ಎರಡನೇ ಟೆಸ್ಟ್ ನಲ್ಲಿ ಜಯಿಸಲು ದ್ರಾವಿಡ್ ಮಾಸ್ಟರ್ ಪ್ಲಾನ್, ಕಿಂಗ್ ಕೊಹ್ಲಿ ಜೊತೆ ಸೇರಿ ಬದಲಾವಣೆ ಮಾಡಲು ಮುಂದಾದ ದ್ರಾವಿಡ್. ಯಾರೆಲ್ಲ ಸ್ಥಾನ ಪಡೆಯಲಿದ್ದಾರೆ ಗೊತ್ತೇ??

ಎರಡನೇ ಟೆಸ್ಟ್ ನಲ್ಲಿ ಜಯಿಸಲು ದ್ರಾವಿಡ್ ಮಾಸ್ಟರ್ ಪ್ಲಾನ್, ಕಿಂಗ್ ಕೊಹ್ಲಿ ಜೊತೆ ಸೇರಿ ಬದಲಾವಣೆ ಮಾಡಲು ಮುಂದಾದ ದ್ರಾವಿಡ್. ಯಾರೆಲ್ಲ ಸ್ಥಾನ ಪಡೆಯಲಿದ್ದಾರೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಸೌತ್ ಆಫ್ರಿಕಾ ವಿರುದ್ದದ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಜಯಗಳಿಸಿದ ನಂತರ ಭಾರತ ತನ್ನ ಏರಡನೇ ಟೆಸ್ಟ್ ಪಂದ್ಯವನ್ನು ನಾಳೆಯಿಂದ ಜೋಹಾನ್ಸ್ ಬರ್ಗ್ ನ ವಾಂಡರರ್ಸ್ ನಲ್ಲಿ ಆಡಲಿದೆ. ಈ ಕ್ರೀಡಾಂಗಣದಲ್ಲಿ ಹಲವಾರು ಗೆಲುವುಗಳನ್ನ ಕಂಡಿರುವ ಭಾರತ ತಂಡ ಈ ಭಾರಿಯೂ ಜಯಿಸುವ ನೀರಿಕ್ಷೆ ಹೊಂದಿದೆ. ಆದರೆ ವಾಂಡರರ್ಸ್ ಪಿಚ್ ವೇಗಿಗಳಿಗೆ ಸಹಕರಿಸುವ ಕಾರಣ ಭಾರತ ತಂಡದಲ್ಲಿ ಒಂದೆರೆಡು ಬದಲಾವಣೆಗಳನ್ನು ನೀರಿಕ್ಷಿಸಬಹುದಾಗಿದೆ‌. ಕಳೆದ ಟೆಸ್ಟ್ ಆಡಿದ ತಂಡದಲ್ಲಿ ಇಬ್ಬರು ಸ್ಥಾನ ಕಳೆದುಕೊಳ್ಳುವುದು ಬಹುತೇಖ ಖಚಿತವಾಗಿದೆ.

ವಾಂಡರರ್ಸ್ ಪಿಚ್ ವೇಗದ ಬೌಲರ್ ಗಳಿಗೆ ನೆರವಾಗುವ ಕಾರಣ ವೇಗಿ ಶಾರ್ದೂಲ್ ಠಾಕೂರ್ ಬದಲು ವೇಗಿ ಉಮೇಶ್ ಯಾದವ್ ಗೆ ಸ್ಥಾನ ದೊರೆಯುವ ಸಾಧ್ಯತೆ ಇದೆ. ಶಾರ್ದೂಲ್ ಕಳೆದ ಪಂದ್ಯದಲ್ಲಿ ಉತ್ತಮ ಲಯದಲ್ಲಿ ಇರಲಿಲ್ಲ. ಮೇಲಾಗಿ ಬ್ಯಾಟಿಂಗ್ ನಲ್ಲಿಯೂ ಸಹ ಉತ್ತಮ ಕಾಣಿಕೆ ನೀಡಿರಲಿಲ್ಲ. ಹಾಗಾಗಿ ವೇಗ ಹಾಗೂ ಸ್ವಿಂಗ್ ಬೌಲಿಂಗ್ ನಲ್ಲಿ ಶಾರ್ದೂಲ್ ಗಿಂತ ಉತ್ತಮವಾಗಿರುವ ಉಮೇಶ್ ಯಾದವ್ ಆಡಿಸಲು ತಂಡದ ಮ್ಯಾನೇಜ್ ಮೆಂಟ್ ಚಿಂತಿಸುತ್ತಿದೆ. ಇನ್ನು ಮೊದಲ ಟೆಸ್ಟ್ ಪಂದ್ಯದಲ್ಲಿ ಆಡಿದ್ದ ಸ್ಪಿನ್ನರ್ ಆರ್.ಅಶ್ವಿನ್ ಗೆ ಪಿಚ್ ಸಹ ಸಹಕರಿಸಿರಲಿಲ್ಲ. ವಾಂಡರರ್ಸ್ ಪಿಚ್ ಸಹ ಸಹಕರಿಸುವುದು ಅನುಮಾನ.

ಹೀಗಾಗಿ ಆರ್.ಅಶ್ವಿನ್ ಬದಲು ಬ್ಯಾಟ್ಸಮನ್ ಹನುಮ ವಿಹಾರಿಗೆ ಚಾನ್ಸ್ ಸಾಧ್ಯತೆ ಹೆಚ್ಚಿದೆ. ಕಳೆದ ಭಾರಿಯ ಟೆಸ್ಟ್ ನಲ್ಲಿ ಅಶ್ವಿನ್ ಆಡಿದಾಗ ಇಲ್ಲಿ ಒಂದೇ ಒಂದು ವಿಕೇಟ್ ಪಡೆದಿರಲಿಲ್ಲ. ಹಾಗಾಗಿ ಬ್ಯಾಟಿಂಗ್ ವಿಭಾಗವನ್ನ ಗಟ್ಟಿಗೊಳಿಸಲು ಹನುಮ ವಿಹಾರಿ ಆಡಬಹುದು. ಇದರ ಜೊತೆ ಹನುಮ ವಿಹಾರಿ ಆಫ್ ಸ್ಪಿನ್ ಕೂಡ ಮಾಡುತ್ತಾರೆ. ಈ ಎರಡು ಬದಲಾವಣೆ ಹೊರತುಪಡಿಸಿದರೇ ಉಳಿದವರೆಲ್ಲರೂ ಸಹ ಎರಡನೇ ಟೆಸ್ಟ್ ಆಡುತ್ತಾರೆ. ಸಂಭಾವ್ಯ ತಂಡ ಇಂತಿದೆ – ಕೆ.ಎಲ್.ರಾಹುಲ್, ಮಯಾಂಕ್ ಅಗರವಾಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯಾ ರಹಾನೆ, ಹನುಮ ವಿಹಾರಿ, ರಿಷಭ್ ಪಂತ್, ಮಹಮದ್ ಶಮಿ, ಉಮೇಶ್ ಯಾದವ್, ಜಸಪ್ರಿತ್ ಬುಮ್ರಾ, ಮಹಮದ್ ಸಿರಾಜ್.