ಪ್ರತಿಯೊಬ್ಬ ತಂದೆಗೂ ಕೂಡ ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳು ಎಂದರೆ ಇಷ್ಟ ಆಗುವುದು ಯಾಕೆ ಗೊತ್ತಾ?? ಅದಕ್ಕೂ ಇವೇ ಬಲವಾದ ಕಾರಣ.

ಪ್ರತಿಯೊಬ್ಬ ತಂದೆಗೂ ಕೂಡ ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳು ಎಂದರೆ ಇಷ್ಟ ಆಗುವುದು ಯಾಕೆ ಗೊತ್ತಾ?? ಅದಕ್ಕೂ ಇವೇ ಬಲವಾದ ಕಾರಣ.

ನಮಸ್ಕಾರ ಸ್ನೇಹಿತರೇ ಹೆತ್ತವರಿಗೆ ತಮ್ಮ ಮಕ್ಕಳ ಕುರಿತಂತೆ ಸಾಕಷ್ಟು ಪ್ರೀತಿ ಅಭಿಮಾನಿಗಳು ಇರುತ್ತವೆ. ಆದರೆ ತಂದೆಯರಿಗೆ ಹೆಣ್ಣುಮಕ್ಕಳ ಕುರಿತಂತೆ ಹೆಚ್ಚಿನ ಒಲವು ಹಾಗೂ ಪ್ರೀತಿ ಮತ್ತು ತಾಯಿಯರಿಗೆ ಗಂಡು ಮಕ್ಕಳ ಕುಡಿದಂತೆ ಪ್ರೀತಿ ಇರುವುದನ್ನು ನೀವು ಸಾಮಾನ್ಯವಾಗಿ ನೋಡಬಹುದು. ಅದರಲ್ಲೂ ವಿಶೇಷವಾಗಿ ಇಂದು ನಾವು ತಂದೆಯರ ಕುರಿತಂತೆ ಹೇಳಲು ಹೊರಟಿದ್ದೇವೆ. ತಂದೆಯರಿಗೆ ತಮ್ಮ ಗಂಡು ಮಕ್ಕಳಿಗೆ ಹೋಲಿಸಿದರೆ ಹೆಣ್ಣುಮಕ್ಕಳೆಂದರೆ ಸಾಕಷ್ಟು ಪ್ರೀತಿ ಹಾಗೂ ಮಮತೆ ಇರುತ್ತದೆ. ಹೆಣ್ಣು ಮಕ್ಕಳ ಜೊತೆಗೆ ಭಾವನಾತ್ಮಕವಾಗಿ ತಂದೆಯರು ಯಾಕೆ ಅಷ್ಟೊಂದು ಇರುತ್ತಾರೆ ಎಂಬುದರ ವಿಚಾರದ ಕುರಿತಂತೆ ನಿಮಗೆ ವಿವರವಾಗಿ ಹೇಳಲು ಹೊರಟಿದ್ದೇವೆ ತಪ್ಪದೆ ಲೇಖನಿಯನ್ನು ಓದಿ.

ಮೊದಲನೆಯದಾಗಿ ಗಂಡು ಮಕ್ಕಳಿಗೆ ಹೋಲಿಸಿದರೆ ಹೆಣ್ಣುಮಕ್ಕಳು ಜಾಸ್ತಿ ಕೇರಿಂಗ್ ಆಗಿದ್ದು ತಂದೆಯ ಚಿಕ್ಕಚಿಕ್ಕ ಆಸೆಗಳನ್ನು ಕೂಡ ಅತ್ಯಂತ ಮುತುವರ್ಜಿ ವಹಿಸಿ ಪೂರೈಸುತ್ತಾರೆ. ಅಪ್ಪಂದಿರಿಗೆ ಆಗಿ ಯಾವುದೇ ಕೆಲಸವನ್ನು ಆಗಲಿ ಅಥವಾ ಯಾವುದೇ ಸಹಾಯವನ್ನಾಗಲಿ ಮಾಡಲು ಮುಂದಿರುತ್ತಾರೆ. ಅಪ್ಪ ಹುಷಾರಿಲ್ಲದೆ ಇದ್ದಾಗ ಅವರ ಸೇವೆಯನ್ನು ಕೂಡ ಮಾಡುತ್ತಾರೆ. ಗಂಡು ಮಕ್ಕಳು ಕೂಡ ಅಪ್ಪಂದಿರ ಕುರಿತಂತೆ ಕೇರಿಂಗ್ ಆಗಿರುತ್ತಾರೆ ಆದರೆ ಅಪ್ಪಂದಿರ ಎದುರಿಗೆ ಮುಕ್ತವಾಗಿ ಇರಲು ಸಾಧ್ಯವಾಗುವುದಿಲ್ಲ. ಹೀಗಾಗಿ ಹೆಣ್ಣುಮಕ್ಕಳ ಸೇವೆ ಹಾಗೂ ಪ್ರೀತಿಯನ್ನುವುದು ಗಂಡು ಮಕ್ಕಳಿಗಿಂತ ಹೆಚ್ಚಾಗಿ ಅಪ್ಪಂದಿರಿಗೆ ಕಾಣುತ್ತದೆ.

ಎರಡನೆಯದಾಗಿ ಅಪ್ಪಂದಿರ ವಿಚಾರದಲ್ಲಿ ಹೆಣ್ಣುಮಕ್ಕಳು ಸಾಕಷ್ಟು ತಿಳುವಳಿಕೆ ಹೊಂದಿರುತ್ತಾರೆ ಅಪ್ಪಂದಿರ ಹೇಳುವ ಎಲ್ಲಾ ವಿಚಾರಗಳನ್ನು ಕೂಡ ಒಪ್ಪಿಕೊಳ್ಳುತ್ತಾರೆ ಅದೇ ಮಾದರಿಯಲ್ಲಿ ಗಂಡುಮಕ್ಕಳು ಮಾತ್ರ ಅಪ್ಪಂದಿರ ಹೆಚ್ಚಿನ ವಿಚಾರಗಳನ್ನು ಒಪ್ಪಿಕೊಳ್ಳುವುದಿಲ್ಲ. ಹೀಗಾಗಿಯೇ ಇಬ್ಬರು ಗಂಡಸರು ಮನೆಯಲ್ಲಿದ್ದಾಗ ಅವರಿಬ್ಬರ ನಡುವೆ ಈಗೋ ಸಮಸ್ಯೆ ಬರುತ್ತದೆ. ಹೀಗಾಗಿ ಮನೆಯಲ್ಲಿ ನಾನು ಹೇಳಿದ್ದೇ ನಡೆಯಬೇಕು ಎಂದು ಇಬ್ಬರೂ ಅಂದುಕೊಂಡಿರುತ್ತಾರೆ ಆದರೆ ಅದೇ ರೀತಿಯಲ್ಲಿ ನೋಡಬೇಕಾದರೆ ಹೆಣ್ಣು ಮಕ್ಕಳು ತಂದೆಯ ಮಾತಿಗೆ ಬದ್ಧರಾಗಿರುತ್ತಾರೆ.

ಮೂರನೆಯದಾಗಿ ಹೆಣ್ಣುಮಕ್ಕಳು ಸದಾಕಾಲ ತನ್ನ ತಂದೆಯ ಮರ್ಯಾದೆ ಹಾಗೂ ಘನತೆ-ಗೌರವಗಳ ಕುರಿತಂತೆ ನೂರಾರು ಬಾರಿ ಯೋಚಿಸುತ್ತಿರುತ್ತಾರೆ ಯಾವತ್ತೂ ಕೂಡ ಅವರು ತಲೆತಗ್ಗಿಸುವಂತಹ ಕೆಲಸ ಮಾಡಬಾರದು ಎಂದು ಅಂದುಕೊಂಡಿರುತ್ತಾರೆ. ಇತ್ತ ಗಂಡುಮಕ್ಕಳು ತಂದೆಯ ಘನತೆ-ಗೌರವ ಕ್ಕಿಂತ ಹೆಚ್ಚಾಗಿ ತಮ್ಮ ಕುರಿತಂತೆ ಹೆಚ್ಚಾಗಿ ಯೋಚಿಸುತ್ತಾರೆ ಹೀಗಾಗಿ ಯಾವುದೇ ಚೇಷ್ಟೆ ಮಾಡಬೇಕಾದರೂ ಕೂಡ ತಂದೆಯ ನೆನಪು ಅವರಿಗೆ ಬರುವುದಿಲ್ಲ.

ನಾಲ್ಕನೆಯದಾಗಿ ಮದುವೆ ನಂತರ ಕೂಡ ಹೆಣ್ಣುಮಕ್ಕಳು ತಮ್ಮ ತಂದೆಯ ಬೆಂಗಾವಲಾಗಿ ನಿಲ್ಲುತ್ತಾರೆ ಅದೇ ರೀತಿ ನೋಡುವುದಾದರೆ ಗಂಡುಮಕ್ಕಳು ಮದುವೆಯಾದ ಮೇಲೆ ಹೆಂಡತಿಯ ದಾಸರಾಗುತ್ತಾರೆ ಎಂದು ಹೇಳಲಾಗುತ್ತದೆ. ಕೆಲವೊಮ್ಮೆ ಹೆಂಡತಿಯ ಮಾತನ್ನು ಕೇಳಿ ಮನೆಯಿಂದ ಕೂಡ ಹೊರಹೋಗುತ್ತಾರೆ. ಹೀಗಾಗಿ ವೃದ್ಧಾಪ್ಯದಲ್ಲಿ ತಂದೆಯರಿಗೆ ಇರುವ ಏಕೈಕ ಆಶಾಕಿರಣವೆಂದರೆ ಅವರ ಮಗಳು ಮಾತ್ರ. ಯಾಕೆಂದರೆ ಮಗಳು ಕೂಡ ಮದುವೆಯಾದಮೇಲೂ ಕೇವಲ ತಂದೆ ಕುರಿತಂತೆ ಯೋಚಿಸುತ್ತಿರುತ್ತಾಳೆ.

ಐದನೆಯದಾಗಿ ಹೆಣ್ಣು ಮಕ್ಕಳನ್ನು ಮನೆಯ ಲಕ್ಷ್ಮಿ ಎಂದು ಕರೆಯುತ್ತಾರೆ. ಇದೇ ರೀತಿ ನೋಡುವುದಾದರೆ ಗಂಡು ಮಕ್ಕಳಿಗೆ ಹೋಲಿಸಿದರೆ ಹೆಣ್ಣುಮಕ್ಕಳು ಸಾಕಷ್ಟು ಕಡಿಮೆ ಖರ್ಚು ಮಾಡುತ್ತಾರೆ. ಇತ್ತ ಗಂಡುಮಕ್ಕಳು ಮಾತ್ರ ಯಾವುದೇ ಅಗತ್ಯ ಕಾರಣವಿಲ್ಲದಿದ್ದರೂ ವಿನಾಕಾರಣ ಖರ್ಚು ಮಾಡುತ್ತಾರೆ. ಹೀಗಾಗಿ ಈ ಎಲ್ಲಾ ಕಾರಣಗಳಿಂದಾಗಿ ಹೆಣ್ಣುಮಕ್ಕಳು ಎಂದರೆ ತಂದೆಯರಿಗೆ ಸಾಕಷ್ಟು ಪ್ರೀತಿ ಹಾಗೂ ಭಾವನಾತ್ಮಕವಾಗಿ ಗಂಡು ಮಕ್ಕಳಿಗಿಂತ ಹತ್ತಿರವಾಗಿರುತ್ತಾರೆ.