬರುತ್ತಿದೆ. ಹೊಸ ಫ್ರಾಂಚೈಸಿಗಳು ಜನೇವರಿ 22 ರ ಒಳಗೆ ಬಿಸಿಸಿಐ ನ ಹೊಸ ನಿಯಮಗಳಿಗೆ ಅನುಸಾರವಾಗಿ ಮೂವರು ಆಟಗಾರರ ಪಟ್ಟಿಯನ್ನ ಬಿಡುಗಡೆ ಮಾಡಬೇಕಾದ ಪರಿಸ್ಥಿತಿಯಲ್ಲಿವೆ. ಆದರೇ ಈಗ ಫ್ರಾಂಚೈಸಿಗಳಿಗೆ ಬುದ್ದಿ ಕಲಿಸುವ ನಿರ್ಧಾರಕ್ಕೆ ಬಂದಿರುವ ಶ್ರೇಯಸ್ ಅಯ್ಯರ್ ಈ ಎರಡೂ ತಂಡಗಳಿಂದ ಹೊರ ಬಂದಿದ್ದಾರೆ.

ಬದಲಿಗೆ ತಾವು ಹರಾಜಿನಲ್ಲಿ ಭಾಗವಹಿಸುವುದಾಗಿ ತಿಳಿಸಿದ್ದಾರೆ. ನಾನು ಈ ಹಿಂದೆಯೇ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕತ್ವ ವಹಿಸಿ ತಂಡ ಫೈನಲ್ ಬರುವ ಹಾಗೆ ಮಾಡಿದ್ದೆ. ಆದರೇ ಈಗ ಹೊಸ ತಂಡಗಳು ನನ್ನನ್ನ ನಾಯಕನನ್ನಾಗಿ ಮಾಡುತ್ತೇವೆಂದು ಹೇಳಿ, ಈಗ ಉಲ್ಟಾ ಹೊಡೆದಿವೆ. ಹಾಗಾಗಿ ಹರಾಜಿನಲ್ಲಿ ಭಾಗವಹಿಸುತ್ತೇನೆ. ಐಪಿಎಲ್ ನ ಈ ಅವಧಿಯಲ್ಲಿ ಹಲವಾರು ತಂಡಗಳು ಹೊಸ ನಾಯಕನನ್ನ ಎದುರು ನೋಡುತ್ತಿವೆ. ಹಾಗಾಗಿ ನನಗೆ ನಾಯಕನಾಗುವ ಎಲ್ಲಾ ಅರ್ಹತೆ ಹಾಗೂ ಗುಣಮಟ್ಟ ಇದೆ. ಹರಾಜಿನಲ್ಲಿ ಭಾಗವಹಿಸಿ, ಒಂದು ಅನುಭವಿ ಫ್ರಾಂಚೈಸಿಗೆ ನಾಯಕನಾಗಿ ತಂಡವನ್ನು ಮುನ್ನಡೆಸುತ್ತೇನೆ ಎಂದು ಶ್ರೇಯಸ್ ಅಯ್ಯರ್ ಹೇಳಿರುವುದು ವರದಿಯಾಗಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.