ಹೋಟೆಲ್ ನಲ್ಲಿ ಬಾಯಿ ಚಪ್ಪರಿಸಿ ತಿನ್ನುವ ವೆಜ್ ಕಡಾಯ್ ಅನ್ನು ಮನೆಯಲ್ಲಿಯೇ ಮಾಡಿ, ಅದು ಹೋಟೆಲ್ ಶೈಲಿಯಲ್ಲಿಯೇ. ಹೇಗೆ ಗೊತ್ತೇ??

ಹೋಟೆಲ್ ನಲ್ಲಿ ಬಾಯಿ ಚಪ್ಪರಿಸಿ ತಿನ್ನುವ ವೆಜ್ ಕಡಾಯ್ ಅನ್ನು ಮನೆಯಲ್ಲಿಯೇ ಮಾಡಿ, ಅದು ಹೋಟೆಲ್ ಶೈಲಿಯಲ್ಲಿಯೇ. ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ನಾನ್, ಅಥವಾ ರೋಟಿ ಜೊತೆ ಹೋಟೆಲ್ ಅಥವಾ ರೆಸ್ಟೋರೆಂಟ್ ಗಳಲ್ಲಿ ವೆಜ್ ಕಡಾಯ್ ಒಂದನ್ನು ಆರ್ಡರ್ ಮಾಡಿಯೇ ಬಿಡುತ್ತೇವೆ. ಅಷ್ಟು ರುಚಿಕರವಾದ ವೆಜ್ ಕಡಾಯ್ ನ್ನು ಮನೆಯಲ್ಲಿಯೇ ತಯಾರಿಸಿದರೆ ಹೇಗೆ? ಇಲ್ಲಿದೆ ನೋಡಿ ಸುಲಭವಾಗಿ ರುಚಿಕರವಾದ ವೆಜ್ ಕಡಾಯ್ ಮಾಡುವ ವಿಧಾನ.

ಬೇಕಾಗುವ ಪದಾರ್ಥಗಳು: ಕಡೈ ಮಸಾಲಾಗೆ: 2 ಟೀಸ್ಪೂನ್ ಕೊತ್ತಂಬರಿ ಬೀಜಗಳು, 1 ಟೀಸ್ಪೂನ್ ಜೀರಿಗೆ / ಜೀರಾ, ½ ಟೀಸ್ಪೂನ್ ಕರಿ ಮೆಣಸು, 3 ಒಣಗಿದ ಕೆಂಪು ಮೆಣಸಿನಕಾಯಿ. ತರಕಾರಿ ರೋಸ್ಟಿಂಗ್ ಗಾಗಿ: 3 ಟೀಸ್ಪೂನ್ ಎಣ್ಣೆ,1 ಆಲೂಗಡ್ಡೆ (ಕತ್ತರಿಸಿದ್ದು)1 ಕ್ಯಾರೆಟ್, 3 ಟೇಬಲ್ಸ್ಪೂನ್ ಬಟಾಣಿ,15 ಗೋಬಿ ಎಸಳು, 5 ಬೀನ್ಸ್ (ಕತ್ತರಿಸಿದ), ೨ ಕ್ಯಾಪ್ಸಿಕಂ, ಉಪ್ಪು ರುಚಿಗೆ, 10 ಪನೀರ್.

ಕರಿಗಾಗಿ:1 ಟೀಸ್ಪೂನ್ ಬೆಣ್ಣೆ,1 ಪಲಾವ್ ಎಲೆ, 1 ಟೀಸ್ಪೂನ್ ಕಸೂರಿ ಮೇಥಿ,1 ಟೀಸ್ಪೂನ್ ಜೀರಿಗೆ, 1 ಈರುಳ್ಳಿ,1 ಟೀಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್, ¼ ಟೀಸ್ಪೂನ್ ಅರಿಶಿನ, ½ ಟೀಸ್ಪೂನ್ ಕಾಶ್ಮೀರಿ ರೆಡ್ ಚಿಲ್ಲಿ ಪೌಡರ್, 1 ಕಪ್ ಟೊಮೆಟೊ ಪ್ಯೂರೀ, ½ ಟೀಸ್ಪೂನ್ ಉಪ್ಪು, ½ ಕಪ್ ನೀರು,2 ಟೇಬಲ್ಸ್ಪೂನ್ ಕೆನೆ, 2 ಟೇಬಲ್ಸ್ಪೂನ್ ಕೊತ್ತಂಬರಿ ಸೊಪ್ಪು ¼ ಟೀಸ್ಪೂನ್ ಗರಂ ಮಸಾಲಾ.

ಮಾಡುವ ವಿಧಾನ: ಮೊದಲಿಗೆ, ಒಂದು ತವಾದಲ್ಲಿ ಕೊತ್ತಂಬರಿ ಬೀಜ, ಜೀರಿಗೆ, ಕರಿ ಮೆಣಸು ಮತ್ತು ಒಣಗಿದ ಕೆಂಪು ಮೆಣಸಿನಕಾಯಿಯನ್ನು ಹುರಿದುಕೊಳ್ಳಿ. ಇದನ್ನು ಸ್ವಲ್ಪ ಆರಿದ ಮೇಲೆ ತರಿತರಿಯಾಗಿ ರುಬ್ಬಿಕೊಳ್ಳಿ. ಬಳಿಕ ಒಂದು ದೊಡ್ಡ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಅದಕ್ಕೆ ಕತ್ತರಿಸಿದ ಆಲೂಗಡ್ಡೆ, ಕ್ಯಾರೆಟ್ ಸೇರಿಸಿ 3 ನಿಮಿಷಗಳ ಕಾಲ ಹುರಿಯಿರಿ. ನಂತರ ಬಟಾಣಿ, ಹೂಕೋಸ್, ಬೀನ್ಸ್, ಕ್ಯಾಪ್ಸಿಕಮ್ ಹಾಕಿ ಉಪ್ಪುನ್ನು ಸೇರಿಸಿ ಬೇಯಿಸಿ. ಈಗ ಇದಕ್ಕೆ ಪನೀರ್ ಸೇರಿಸಿ ಮತ್ತು ಗೋಲ್ಡನ್ ಬ್ರೌನ್ ಆಗುವ ತನಕ ಹುರಿದುಕೊಳ್ಳಿ (ತರಕಾರಿಗಳು ಮ್ಯಾಶ್ ಆಗದಂತೆ ನೋಡಿಕೊಳ್ಳಿ).

ಈಗ ತರಕಾರಿಗಳನ್ನು ಪಕ್ಕಕ್ಕೆ ತೆಗೆದಿಟ್ಟು ಅದೇ ಬಾಣಲೆಯಲ್ಲಿ ಬೆಣ್ಣೆ ಬಿಸಿ ಮಾಡಿ, ಅದಕ್ಕೆ ಪಲಾವ್ ಎಲೆ, ಕಸೂರಿ ಮೇಥಿ ಜೀರಿಗೆಯನ್ನು ಹಾಕಿ. ಬಳಿಕ ಸಣ್ಣಗೆ ಹೆಚ್ಚಿದ ಈರುಳ್ಳಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ. ಈರುಳ್ಳಿ ಗೋಲ್ಡನ್ ಬ್ರೌನ್ ಆಗುವ ತನಕ ಹುರಿಯಿರಿ. ಇದಕ್ಕೀಗ ಅರಿಶಿನ ಮತ್ತು ಮೆಣಸಿನ ಹುಡಿ ಸೇರಿಸಿ. ಬಳಿಕ 1 ಕಪ್ ಟೊಮೆಟೊ ಪ್ಯೂರೀಯನ್ನು ಸೇರಿಸಿ ಚೆನ್ನಾಗಿ ಬೇಯಿಸಿ. ( ಟೊಮ್ಯಾಟೊ ಪ್ಯೂರೀ ತಯಾರಿಸಲು, 3 ಟೊಮೆಟೊಗಳನ್ನು ರುಬ್ಬಿಕೊಳ್ಳಿ).

ಈಗ ತಯಾರಿಸಿದ ಕಡೈ ಮಸಾಲಾ ಮತ್ತು ಸ್ವಲ್ಪಉಪ್ಪನ್ನು ಸೇರಿಸಿ. ಎಣ್ಣೆ ಬಿಡುವ್ವರೆಗೆ ಎಲ್ಲವನ್ನೂ ಬೇಯಿಸಿಕೊಳ್ಳಬೇಕು. ನಂತರ ಹುರಿದಿಟ್ಟುಕೊಂಡ ತರಕಾರಿಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಅಗತ್ಯವಿದ್ದರೆ ನೀರನ್ನು ಸೇರಿಸಬಹುದು. ಈಗ ಮುಚ್ಚಳ ಮುಚ್ಚಿ 5 ನಿಮಿಷಗಳ ಕಾಲ ಪುನಃ ಬೇಯಿಸಿ. ಕೊನೆಯಲ್ಲಿ ಕೆನೆ, ಕೊತ್ತಂಬರಿ ಸೊಪ್ಪು ಮತ್ತು ಗರಂ ಮಸಾಲಾ ಪುಡಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿದರೆ ವೆಜ್ ಕಡಾಯ್ ಸಿದ್ದ. ರೋಟಿ ಅಥವಾ ನಾನ್ ನೊಂದಿಗೆ ವೆಜ್ ಕಡೈ ಸವಿಯಲು ಸೂಪರ್ ಆಗಿರತ್ತೆ.