ಮೊದಲ ವಾರದಲ್ಲಿಯೇ ಪ್ರೇಕ್ಷಕರಿಗೆ ಹತ್ತಿರವಾದ ಪುಟ್ಟಕ್ಕನ ಮಕ್ಕಳು, ದಾಖಲೆ ಟಿಆರ್ಪಿ ಪಡೆದು ಬೇರೆ ಧಾರಾವಾಹಿಗಳಿಗೆ ಶಾಕ್. ಎಷ್ಟನೇ ಸ್ಥಾನ ಗೊತ್ತೇ??

ಮೊದಲ ವಾರದಲ್ಲಿಯೇ ಪ್ರೇಕ್ಷಕರಿಗೆ ಹತ್ತಿರವಾದ ಪುಟ್ಟಕ್ಕನ ಮಕ್ಕಳು, ದಾಖಲೆ ಟಿಆರ್ಪಿ ಪಡೆದು ಬೇರೆ ಧಾರಾವಾಹಿಗಳಿಗೆ ಶಾಕ್. ಎಷ್ಟನೇ ಸ್ಥಾನ ಗೊತ್ತೇ??

ನಮಸ್ಕಾರ ಸ್ನೇಹಿತರೇ ಇತ್ತೀಚಿನ ವರ್ಷಗಳಲ್ಲಿ ಕನ್ನಡ ಕಿರುತೆರೆ ಲೋಕ ಎನ್ನುವುದು ಖಂಡಿತವಾಗಿ ಸಾಕಷ್ಟು ಮುಂದುವರೆದಿದೆ ಎನ್ನುವುದು ಪ್ರತಿಯೊಬ್ಬ ಕನ್ನಡಿಗರು ಕೂಡ ಹೆಮ್ಮೆಯಿಂದ ನೆಚ್ಚಿಕೊಳ್ಳಬೇಕಾದಂತಹ ವಿಷಯವಾಗಿದೆ. ಕ್ವಾಲಿಟಿ ಧಾರಾವಾಹಿಗಳನ್ನು ಕನ್ನಡ ಪ್ರೇಕ್ಷಕರಿಗೆ ಕಿರುತೆರೆಯ ವಾಹಿನಿಗಳು ಪ್ರಸಾರ ಮಾಡುತ್ತಿರುವುದು ಕನ್ನಡ ಪ್ರೇಕ್ಷಕರನ್ನು ಧಾರವಾಹಿಗಳಾದ ಆಕರ್ಷಿಸುವುದಕ್ಕೆ ಮೂಲ ಕಾರಣವಾಗಿದೆ. ಇನ್ನು ಕಿರುತೆರೆಯಲ್ಲಿ ಕೂಡ ಸಿನಿಮಾಗಳಿಗಿಂತ ಹೆಚ್ಚಾಗಿ ದಾರವಾಹಿಗಳು ಹೆಚ್ಚಿನ ಮಟ್ಟದ ಟಿ ಆರ್ ಪಿ ಯನ್ನು ಪಡೆದುಕೊಳ್ಳುತ್ತಿವೆ. ಇನ್ನು ಇಂದು ನಾವು ಮಾತನಾಡಲು ಹೊರಟಿರುವುದು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೊಸ ಧಾರವಾಹಿ ಪುಟ್ಟಕ್ಕನ ಮಕ್ಕಳು ಧಾರವಾಹಿ ಕುರಿತಂತೆ.

ಜೊತೆ ಜೊತೆಯಲಿ ಧಾರಾವಾಹಿಯನ್ನು ನಿರ್ದೇಶಿಸಿರುವ ಆರೂರು ಜಗದೀಶ್ ರವರು ನಿರ್ದೇಶಿಸಿ ನಿರ್ಮಿಸಿರುವ ಪುಟ್ಟಕ್ಕನ ಮಕ್ಕಳು ಧಾರವಾಹಿಯಲ್ಲಿ ಕಿರುತೆರೆಯಲ್ಲಿ ರೆಕಾರ್ಡ್ ಬ್ರೇಕಿಂಗ್ ಟಿ ಆರ್ ಪಿ ಯನ್ನು ಪಡೆಯುವ ಮೂಲಕ ದಾಖಲೆಯನ್ನು ಸೃಷ್ಟಿಸಿದೆ. ಇನ್ನು ಆರೂರು ಜಗದೀಶ್ ರವರು ಧಾರವಾಹಿಯ ಕಥೆ ಹಾಗೂ ಮುಖ್ಯ ಪಾತ್ರಕ್ಕಾಗಿ ಉಮಾಶ್ರೀ ಅವರನ್ನು ಆಯ್ಕೆ ಮಾಡುವುದರಿಂದ ಹಿಡಿದು ಎಲ್ಲಾ ಯೋಜನೆಗಳನ್ನು ಒಂದು ವರ್ಷದ ಹಿಂದೆ ಮಾಡಿ ಮುಗಿಸಿದ್ದರು. ತಿಂಗಳ ಹಿಂದೆ ಮುಹೂರ್ತ ಪೂಜೆ ಆರಂಭಿಸಿ ವಾರದ ಹಿಂದೆ ವಾಹಿನಿಯಲ್ಲಿ ಪ್ರಸಾರವನ್ನು ಕೂಡ ಪ್ರಾರಂಭಿಸಿದ್ದರು. ಈಗಾಗಲೇ ದಾರವಾಹಿ ದೊಡ್ಡಮಟ್ಟದಲ್ಲಿ ಪ್ರೇಕ್ಷಕರಿಂದ ಮೆಚ್ಚುಗೆಯನ್ನು ಪಡೆದುಕೊಂಡಿದೆ. ಇನ್ನು ಈ ದಾರವಾಹಿ ಮೊದಲ ವಾರದಲ್ಲಿ ಪಡೆದುಕೊಂಡಿರುವ ರೇಟಿಂಗ್ ಈಗ ಹೊರಬಂದಿದ್ದು ದಾಖಲೆಯನ್ನು ನಿರ್ಮಿಸಿದೆ.

ಎರಡು ವರ್ಷದ ಹಿಂದೆ ಪ್ರಾರಂಭವಾಗಿದೆ ಜೊತೆ ಜೊತೆಯಲಿ ಧಾರವಾಹಿ ಮೊದಲವಾರದಲ್ಲಿ 11.8 ರೇಟಿಂಗ್ ಪಡೆದಿತ್ತು. ಈಗ ಪುಟ್ಟಕ್ಕನ ಮಕ್ಕಳು ಧಾರವಾಹಿ ಬರೋಬ್ಬರಿ 13.5 ಅಂಕಗಳನ್ನು ಪಡೆದು ಎಲ್ಲ ದಾಖಲೆಗಳನ್ನು ಅಳಿಸಿಹಾಕಿದೆ ಹಾಗೂ ಈ ವಾರದ ಟಾಪ್ ಧಾರಾವಾಹಿಯಾಗಿ ಹೊರಹೊಮ್ಮಿದೆ. ಈ ಮೂಲಕ ನಿರ್ದೇಶಕ ಆರೂರು ಜಗದೀಶ್ ಅವರು ತಮ್ಮ ದಾಖಲೆಯನ್ನು ತಾವೇ ಮುರಿದಿದ್ದಾರೆ. ಇಷ್ಟು ಮಾತ್ರವಲ್ಲದೆ ಟಾಪ್ ಟಿಆರ್ ಪಿ ಗಳನ್ನು ಪಡೆದುಕೊಂಡಿರುವ ಧಾರವಾಹಿಗಳ ಪಟ್ಟಿ ಬಿಡುಗಡೆಯಾಗಿದ್ದು ಮೊದಲ 5 ಸ್ಥಾನಗಳನ್ನು ಜೀ ಕನ್ನಡ ವಾಹಿನಿಯ ಧಾರವಾಹಿಗಳು ಆಕ್ರಮಿಸಿಕೊಂಡಿದ್ದಾವೆ. ಈ ಮೂಲಕ ಜೀ ಕನ್ನಡ ವಾಹಿನಿ ಕನ್ನಡ ಚಿತ್ರರಂಗದ ಧಾರವಾಹಿಯ ಕ್ಷೇತ್ರದಲ್ಲಿ ತನ್ನ ಯಶಸ್ವಿ ಪಯಣವನ್ನು ಮುಂದುವರಿಸಿದೆ ಎಂದು ಹೇಳಬಹುದಾಗಿದೆ.