ವಿಜಯ್ ಹಜಾರೆಯಲ್ಲಿ ಮಿಂಚಿ ಐಪಿಎಲ್ ಹರಾಜಿನಲ್ಲಿ ಕೋಟಿ ಕೋಟಿಗೆ ಸೇಲ್ ಆಗಲಿರುವ ಆಟಗಾರರು ಯಾರ್ಯಾರು ಗೊತ್ತೇ?? ಆರ್ಸಿಬಿ ಇವರಲ್ಲಿ ಯಾರನ್ನು ಖರೀದಿಸಬೇಕು?
ವಿಜಯ್ ಹಜಾರೆಯಲ್ಲಿ ಮಿಂಚಿ ಐಪಿಎಲ್ ಹರಾಜಿನಲ್ಲಿ ಕೋಟಿ ಕೋಟಿಗೆ ಸೇಲ್ ಆಗಲಿರುವ ಆಟಗಾರರು ಯಾರ್ಯಾರು ಗೊತ್ತೇ?? ಆರ್ಸಿಬಿ ಇವರಲ್ಲಿ ಯಾರನ್ನು ಖರೀದಿಸಬೇಕು?
ನಮಸ್ಕಾರ ಸ್ನೇಹಿತರೇ ವಿಜಯ್ ಹಜಾರೆ ಟ್ರೋಫಿ ಹಾಗೂ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಇವೆರೆಡೂ ಭಾರತಿಯ ಕ್ರಿಕೇಟ್ ನ ಅವಿಭಾಜ್ಯ ಅಂಗಗಳು. ಎಷ್ಟೋ ಕ್ರಿಕೇಟಿಗರು ದೇಶಿಯವಾಗಿ ಮಿಂಚುತ್ತಾರೆ. ಐಪಿಎಲ್ ಹರಾಜಿನಲ್ಲಿಯೂ ಸಹ ಫ್ರಾಂಚೈಸಿಗಳ ಗಮನ ಸೆಳೆಯುವಲ್ಲಿ ಈ ಟ್ರೋಫಿಗಳು ಪ್ರಮುಖ ಪಾತ್ರ ವಹಿಸುತ್ತೇವೆ. ಈ ಭಾರಿಯ ವಿಜಯ್ ಹಜಾರೆ ಹಾಗೂ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಮಿಂಚಿ, ಈ ಭಾರಿ ಐಪಿಎಲ್ ಹರಾಜಿನ ವೇಳೆಯಲ್ಲಿ ಈ ಐದು ಆಟಗಾರರು ಕೋಟಿ,ಕೋಟಿ ರೂಪಾಯಿಗೆ ಹರಾಜಾಗಬಹುದು ಎಂದು ಹೇಳಲಾಗಿದೆ. ಬನ್ನಿ ಆ ಟಾಪ್ -5 ಆಟಗಾರರು ಯಾರು ಎಂಬುದನ್ನ ತಿಳಿಯೋಣ ಬನ್ನಿ.
ಟಾಪ್ 5 – ಶಿವಂ ಮಾವಿ : ಅಂಡರ್ 19 ಪ್ರತಿಭೆ ಶಿವಂ ಮಾವಿ ಕಳೆದ ಭಾರಿ ಕೆಕೆಆರ್ ತಂಡ ಪ್ರತಿನಿಧಿಸಿ ಉತ್ತಮ ಬೌಲಿಂಗ್ ಮಾಡಿದ್ದರು. ಆದರೇ ಅವರನ್ನ ಕೆಕೆಆರ್ ತಂಡ ರಿಟೇನ್ ಮಾಡಿಲ್ಲ. ಇತ್ತಿಚೆಗೆ ನಡೆದ ವಿಜಯ್ ಹಜಾರೆ ಟ್ರೋಫಿಯಲ್ಲಿ ಉತ್ತರ ಪ್ರದೇಶದ ವಿರುದ್ದ ಆಡಿದ ಮಾವಿ 7 ಪಂದ್ಯಗಳಲ್ಲಿ 17 ವಿಕೇಟ್ ಪಡೆದು ಮಿಂಚಿದ್ದಾರೆ. ಈ ಭಾರಿಯ ಹರಾಜಿನಲ್ಲಿ ಮಾವಿ ಉತ್ತಮ ಮೊತ್ತಕ್ಕೆ ಸೇಲ್ ಆಗಬಹುದು.

ಟಾಪ್ 4: ಶಾರೂಖ್ ಖಾನ್ – ತಮಿಳುನಾಡಿನ ಪಿಂಚ್ ಹಿಟ್ಟರ್ ಶಾರೂಖ್ ಕಳೆದ ಭಾರಿ ಪಂಜಾಬ್ ಕಿಂಗ್ಸ್ ತಂಡದಲ್ಲಿ ಆಡಿದ್ದರು. ಈ ಸಯ್ಯದ್ ಮುಷ್ತಾಕ್ ಅಲಿ ಹಾಗೂ ವಿಜಯ್ ಹಜಾರೆ ಟ್ರೋಫಿ ಎರಡರಲ್ಲಿಯೂ ಶಾರೂಖ್ ಸ್ಟ್ರೈಕ್ ರೇಟ್ 200 ಪ್ಲಸ್ ಇದೆ ಹೀಗಾಗಿ ಟಿ 20 ಕ್ರಿಕೇಟ್ ಗೆ ಹೇಳಿ ಮಾಡಿಸದಂತಿರುವ ಶಾರೂಖ್ ಸಹ ಕೋಟಿಗಳಿಗೆ ಬಿಕರಿಯಾಗುವ ಸಾಧ್ಯತೆ ಇದೆ.

ಟಾಪ್ 3 – ವಾಶಿಂಗ್ಟನ್ ಸುಂದರ್ : ತಮಿಳುನಾಡಿನ ಆಲ್ ರೌಂಡರ್ ಕಳೆದ ಭಾರಿ ಆರ್ಸಿಬಿ ತಂಡದಲ್ಲಿದ್ದರು. ಸದ್ಯ ನಡೆದ ವಿಜಯ್ ಹಜಾರೆ ಟ್ರೋಫಿಯಲ್ಲಿ 8 ಪಂದ್ಯಗಳಲ್ಲಿ 16 ವಿಕೇಟ್ ಪಡೆದಿದ್ದಾರೆ. ಅವರ ಎಕಾನಮಿ ಕೂಡ ಬಹಳ ಕಡಿಮೆ. ಹಾಗಾಗಿ ಪವರ್ ಪ್ಲೇ ನಲ್ಲಿ ಬೌಲಿಂಗ್ ಮಾಡಲು ಫ್ರಾಂಚೈಸಿಗಳು ವಾಶಿಂಗ್ಟನ್ ಹಿಂದೆ ಬೀಳುವುದು ಪಕ್ಕಾ.
ಟಾಪ್ 2 – ಯುಜವೇಂದ್ರ ಚಾಹಲ್ : ಆರ್ಸಿಬಿಯ ಪ್ರಮುಖ ಸ್ಪಿನ್ನರ್ ಆಗಿದ್ದ ಚಾಹಲ್ ಈ ಭಾರಿ ತಂಡದಲ್ಲಿ ರಿಟೇನ್ ಆಗಿಲ್ಲ. ಟಿ 20 ಕ್ರಿಕೇಟ್ ನ ತಜ್ಞ ಬೌಲರ್ ಆಗಿರುವ ಚಾಹಲ್, ಇತ್ತಿಚೇಗೆ ಮುಕ್ತಾಯವಾದ ವಿಜಯ್ ಹಜಾರೆ ಟ್ರೋಫಿಯಲ್ಲಿ ಹರಿಯಾಣ ಪರ 5 ಪಂದ್ಯ ಆಡಿ 14 ವಿಕೇಟ್ ಕಬಳಿಸಿದ್ದಾರೆ. ಹಾಗಾಗಿ ಉತ್ತಮ ಫಾರ್ಮ್ ನಲ್ಲಿರುವ ಚಾಹಲ್ ಸಹ ಕೋಟಿವೀರರಾಗುವ ಸಾಧ್ಯತೆ ದಟ್ಟವಾಗಿದೆ.

ಟಾಪ್ 1 – ರಿಷಿ ಧವನ್ : ಚಾಂಪಿಯನ್ ಹಿಮಾಚಲ ಪ್ರದೇಶ ತಂಡದ ನಾಯಕ ರಿಷಿ ಧವನ್, ಈ ಭಾರಿಯ ವಿಜಯ್ ಹಜಾರೆ ಟ್ರೋಫಿಯಲ್ಲಿ ಒಟ್ಟು 8 ಪಂದ್ಯಗಳಿಂದ17 ವಿಕೇಟ್ ಕಬಳಿಸಿದ್ದು, ಒಟ್ಟು 458 ರನ್ ಗಳಿಸಿದ್ದಾರೆ. ಆಲ್ ರೌಂಡರ್ ಪ್ರದರ್ಶನದಿಂದ ಟೀಂ ಇಂಡಿಯಾದ ಕದ ತಟ್ಟುತ್ತಿರುವ ಧವನ್ ಗೆ ಈ ಭಾರಿ ಐಪಿಎಲ್ ನಲ್ಲಿ ಫ್ರಾಂಚೈಸಿಗಳು ಕೋಟಿ ಕೋಟಿ ಸುರಿಯುವ ಸಾಧ್ಯತೆ ನಿಚ್ಚಳವಾಗಿದೆ. ಆರ್ಸಿಬಿ ತಂಡ ಇವರಲ್ಲಿ ಯಾರ್ಯಾರನ್ನು ಖರೀದಿ ಮಾಡಬೇಕು ಎಂಬುದರ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.