ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಹೊಸ ವರ್ಷದ ಸಮಯದಲ್ಲಿ ಚಿನ್ನ ಹಾಗೂ ಬೆಳ್ಳಿ ಆಭರಣ ಪ್ರಿಯರಿಗೆ ಸಿಹಿ ಸುದ್ದಿ, ಕೈಗೆಟುಕುವ ದರದಲ್ಲಿ ಸಿಗುತ್ತಿದೆ. ಆದರೆ ಇದು ಊಡಿಕೆಗೆ ಸರಿಯಾದ ಸಮಯವೇ?

7

ನಮಸ್ಕಾರ ಸ್ನೇಹಿತರೇ ನಮ್ಮ ದೇಶದಲ್ಲಿ ಅತ್ಯಂತವಾಗಿ ಖರೀದಿಸಲು ಯೋಚಿಸುವ ಅಂಶವೆಂದರೆ ಅಥವಾ ವಸ್ತುವೆಂದರೆ ಅದು ಖಂಡಿತವಾಗಿಯೂ ಬೆಳ್ಳಿ ಅಥವಾ ಚಿನ್ನದ ವಸ್ತುಗಳೇ ಆಗಿರುತ್ತದೆ. ಯಾಕೆಂದರೆ ಅವುಗಳ ಬೆಲೆ ಯಾವಾಗ ಇರುತ್ತದೆ ಅಥವಾ ಯಾವಾಗ ತಿಳಿಯುತ್ತದೆ ಎಂಬುದನ್ನು ಲೆಕ್ಕಹಾಕಲು ಸಾಧ್ಯವಿರುವುದಿಲ್ಲ. ಆದರೂ ಕೂಡ ನಮ್ಮ ಭಾರತೀಯರ ಹಬ್ಬ ಹರಿದಿನಗಳು ಬಂತೆಂದರೆ ಸಾಕು ಚಿನ್ನಾಭರಣಗಳನ್ನು ಖರೀದಿಸುವ ಯೋಚನೆ ಮಾಡುತ್ತಾರೆ. ಅವರು ಎಷ್ಟು ಚಿನ್ನಾಭರಣಗಳನ್ನು ಖರೀದಿಸಲು ಯೋಚನೆ ಮಾಡುತ್ತಾರೋ ಅಷ್ಟೇ ಅದರ ಬೆಲೆ ಕೂಡ ಇಳಿಮುಖವಾಗಿ ಸಾಗಲಿ ಎಂಬುದಾಗಿ ಆಶಿಸುತ್ತಾರೆ.

ಚಿನ್ನಾಭರಣಗಳನ್ನು ಖರೀದಿಸಲು ವರ್ಷಗಳ ಕಾಲ ಹಣವನ್ನು ಕೂಡಿಟ್ಟುಕೊಂಡು ಬರುತ್ತಾರೆ. ಯಾವಾಗ ಚಿನ್ನ ಹಾಗೂ ಬೆಳ್ಳಿಯ ದರಗಳು ಕಡಿಮೆ ಆಗುತ್ತದೆಯೋ ಆ ಸಮಯದಲ್ಲಿ ಕೂಡಿಟ್ಟ ಹಣದಿಂದ ಆಭರಣಗಳನ್ನು ಖರೀದಿಸುವ ಆಸೆ ಅವರಲ್ಲಿರುತ್ತದೆ. ಶ್ರೀಮಂತರಿಗೆ ಯಾವ ಕಾಲದಲ್ಲಿ ಕೂಡ ಆಭರಣಗಳನ್ನು ತೆಗೆದು ಕೊಳ್ಳಬಹುದು ಆದರೆ ಮಧ್ಯಮ ವರ್ಗದ ಜನರಿಗೆ ಹೀಗೆ ಉಳಿತಾಯ ದಿಂದಲೇ ಚಿನ್ನಾಭರಣಗಳನ್ನು ಕೊಳ್ಳುವುದಕ್ಕೆ ಸಾಧ್ಯ. ಇಂದಿನ ವಿಚಾರದಲ್ಲಿ ನಾವು ಯಾರೆಲ್ಲ ಚಿನ್ನಾಭರಣಗಳನ್ನು ಹಾಗೂ ಬೆಳ್ಳಿಯ ಆಭರಣಗಳನ್ನು ಖರೀದಿಸಲು ಕನಸುಕಂಡಿದ್ದರು ಅವರಿಗೆ ಒಂದು ಶುಭ ಸುದ್ದಿಯನ್ನು ಹೇಳಲು ಹೊರಟಿದ್ದೇವೆ. ಹೌದು ಗೆಳೆಯರೇ ಹೊಸ ವರ್ಷದ ಪ್ರಾರಂಭದಲ್ಲೇ ಚಿನ್ನ ಹಾಗೂ ಬೆಳ್ಳಿಯ ದರದಲ್ಲಿ ಇಳಿಕೆ ಕಂಡುಬಂದಿದೆ. ಹಾಗಿದ್ದರೆ ಈಗ ಚಿನ್ನ ಹಾಗೂ ಬೆಳ್ಳಿಯ ದರ ಎಷ್ಟು ಎಂಬುದನ್ನು ನಾವು ನಿಮಗೆ ವಿವರವಾಗಿ ಹೇಳಲು ಹೊರಟಿದ್ದೇವೆ.

ರಾಜ್ಯದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರಕ್ಕೆ 44900 ರೂಪಾಯಿ ಹಾಗೂ 100 ಗ್ರಾಂ ಚಿನ್ನದ ದರಕ್ಕೆ 449000 ರೂಪಾಯಿ ಆಗಿದ್ದು 2500 ರೂಪಾಯಿ ಚಿನ್ನದ ದರದಲ್ಲಿ ಇಳಿಕೆಯಾಗಿದೆ. ಈ ಕಡೆ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 48900 ಆಗಿದ್ದು 100ಗ್ರಾಂ ಚಿನ್ನಕ್ಕೆ 489000 ರೂಪಾಯಿ ಆಗಿದೆ. ಅಂದರೆ ಇಲ್ಲಿ ಕೂಡ 2700 ರೂಪಾಯಿ ದರ ಕಡಿಮೆಯಾಗಿದೆ. ಇತ್ತಕಡೆ ಬೆಳ್ಳಿಗೆ ಕೂಡ ದರ ಕಡಿಮೆಯಾಗಿ ಕೆಜಿಗೆ 61600 ರೂಪಾಯಿ ಆಗಿದೆ. ಒಂದು ವೇಳೆ ಚಿನ್ನಾಭರಣ ಹಾಗೂ ಬೆಳ್ಳಿ ಆಭರಣಗಳನ್ನು ಖರೀದಿಸಲು ಇಷ್ಟಪಡುವವರು ಇದೇ ಪ್ರಶಸ್ತವಾದ ಸಮಯ ಆಗಿರುವುದರಿಂದ ತಪ್ಪದೆ ಖರಿಸಬಹುದಾಗಿದೆ.