ಪುನೀತ್ ಫ್ಯಾನ್ಸ್ ನಿಂದ ತಪ್ಪಿಸಿಕೊಳ್ಳಲು ರಶ್ಮಿಕಾ ಐಡಿಯಾ ನೋಡಿ ಶಾಕ್ ಆದ ಜನ, ಏನ್ ನಾಟಕ ಎಂದ ಫ್ಯಾನ್ಸ್. ರಶ್ಮಿಕಾ ಮಾಡಿದ್ದೇನು ಗೊತ್ತೇ??

ಪುನೀತ್ ಫ್ಯಾನ್ಸ್ ನಿಂದ ತಪ್ಪಿಸಿಕೊಳ್ಳಲು ರಶ್ಮಿಕಾ ಐಡಿಯಾ ನೋಡಿ ಶಾಕ್ ಆದ ಜನ, ಏನ್ ನಾಟಕ ಎಂದ ಫ್ಯಾನ್ಸ್. ರಶ್ಮಿಕಾ ಮಾಡಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ರಶ್ಮಿಕ ಮಂದಣ್ಣ ನವರು ನಿಮಗೆಲ್ಲರಿಗೂ ತಿಳಿದಿರುವಂತೆ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಪಾದಾರ್ಪಣೆ ಮಾಡಿ ಕರ್ನಾಟಕದ ಕೃಷ್ ಆಗಿದ್ದರು. ನಂತರ ಪರಭಾಷೆಗಳಲ್ಲಿ ನಟಿಸಿ ಬಹುಬೇಡಿಕೆಯ ನಟಿಯಾದ ಮೇಲೆ ನ್ಯಾಷನಲ್ ಕೃಷ್ ಆಗಿ ಕಾಣಿಸಿಕೊಂಡಿದ್ದಾರೆ.

ಈಗಾಗಲೇ ಭಾರತ ಚಿತ್ರರಂಗದ ಬಹುಬೇಡಿಕೆ ನಟಿಯಾಗಿರುವ ರಶ್ಮಿಕಾ ಮಂದಣ್ಣನ ಅವರು ಏನು ಮಾಡಿದರು ಕೂಡ ಅದು ದೊಡ್ಡದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಸುದ್ದಿ ಆಗುತ್ತದೆ. ಇನ್ನು ಕನ್ನಡದ ವಿಚಾರದಲ್ಲಿ ನಿರ್ಲಕ್ಷ್ಯ ತೋರಿ ಪ್ರತಿಬಾರಿ ಕೂಡ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ. ಇನ್ನು ಪುಷ್ಪ ಚಿತ್ರದ ಕನ್ನಡದ ವರ್ಷನ್ ನಲ್ಲಿ ವಾಯ್ಸ್ ಡಬ್ ಯಾಕೆ ಮಾಡಿಲ್ಲ ಎಂಬುದಕ್ಕೆ ಕೂಡ ಹಲವಾರು ಬಾರಿ ಮಾಧ್ಯಮ ಮಿತ್ರರಿಂದ ಟೀಕೆಗೆ ಒಳಗಾಗಿದ್ದರು. ಇನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಮರಣಹೊಂದಿದಾಗ ಪುನೀತ್ ರಾಜಕುಮಾರ್ ರವರ ಕುರಿತಂತೆ ಅಭಿಪ್ರಾಯ ಕೇಳಿದಾಗ ಕೂಡ ಪ್ರತಿಕ್ರಿಯಿಸಲು ರಶ್ಮಿಕ ಮಂದಣ್ಣ ನವರು ನಿರಾಕರಿಸಿದ್ದರು. ಇನ್ನು ಈ ಕುರಿತಂತೆ ಅಪ್ಪು ಅಭಿಮಾನಿಗಳಿಂದ ಹಾಗೂ ಕನ್ನಡಿಗರಿಂದ ಟೀಕೆಯ ಸುರಿಮಳೆ ಗಳು ಬರಲು ಪ್ರಾರಂಭವಾಗುತ್ತಿದ್ದದ್ದೇ ತಡ ರಶ್ಮಿಕ ಮಂದಣ್ಣ ಈಗ ಏನು ಮಾಡಿದ್ದಾರೆ ಗೊತ್ತಾ.

ಹೌದು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ರಶ್ಮಿಕ ಮಂದಣ್ಣ ನವರು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರೊಂದಿಗೆ ನಟಿಸಿರುವ ಅಂಜನಿಪುತ್ರ ಅವರ ಜೊತೆಗಿನ ಫೋಟೋ ಪೋಸ್ಟ್ ಮಾಡಿದ್ದು ಅದಕ್ಕೆ ಚಂದ ನನ್ನ ಹೆಂಡತಿ ಸಾಂಗ್ ಅನ್ನು ಕೂಡ ಹಾಕಿದ್ದಾರೆ. ಇದರ ಜೊತೆಗೆ ಹಾರ್ಟ್ ಸಿಂಬಲ್ ಅನ್ನು ಕೂಡ ಹಾಕಿದ್ದಾರೆ. ಇನ್ನು ಹಲವಾರು ದಿನಗಳ ನಂತರ ಅಪ್ಪು ಅವರ ನೆನಪು ಬಂತ ಎಂಬುದಾಗಿ ಕೂಡ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ರಶ್ಮಿಕ ಮಂದಣ್ಣ ನವರನ್ನು ಟ್ರೋಲ್ ಮಾಡುತ್ತಿದ್ದಾರೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಏನೆಂಬುದನ್ನು ತಪ್ಪದೆ ನಮ್ಮೊಂದಿಗೆ ಹಂಚಿಕೊಳ್ಳಿ.