ಈ ಬಾರಿಯ ಐಪಿಎಲ್ ನಲ್ಲಿ ನಾಯಕರಾಗಿ ಬಡ್ತಿ ಪಡೆಯಬಹುದಾದ ಟಾಪ್ 5 ಆಟಗಾರರು ಯಾರ್ಯಾರು ಗೊತ್ತೇ?? ಯಾರಿಗೆ ಸಿಗಲಿದೆ ಅದೃಷ್ಟ??

ಈ ಬಾರಿಯ ಐಪಿಎಲ್ ನಲ್ಲಿ ನಾಯಕರಾಗಿ ಬಡ್ತಿ ಪಡೆಯಬಹುದಾದ ಟಾಪ್ 5 ಆಟಗಾರರು ಯಾರ್ಯಾರು ಗೊತ್ತೇ?? ಯಾರಿಗೆ ಸಿಗಲಿದೆ ಅದೃಷ್ಟ??

ನಮಸ್ಕಾರ ಸ್ನೇಹಿತರೇ ಐಪಿಎಲ್ – 2022 ಹಲವಾರು ಬದಲಾವಣೆಗಳಿಗೆ ಕಾರಣವಾಗುವುದಲ್ಲದೇ ಈ ಭಾರಿ ಹೊಸಮುಖಗಳಿಗೆ ಸಾಕಷ್ಟು ಅವಕಾಶ ನೀಡುತ್ತದೆ. ಅದಲ್ಲದೇ ಹೊಸ ತಂಡಗಳು ಬಂದ ಕಾರಣ, ಕೆಲವು ಆಟಗಾರರಿಗೆ ನಾಯಕತ್ವದ ಪಟ್ಟ ಒದಗಿ ಬಂದರೂ ಅಚ್ಚರಿಯಿಲ್ಲ. ಬನ್ನಿ ನಾಯಕ ಸ್ಥಾನವನ್ನ ನಿರ್ವಹಿಸಬಲ್ಲ ಟಾಪ್ – 5 ಆಟಗಾರರು ಯಾರು ಎಂದು ತಿಳಿಯೋಣ.

1.ಹಾರ್ದಿಕ್ ಪಾಂಡ್ಯ – ಮುಂಬೈ ಇಂಡಿಯನ್ಸ್ ತಂಡ ಹಾರ್ದಿಕ್ ರನ್ನ ರಿಟೇನ್ ಮಾಡಿಕೊಂಡಿಲ್ಲ. ಹಾಗಾಗಿ ಹಾರ್ದಿಕ್ ಬೇರೆ ತಂಡಗಳಿಗೆ ಹೋಗುವುದು ಪಕ್ಕಾ. ಹಾಗಾಗಿ ಹೊಸ ಫ್ರಾಂಚೈಸಿಗಳು ಹಾರ್ದಿಕ್ ಪಾಂಡ್ಯರನ್ನ ಖರೀದಿಸಿ ನಾಯಕತ್ವ ನೀಡಿದರೂ ನೀಡಬಹುದು.

2.ಬೆನ್ ಸ್ಟೋಕ್ಸ್ – ಇಂಗ್ಲೆಂಡ್ ತಂಡದ ಉಪನಾಯಕ ಹಾಗೂ ಆಲ್ ರೌಂಡರ್ ಈ ಭಾರಿ ಹರಾಜಿನಲ್ಲಿ ಉತ್ತಮ ಮೊತ್ತಕ್ಕೆ ಹರಾಜಾಗುವ ಸಾಧ್ಯತೆ ಇದೆ‌. ಆದರೇ ಫ್ರಾಂಚೈಸಿಗಳು ಕೇವಲ ಆಲ್ ರೌಂಡರ್ ದೃಷ್ಠಿಯಿಂದ ಮಾತ್ರವಲ್ಲದೇ ನಾಯಕತ್ವ ನೀಡಲು ಸಹ ಖರೀದಿಸಬಹುದು. ಹಾಗಾಗಿ ಬೆನ್ ಸ್ಟೋಕ್ಸ್ ಈ ಭಾರಿ ಯಾವುದಾದರೊಂದು ಐಪಿಎಲ್ ತಂಡದ ನಾಯಕನಾಗುವುದು ಪಕ್ಕಾ ಎಂದು ಹೇಳಬಹುದು.

3.ಶುಭಮಾನ್ ಗಿಲ್ – ಭಾರತ ಅಂಡರ್ 19 ತಂಡದ ನಾಯಕನಾಗಿದ್ದ ಶುಭಮಾನ್ ಗಿಲ್ ಕಳೆದ ಭಾರಿ ಕೆಕೆಆರ್ ತಂಡದ ಪರ ಆಡಿದ್ದರು. ಸದ್ಯ ಕೆಕೆಆರ್ ಅವರನ್ನ ರಿಟೇನ್ ಮಾಡದಿದ್ದರೂ, ಅವರ ಮೇಲೆ ಫ್ರಾಂಚೈಸಿಗಳು ಕಣ್ಣಿಟ್ಟಿರುವುದಂತು ಸುಳ್ಳಲ್ಲ. ಹೀಗಾಗಿ ಶುಭಮಾನ್ ಗಿಲ್ ಸಹ ನಾಯಕನಾಗುವ ಸಾಮರ್ಥ್ಯ ಹೊಂದಿದ್ದಾರೆ.

4.ರವೀಂದ್ರ ಜಡೇಜಾ – ಭಾರತ ತಂಡದ ಆಲ್ ರೌಂಡರ್ ರವೀಂದ್ರ ಜಡೇಜಾ ಚೆನ್ನೈ ತಂಡದ ಮೊದಲ ಆಟಗಾರನಾಗಿ ರಿಟೇನ್ ಆಗಿದ್ದಾರೆ. ಮುಂದಿನ ವರ್ಷದಿಂದ ಧೋನಿ ಎಲ್ಲಾ ಮಾದರಿಯ ಕ್ರಿಕೇಟ್ ಗೆ ನಿವೃತ್ತಿ ಹೇಳುವ ಸಾಧ್ಯತೆ ಇರುವ ಕಾರಣ ರವೀಂದ್ರ ಜಡೇಜಾ ಈ ವರ್ಷದಿಂದಲೇ ಚೆನ್ನೈ ತಂಡಕ್ಕೆ ನಾಯಕನನ್ನಾಗಿ ಘೋಷಿಸುವ ಸಾಧ್ಯತೆ ಹೆಚ್ಚಿದೆ.

5.ಮನೀಶ್ ಪಾಂಡೆ : ಕರ್ನಾಟಕ ರಣಜಿ ತಂಡದ ನಾಯಕ ಮನೀಶ್ ಪಾಂಡೆಯವರನ್ನ ಸದ್ಯ ಎಸ್.ಆರ್.ಹೆಚ್ ತಂಡ ರಿಟೇನ್ ಮಾಡಿಕೊಂಡಿಲ್ಲ‌. ವಿರಾಟ್ ಕೊಹ್ಲಿ ರಾಜೀನಾಮೆಯಿಂದ ತೆರವಾಗಿರುವ ಆರ್.ಸಿ.ಬಿ ತಂಡದ ನಾಯಕತ್ವವನ್ನ ಮನೀಶ್ ಪಾಂಡೆ ವಹಿಸಿಕೊಳ್ಳಬಹುದೆಂಬ ಮಾತುಗಳು ಕೇಳಿ ಬರುತ್ತಿವೆ. ಪಾಂಡೆಗೆ ನಾಯಕನಾಗಿ ಸಹ ಉತ್ತಮ ಅನುಭವ ಇದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.