ಬಹಿರಂಗವಾಯಿತು ಸ್ಪರ್ದಿಗಳ ಲಿಸ್ಟ್, ಕಲರ್ಸ್ ಕನ್ನಡ ಡ್ಯಾನ್ಸ್ ಚಾಂಪಿಯನ್ ಕಾರ್ಯಕ್ರಮದಲ್ಲಿ ಯಾರೆಲ್ಲ ಪಾಲ್ಗೊಳ್ಳುತ್ತಿದ್ದಾರೆ ಗೊತ್ತಾ??

ಬಹಿರಂಗವಾಯಿತು ಸ್ಪರ್ದಿಗಳ ಲಿಸ್ಟ್, ಕಲರ್ಸ್ ಕನ್ನಡ ಡ್ಯಾನ್ಸ್ ಚಾಂಪಿಯನ್ ಕಾರ್ಯಕ್ರಮದಲ್ಲಿ ಯಾರೆಲ್ಲ ಪಾಲ್ಗೊಳ್ಳುತ್ತಿದ್ದಾರೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಕನ್ನಡ ಕಿರುತೆರೆ ವಾಹಿನಿಯಲ್ಲಿ ಸ್ಪೆಷಲ್ ಪ್ರೋಗ್ರಾಂಗಳ ಹೊಳೆಯೇ ಹರಿಯುತ್ತಿದೆ. ದಾರವಾಹಿ ನಂತರದ ಸ್ಥಾನದಲ್ಲಿ ಪ್ರೇಕ್ಷಕರು ಇಂತಹ ವಿಶೇಷ ಕಾರ್ಯಕ್ರಮಗಳನ್ನು ನೋಡುವ ಸಾಕಷ್ಟು ಇಷ್ಟಪಡುತ್ತಾರೆ ಎನ್ನುವುದು ವಾಹಿನಿಯವರಿಗೆ ಕೂಡ ತಿಳಿದಿದೆ. ಇದಕ್ಕಾಗಿಯೇ ಸ್ಪರ್ಧೆಗೆ ಬಿದ್ದವರಂತೆ ಹೊಸ ಹೊಸ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲು ಪ್ರಾರಂಭಿಸಿದ್ದಾರೆ. ಇನ್ನು ಇಂದು ನಾವು ಮಾತನಾಡಲು ಹೊರಟಿರುವುದು ಅತಿಶೀಘ್ರದಲ್ಲೇ ಕಲರ್ಸ್ ಕನ್ನಡ ವಾಹಿನಿಯಲ್ಲಿ ಆರಂಭವಾಗಲಿರುವ ಡ್ಯಾನ್ಸ್ ಚಾಂಪಿಯನ್ ಕಾರ್ಯಕ್ರಮದ ಕುರಿತಂತೆ.

ಅತಿಶೀಘ್ರದಲ್ಲೇ ಕಲರ್ಸ್ ಕನ್ನಡ ವಾಹಿನಿಯಲ್ಲಿ ಡ್ಯಾನ್ಸ್ ಚಾಂಪಿಯನ್ ಕಾರ್ಯಕ್ರಮ ಪ್ರಾರಂಭವಾಗಲಿದ್ದು ನಮ್ಮ ಕನ್ನಡ ಚಿತ್ರರಂಗದ ಚಿನ್ನಾರಿ ಮುತ್ತ ಎಂದೇ ಖ್ಯಾತರಾಗಿರುವ ನಟ ವಿಜಯ್ ರಾಘವೇಂದ್ರ ರವರು ಈ ಕಾರ್ಯಕ್ರಮವನ್ನು ತೀರ್ಪುಗಾರರಾಗಿ ನಡೆಸಿಕೊಡಲಿದ್ದಾರೆ ಎಂಬುದಾಗಿ ಹಲವಾರು ದಿನಗಳ ಹಿಂದೆ ಸುದ್ದಿಗಳು ಹರಿದಾಡಿದ್ದವು. ಇವರ ಜೊತೆಗೆ ಮಯೂರಿ ರವರು ಕೂಡ ತೀರ್ಪುಗಾರರಾಗಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಕಿರುತೆರೆಯ ಅತ್ಯಂತ ಜನಪ್ರಿಯ ಹಾಗೂ ಸ್ಟಾರ್ ನಿರೂಪಕರಾಗಿರುವ ಅಕುಲ್ ಬಾಲಾಜಿ ಅವರು ಈ ಕಾರ್ಯಕ್ರಮವನ್ನು ನಿರೂಪಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಕಂಟೆಸ್ಟೆಂಟ್ ಆಗಿ ಯಾರು ಕಾಣಿಸಿಕೊಳ್ಳುತ್ತಾರೆ ಎಂಬುದರ ಕುರಿತಂತೆ ನಿಮಗೆಲ್ಲಾ ಸಾಕಷ್ಟು ಕುತೂಹಲ ಇದೆ ಅದನ್ನು ಕೂಡ ನಾವು ತಿಳಿಸಲು ಹೊರಟಿದ್ದೇವೆ.

ಈ ಕಾರ್ಯಕ್ರಮದಲ್ಲಿ ಕಂಟೆಸ್ಟೆಂಟ್ ಗಳಾಗಿ 14 ನಟಿಯರು ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದು ಇವರ ಜೊತೆಗೆ ಒಬ್ಬ ಕಾಮನ್ ಮ್ಯಾನ್ ಕೂಡ ಇಲಿದ್ದಾರಂತೆ. ಈಗಾಗಲೇ ಈ ಕಾರ್ಯಕ್ರಮದಲ್ಲಿ ಕಂಟೆಸ್ಟೆಂಟ್ ಆಗಿ ಯಾರೆಲ್ಲ ಕಾಣಿಸಿಕೊಳ್ಳಲಿದ್ದಾರೆ ಎಂಬ ಕುರಿತಂತೆ ಕೆಲವು ಮಂದಿಯ ಹೆಸರು ಕೇಳಿ ಬಂದಿದ್ದು ಅವರು ಯಾರು ಎಂಬುದನ್ನು ನಿಮಗೆ ಹೇಳಲು ಹೊರಟಿದ್ದೇವೆ. ಲೇಖನಿಯನ್ನು ತಪ್ಪದೆ ಕೊನೆಯವರೆಗೂ ಓದಿ.

ಮೊದಲಿಗೆ ಚಂದನ ಕಾಣಿಸಿಕೊಳ್ಳಲಿದ್ದಾರೆ. ಕನ್ನಡದ ಅತ್ಯಂತ ದೊಡ್ಡ ಹಾಗೂ ಶ್ರೀಮಂತ ರಿಯಾಲಿಟಿಶೋ ಆಗಿರುವ ಬಿಗ್ ಬಾಸ್ ನಲ್ಲಿ ಕಾಣಿಸಿಕೊಂಡು ಹಾಡು ಕರ್ನಾಟಕ ಸಿಂಗಿಂಗ್ ಕಾಂಪಿಟೇಷನ್ ನಲ್ಲಿ ಕೂಡ ಮಿಂಚಿ ಹೂಮಳೆ ಧಾರವಾಹಿಯ ಲಹರಿ ಪಾತ್ರದಲ್ಲಿ ಕೂಡ ಮಿನುಗಿ ಜನರ ಮನಗೆದ್ದಿರುವ ಚಂದನ ಈ ಕಾಂಪಿಟೇಷನ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಸುದ್ದಿ ಕೇಳಿಬರುತ್ತಿದೆ. ಈಗಾಗಲೇ ಚಂದನ ರವರು ಹಾಡು ಹಾಗೂ ನಟನೆಯಲ್ಲಿ ಸೈ ಎನಿಸಿಕೊಂಡಿದ್ದಾರೆ ಈಗ ಡ್ಯಾನ್ಸ್ ಚಾಂಪಿಯನ್ ಕಾರ್ಯಕ್ರಮದ ಮೂಲಕ ಡ್ಯಾನ್ಸ್ ಪ್ರತಿಭೆಯನ್ನು ಕೂಡ ಜನರಿಗೆ ತೋರಿಸಲು ಸಿದ್ಧರಾಗಿದ್ದಾರೆ. ಭರತನಾಟ್ಯ ಫ್ರೀಸ್ಟೈಲ್ ಸೇರಿದಂತೆ ಹಲವಾರು ವಿಧದ ಡ್ಯಾನ್ಸ್ ನಲ್ಲಿ ಈಗಾಗಲೆ ತರಬೇತಿಯನ್ನು ಪಡೆದಿದ್ದು ಅವರಿಗೆ ಈ ಕಾರ್ಯಕ್ರಮದಲ್ಲಿ ಜೋಡಿಯಾಗಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎಂಬ ಕುರಿತಂತೆ ಕುತೂಹಲ ಹೆಚ್ಚಿದೆ.

ನಂತರ ಇಶಿತಾ ರವರು ಕಾಣಿಸಿಕೊಳ್ಳುತ್ತಾರೆ. ಅಗ್ನಿಸಾಕ್ಷಿಯ ಮಾಯಾ ಪಾತ್ರದಲ್ಲಿ ಹಾಗೂ ರಾಜ-ರಾಣಿ ಶೋನಲ್ಲಿ ಎರಡನೇ ಸ್ಥಾನದಲ್ಲಿ ಇಶಿತ ಅವರು ಮಿಂಚಿದ್ದರು. ಇಶಿತಾ ಗೆ ಗುಡ ಡ್ಯಾನ್ಸ್ ಅಂದರೆ ಎಲ್ಲಿಲ್ಲದ ಪಂಚಪ್ರಾಣ ಆದರೆ ಡ್ಯಾನ್ಸ್ ಕಾಂಪಿಟೇಷನ್ನಲ್ಲಿ ಯಾರೊಂದಿಗೆ ಹೆಜ್ಜೆ ಹಾಕುತ್ತಾರೆ ಎಂಬುದನ್ನು ಕಾದುನೋಡಬೇಕಾಗಿದೆ. ನಟಿ ಅಮೃತಮೂರ್ತಿ ಕೂಡ ಡ್ಯಾನ್ಸ್ ಚಾಂಪಿಯನ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಕನ್ನಡತಿ ಧಾರಾವಾಹಿ ಯಲ್ಲಿ ಸುಚಿ ಪಾತ್ರವನ್ನು ನಿರ್ವಹಿಸುವ ಮೂಲಕ ಎಲ್ಲರ ಮನಗೆದ್ದಿರುವ ಇವರು ಬಾಲ್ಯದಿಂದಲೂ ಕೂಡ ಡ್ಯಾನ್ಸ್ ಅಂದರೆ ಸಾಕು ಇವರಿಗೆ ಇಷ್ಟ.

ಈ ಹಿಂದೆ ಪ್ರಸಾರವಾಗಿದ್ದ ಮನೆಮನೆ ಮೀನಾಕ್ಷಿ ಕಾರ್ಯಕ್ರಮದಲ್ಲಿ ಕೂಡ ಅಮೃತ ತನಗೆ ಡ್ಯಾನ್ಸ್ ಅಂದರೆ ಯಾಕೆ ಇಷ್ಟ ಎಂಬುದನ್ನು ವಿವರವಾಗಿ ಹೇಳಿದ್ದಾರೆ. ಇನ್ನೊಬ್ಬ ನಟಿಯಾಗಿರುವ ಐಶ್ವರ್ಯ ಶಿಂಡೋಗಿ ರವರು ಕೂಡ ಡ್ಯಾನ್ಸ್ ಚಾಂಪಿಯನ್ ಕಾರ್ಯಕ್ರಮದಲ್ಲಿ ಸ್ಪರ್ಧಾಳು ವಾಗಿ ಭಾಗವಹಿಸಲಿದ್ದಾರೆ. ಇನ್ನು ಯಾರೆಲ್ಲ ಭಾಗವಹಿಸುತ್ತಾರೆ ಎನ್ನುವ ಕುರಿತಂತೆ ಲಿಸ್ಟ್ ಹೊರಬರಬೇಕಾಗಿದೆ. ಡ್ಯಾನ್ಸ್ ಚಾಂಪಿಯನ್ ಕಾರ್ಯಕ್ರಮವನ್ನು ನೋಡಲು ಎಲ್ಲರೂ ಕೂಡ ಸಾಕಷ್ಟು ಕಾತುರರಾಗಿದ್ದರು ನೀವು ಈ ಕಾರ್ಯಕ್ರಮಕ್ಕಾಗಿ ಎಷ್ಟು ಕಾತುರರಾಗಿದ್ದೀರಿ ಎಂಬುದನ್ನು ಕಾಮೆಂಟ್ ಮಾಡುವ ಮೂಲಕ ಹಂಚಿ ಕೊಳ್ಳಿ.