ಬಿಗ್ ನ್ಯೂಸ್: ಮತ್ತೆ ವಿಶೇಷ ರೀತಿಯಲ್ಲಿ ಮೈದಾನಕ್ಕಿಳಿಯಲು ತಯಾರಾದ ಯುವಿ, ವೀರೂ, ಭಜ್ಜಿ. ಹೇಗೆ ಗೊತ್ತೇ?? ಅಭಿಮಾನಿಗಳಿಗೆ ಹಬ್ಬ ಗ್ಯಾರಂಟಿ.

ಬಿಗ್ ನ್ಯೂಸ್: ಮತ್ತೆ ವಿಶೇಷ ರೀತಿಯಲ್ಲಿ ಮೈದಾನಕ್ಕಿಳಿಯಲು ತಯಾರಾದ ಯುವಿ, ವೀರೂ, ಭಜ್ಜಿ. ಹೇಗೆ ಗೊತ್ತೇ?? ಅಭಿಮಾನಿಗಳಿಗೆ ಹಬ್ಬ ಗ್ಯಾರಂಟಿ.

ನಮಸ್ಕಾರ ಸ್ನೇಹಿತರೇ ಭಾರತದ ಲೆಜೆಂಡ್ ಕ್ರಿಕೇಟರ್ಸ್ ಮತ್ತೊಮ್ಮೆ ಮೈದಾನಕ್ಕಿಳಿಯಲು ಸಜ್ಜಾಗಿದ್ದಾರೆ. ಅಂತರಾಷ್ಟ್ರಿಯ ಕ್ರಿಕೇಟ್ ನಲ್ಲಿ ಅದ್ಭುತ ಪ್ರದರ್ಶನ ತೋರಿ ನಿವೃತ್ತಿ ಹೊಂದಿದ ಕ್ರಿಕೇಟರ್ ಗಳನ್ನೆಲ್ಲಾ ಒಟ್ಟಿಗೆ ಸೇರಿಸಿ ಲೆಜೆಂಡ್ಸ್ ಲೀಗ್ ಕ್ರಿಕೇಟ್ ಎಂಬ ಟೂರ್ನಿ ನಡೆಸುತ್ತಿರುವುದು ನಿಮ್ಮ ಗಮನಕ್ಕೆ ಬಂದಿರುತ್ತದೆ. ನಿವೃತ್ತಿ ಹೊಂದಿದ ಕ್ರಿಕೇಟ್ರ್ ಗಳ ವೃತ್ತಿಪರ ಲೀಗ್ ಇದಾಗಿದ್ದು ಇದರಲ್ಲಿ ವಿಶ್ವದ ಮೂರು ತಂಡಗಳು ಭಾಗವಹಿಸುತ್ತಿವೆ.

ಮೂರು ತಂಡಗಳಲ್ಲಿ ಭಾರತದ ಒಂದು ತಂಡ ಹಾಗೂ ಏಷ್ಯನ್ ಲಯನ್ಸ್ ತಂಡದಲ್ಲಿ ಶ್ರೀಲಂಕಾ ಹಾಗೂ ಪಾಕಿಸ್ತಾನ ತಂಡದ ನಿವೃತ್ತಿ ಆಟಗಾರರು ಹಾಗೂ ಮೂರನೇ ತಂಡದಲ್ಲಿ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ , ವೆಸ್ಟ್ ಇಂಡಿಸ್ ಹಾಗೂ ಇಂಗ್ಲೆಂಡ್ ತಂಡದ ನಿವೃತ್ತ ಆಟಗಾರರು ಭಾಗವಹಿಸಲಿದ್ದಾರೆ. ಈ ಮೂಲಕ ಲೆಜೆಂಡ್ ಗಳ ಆಟವನ್ನು ನೀವು ಮತ್ತೊಮ್ಮೆ ಕ್ರೀಡಾಂಗಣದಲ್ಲಿ ನೋಡಬಹುದಾಗಿದೆ ಹಾಗೂ ಒಂದು ಉತ್ತಮ ಕೆಲಸಕ್ಕಾಗಿ ಈ ಟೂರ್ನಿಯನ್ನು ಆಯೋಜನೆ ಮಾಡಿ ಬಳಸಿಕೊಳ್ಳುತ್ತಿರುವುದು ಉತ್ತಮ ವಿಷಯವಾಗಿದೆ. ಆ ಗುರಿ ಏನು ಎಂಬುದನ್ನು ಸದ್ಯದಲ್ಲಿಯೇ ಬಿಡುಗಡೆ ಮಾಡಲಿದ್ದಾರೆ.

ಇನ್ನು ಈ ಟೂರ್ನಿ ಓಮಾನ್ ನಲ್ಲಿ ನಡೆಯಲಿದ್ದು ಈ ಲೀಗ್ ನ ಮುಖ್ಯಸ್ಥರಾಗಿ ಭಾರತದ ಮಾಜಿ ಕೋಚ್ ರವಿಶಾಸ್ತ್ರಿಯವರನ್ನ ನೇಮಕ ಮಾಡಲಾಗಿದೆ. ಭಾರತ ತಂಡದಲ್ಲಿ ಸ್ಥಾನ ಪಡೆದ ಕ್ರಿಕೇಟಿಗರು ಈ ಕೆಳಗಿನಂತಿದ್ದಾರೆ. ಭಾರತ ತಂಡಕ್ಕೆ ಭಾರತ್ ಮಹಾರಾಜ್ ಎಂದು ಹೆಸರಿಡಲಾಗಿದೆ. ಭಾರತ ತಂಡ ಇಂತಿದೆ : ವಿರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್, ಹರ್ಭಜನ್ ಸಿಂಗ್, ಇರ್ಫಾನ್ ಪಠಾಣ್, ಯೂಸೂಫ್ ಪಠಾಣ್, ಬದ್ರಿನಾಥ್, ಆರ್.ಪಿ.ಸಿಂಗ್, ಪ್ರಗ್ಯಾನ್ ಓಜಾ, ನಮನ್ ಓಜಾ, ಮನಪ್ರೀತ್ ಗೋನಿ, ಹೇಮಂಗ್ ಬದಾನಿ, ವೇಣುಗೋಪಾಲ್ ರಾವ್, ಮುನಾಫ್ ಪಟೇಲ್, ಸಂಜಯ್ ಬಂಗಾರ್, ನಯನ್ ಮೊಂಗಿಯಾ, ಅಮಿತ್ ಭಂಡಾರಿ.